ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಭಯಾನಕತೆ ಇದೀಗ ಬೆಳಕಿಗೆ ಬಂದಿದ್ದು, ಜನರು ಭಯಭೀತರಾಗುತ್ತಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಶವದ ಪಕ್ಕದಲ್ಲಿಯೇ ಸೋಂಕಿತರು ಮಲಗುವಂತಾದರೆ, ಅವರ ಸಂಬಂಧಿಕರೂ ಅಲ್ಲಿಯೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಇಲ್ಲಿ ಆಸ್ಪತ್ರೆಗೆ ಕರೊನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆ ಆಗುತ್ತಿರುವುದಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಶವ ಪಕ್ಕದಲ್ಲಿಯೇ ಇದ್ದರೂ ಅಲ್ಲಿಯೇ ಸೋಂಕಿತರು, ಸಂಬಂಧಿಕರು ಊಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪಿಪಿಇ ಕಿಟ್ ಧರಿಸದೇ ಸೋಂಕಿತರ ಸಂಪರ್ಕವನ್ನು ಸಂಬಂಧಿಕರು ಮಾಡುತ್ತಿದ್ದು, ಇದು ಕೂಡ ಅತ್ಯಂತ ಅಪಾಯಕಾರಿ ಎನ್ನಲಾಗಿದೆ.
ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರ ಶವದ ಪಕ್ಕದಲ್ಲಿಯೇ ಸೋಂಕಿತರು, ಅವರ ಸಂಬಂಧಿಕರು ಇರಬೇಕಾದ ಅನಿವಾರ್ಯತೆ ಎದುರಾಗಿದ್ದು, ಸೋಂಕು ಹರಡಲು ಆಸ್ಪತ್ರೆಯೇ ಹಾಟ್‌ಸ್ಪಾಟ್‌ ಆಗುತ್ತಿದೆಯೇ ಎಂಬ ಸಂದೇಹ ಮೂಡುತ್ತಿದೆ.pic.twitter.com/LpRXy788Xb
— Vijayavani (@VVani4U)May 31, 2021

ಸೋಂಕಿತರನ್ನು ಭೇಟಿ ಮಾಡಿ ನಂತರ ಸಂಬಂಧಿಕರು ಹೊರಗಡೆ ಓಡಾಟ ನಡೆಸುತ್ತಿದ್ದಾರೆ. 12 ದಿನ ಕಠಿಣ ಲಾಕ್ ಡೌನ್ ಮಾಡಿದರೂ ಚಿಕ್ಕಮಗಳೂರಿನಲ್ಲಿ ಕರೊನಾ ಸೋಂಕು ಕೊಂಚವೂ ಕಡಿಮೆಯಾಗದಿರುವುದಕ್ಕೆ ಇದೇ ಕಾರಣ ಎಂದು ಆರೋಪಿಸಲಾಗಿದೆ. ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಜನರು ಸಾಕಷ್ಟು ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ಸೋಂಕು ಏರುತ್ತಲೇ ಇರುವುದಕ್ಕೆ ಈ ಆಸ್ಪತ್ರೆಯ ವಾತಾವರಣ ಕಾರಣ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
‘ನಾನು ಶುದ್ಧ ಸಸ್ಯಾಹಾರಿನಪ್ಪಾ… ನನ್ನ ಹೆಸ್ರಲ್ಲಿ ಮಟನ್‌ ಷಾಪಾ? ತರಕಾರಿ ಇಡೋದಾದ್ರೆ ಹೆಲ್ಪ್‌ ಮಾಡ್ತೇನೆ ನೋಡಿ…’

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ: ಸೌದಿ ಅರೇಬಿಯಾದಿಂದ ಹೊರಟ ಸ್ಟ್ರಿಕ್ಟ್‌ ರೂಲ್ಸ್‌ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 9 =
Remember me
