ಚಿಕ್ಕೋಡಿ:ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ದೇವಿ ವಿಗ್ರಹ ಕಣ್ಣುಬಿಟ್ಟಿರುವುದೇ ಭಾರಿ ಸುದ್ದಿಯಾಗಿದೆ. ಸಂತೂಬಾಯಿ ದೇವಸ್ಥಾನದ ದೇವಿ ರಾತ್ರೋರಾತ್ರಿ ಕಣ್ಣುಬಿಟ್ಟಿದ್ದು ಅದೆಷ್ಟು ಶರವೇಗದಲ್ಲಿ ಹರಡಿತ್ತು ಎಂದರೆ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕಪಕ್ಕದ ಊರಿನವರೂ ಈ ಪವಾಡವನ್ನು ನೋಡಲು ತಂಡೋಪತಂಡವಾಗಿ ಬರತೊಡಗಿದರು.
ಕರೊನಾ ತೊಲಗಿಸಲು ಈ ದೇವಿ ಕಣ್ಣು ಬಿಟ್ಟಿರುವುದಾಗಿ ಹೇಳಿದ್ದ ಅರ್ಚಕ, ಈ ದೇವಿಯನ್ನು ಪೂಜೆ ಮಾಡಿದರೆ ಕರೊನಾ ತೊಲಗುವುದಾಗಿ ಹೇಳಿದ್ದರು. ಆದ ಕಾರಣ ದೇವಿಗೆ ಭಾರಿ ಜೋರಾಗಿ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು. ಇನ್ನು ದೇವಿ ಕಣ್ಣುಬಿಟ್ಟ ವಿಷಯ ಮಾಧ್ಯಮಗಳಲ್ಲಿಯೂ ಪ್ರಸಾರವಾಯಿತು. ದೇವಿಯೇ ಕಣ್ಣು ಬಿಟ್ಟಳೋ ಅಥವಾ ಯಾರಾದರು ಕಣ್ಣು ಬಿಡಿಸಿದರೋ ಎಂಬುದು ಕೂಡ ಬಯಲಾಗಬೇಕಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವಿವರಣೆ ನೀಡಲಾಗಿತ್ತು.

ಈ ಪರಿಯಲ್ಲಿ ರಾತ್ರೋರಾತ್ರಿ ಫೇಮಸ್‌ ಆದ ದೇವಿ ಹಾಗೂ ಅದನ್ನು ನೋಡಲು ಬರುತ್ತಿರುವ ಜನ ಸಮೂಹದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಈ ಬಗ್ಗೆ ತಿಳಿಯಲೇಬೇಕೆಂದು ತನಿಖೆ ಆರಂಭಿಸಿದಾಗ ದೇವಿಯ ರಹಸ್ಯ ಬಯಲಾಗಿದೆ.
ಅದೇನೆಂದರೆ ಇಲ್ಲಿಯ ಅರ್ಚಕನೇ ಹೆಸರು ಮಾಡುವ ಹಾಗೂ ಹಣ ಗಳಿಸುವ ಉದ್ದೇಶದಿಂದ ದೇವಿಯ ಮೂರ್ತಿಗೆ ಕೃತಕ ಕಣ್ಣು ಜೋಡಿಸಿರುವುದು ತಿಳಿದಿದೆ. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್‌ ಅವರು, ಅರ್ಚಕನ್ನು ತರಾಟೆಗೆ ತೆಗೆದುಕೊಂಡಿದ್ದು, ದೇವಿಗೆ ಅಂಟಿಸಿದ್ದ ಕೃತಕ ಕಣ್ಣು ತೆಗೆಸಿದ್ದಾರೆ. ಇನ್ನುಮುಂದೆ ಇಂಥ ಕೃತ್ಯ ಎಸಗಿದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ದೇವಿ ಕಣ್ಣುಬಿಟ್ಟ ರಹಸ್ಯ ಬಹಿರಂಗಗೊಂಡಿದ್ದು, ಭಕ್ತ ಸಮೂಹದಲ್ಲಿ ನಿರಾಸೆಯಾಗಿದೆ.
ವರನಿಗೆ ಮದುವೆಯಾಗೋ ಅರ್ಜೆಂಟು: ಹಾರ ಬದಲಾಯಿಸುವಾಗ ಎಡವಟ್ಟು- ಮುಂದೇನಾಯ್ತು ನೋಡಿ…

ಡಿಎಲ್‌, ಆರ್‌ಸಿ ಡೇಟ್‌ ಬಾರ್‌ ಆಗಿದೆ ಎನ್ನೋ ಚಿಂತೆ ಬಿಡಿ: ಇನ್ನು ಮೂರು ತಿಂಗಳು ಆರಾಮಾಗಿರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
