ಚಿಕ್ಕಮಗಳೂರು:ಮದುವೆಯಾಗದಿದ್ದರೂ ಗರ್ಭಧರಿಸಿದ್ದ ಯುವತಿಯೊಬ್ಬಳಿಗೆ ಡೆಲಿವರಿ ಮಾಡಿಸಿ, ಆಕೆಗೆ ಏನೇನೋ ಸಬೂಬು ಹೇಳಿ ಕಳಿಸಿಕೊಟ್ಟು, ಮಗುವನ್ನು 50 ಸಾವಿರ ರೂಪಾಯಿಗೆ ವೈದ್ಯನೊಬ್ಬ ಮಾರಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಡಾ. ಬಾಲಕೃಷ್ಣ ಎಂಬುವವರ ಮೇಲೆ ಹೆಣ್ಣು ಮಗುವನ್ನ ಮಾರಾಟ ಮಾಡಿರುವ ಆರೋಪವಿದ್ದು, ಈ ಘಟನೆ ನಡೆದು ಎಂಟು ತಿಂಗಳ ನಂತರ ಬೆಳಕಿಗೆ ಬಂದಿದೆ.
ಗರ್ಭಧರಿಸಿದ್ದ ಅವಿವಾಹಿತೆ ತೀರ್ಥಹಳ್ಳಿಯವಳು. ಕಳೆದ ಮಾರ್ಚ್ 14ರಂದು ಹೆರಿಗೆ ನೋವು ಹೆಚ್ಚಿ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಡೆಲವರಿ ಮಾಡಿಸಿದ್ದ ಅಲ್ಲಿಯ ವೈದ್ಯ ಡಾ.ಬಾಲಕೃಷ್ಣ ಅವರಿಗೆ ಈಕೆಯ ಮದುವೆಯಾಗಿಲ್ಲ ಎಂದು ತಿಳಿದಿದೆ. ಆದ್ದರಿಂದ ಮದುವೆಯಾಗದ ಕಾರಣ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟುಹೋಗಬೇಕು ಎಂದಿದ್ದಾರೆ.
ಇದಕ್ಕೆ ಒಪ್ಪಿಕೊಂಡಿದ್ದಾಳೆ ಯುವತಿ. ಆಗ ವೈದ್ಯರು ಆಕೆಗೆ ಐದು ಸಾವಿರ ರೂಪಾಯಿ ನೀಡಿ ಸಾಗಹಾಕಿದ್ದಾರೆ. ಈ ನಡುವೆಯೇ ತಮಿಳುನಾಡಿನಿಂದ ಬಂದು ಶೃಂಗೇರಿಯಲ್ಲಿ ವಾಸವಿದ್ದ ಪ್ರೇಮಾ ಅವರಿಗೆ ಮಗು ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ಮಾರಾಟ ಮಾಡಿದ್ದಾರೆ.
ವಿಷಯ ಬೆಳಕಿಗೆ ಬಂದದ್ದೇ ಕುತೂಹಲ:ಈ ವಿಷಯ ಎಂಟು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಅದಕ್ಕೆ ಕಾರಣ, ಇದೇ ಯುವತಿ. ಮಗುವನ್ನು ಬಿಟ್ಟುಬಂದ ನಂತರ ತಪ್ಪಿತಸ್ಥ ಮನೋಭಾವದಿಂದ ಬಳಲುತ್ತಿದ್ದ ಯುವತಿ ಖಿನ್ನತೆ ಜಾರಿದ್ದಾಳೆ. ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡುತ್ತಿದ್ದಾಗ ಮಗು ಮಗು ಎಂದು ಕನವರಿಸುತ್ತಿದ್ದಳು.
ಸಂಶಯಗೊಂಡ ಅಲ್ಲಿಯ ವೈದ್ಯರು ವಿಷಯ ಕೇಳಿದ್ದಾರೆ. ಆಗಲೇ ಆಕೆ ಎಲ್ಲವನ್ನೂ ಬಾಯಿಬಿಟ್ಟಿದ್ದಾಳೆ. ಕೂಡಲೇ ವೈದ್ಯರು ಶಿವಮೊಗ್ಗದ ಮಕ್ಕಳ ಪಾಲನ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲಿಂದ ಚಿಕ್ಕಮಗಳೂರು ಅಧಿಕಾರಿಗಳ ಗಮನಕ್ಕೆ ಬಂದಿದೆ.
ವೈದ್ಯರನ್ನು ವಿಚಾರಿಸಿದಾಗ ಅವರು ತಮಗೆ ವಿಷಯವೇ ಗೊತ್ತಿಲ್ಲ ಎಂದಿದ್ದಾರೆ. ಪೊಲೀಸರು ಆಸ್ಪತ್ರೆಯ ರೆಜಿಸ್ಟರ್​ ಚೆಕ್​ ಮಾಡಿದ್ದಾರೆ. ಯುವತಿ ಹೇಳಿದ್ದ ದಿನದ ರಿಜಿಸ್ಟರ್​ ಚೆಕ್​ ಮಾಡಿದಾಗ ಅಲ್ಲಿ ಆಕೆಯ ಹೆಸರು ಇರಲಿಲ್ಲ. ಬದಲಿಗೆ ಶೃಂಗೇರಿಯ ಪ್ರೇಮಾ ಎಂಬುವವರು ಹೆಸರು ಇತ್ತು.
ತನಿಖೆ ಇನ್ನಷ್ಟು ಚುರುಕುಗೊಳಿಸಿ, ಪ್ರೇಮಾ ಅವರ ಬಗ್ಗೆ ವಿಚಾರಣೆ ಮಾಡಿದಾಗ ಅವರು ಗರ್ಭವತಿಯೇ ಆಗದಿರುವುದು ತಿಳಿದುಬಂತು. ಆದರೆ ಅವರ ಮನೆಯಲ್ಲಿ ಮಗುವಿತ್ತು. ನಂತರ ವಿಚಾರಣೆ ತೀವ್ರಗೊಳಿಸಿದಾಗ ಮಗುವನ್ನು ತಾವು 50 ಸಾವಿರ ರೂಪಾಯಿ ಕೊಟ್ಟು ಪಡೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.
ದತ್ತು ಕಾಯ್ದೆ ಅನ್ವಯ ಮಗುವನ್ನು ಮಾರಾಟ ಮಾಡದೇ, ವೈದ್ಯರು ಗುಟ್ಟಾಗಿ ಮಗು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ವೈದ್ಯ, ದಾದಿಯರು ಹಾಗೂ ಪ್ರೇಮಾ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ. ಮಗುವಿನ ಮಾರಾಟದ ಬಗ್ಗೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಮಗುವನ್ನು ವಾಪಸ್​ ಪಡೆದುಕೊಳ್ಳಲಾಗಿದ್ದು, ಅದನ್ನು ಚಿಕ್ಕಮಗಳೂರಿನ ಬಾಲಮಂದಿರಕ್ಕೆ ಬಿಡಲಾಗಿದೆ.
ಸದ್ಯ ಮಗುವಿನ ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಅಮ್ಮಾ ಗ್ಯಾಂಗ್​ರೇಪ್​ ಆಯ್ತು ಎಂದ್ಳು 14ರ ಬಾಲೆ: ಸತ್ಯ ಗೊತ್ತಾಗಿ ಮೂರ್ಛೆಹೋದ ಪಾಲಕರು!

ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಬಿಜೆಪಿ ನಾಯಕರಿಗೆ ವಂಚಿಸಲು ಯತ್ನಿಸಿ ಸಿಕ್ಕಿಬಿದ್ದ ಅಮಿತ್​ ಷಾ ‘ಸೋದರಳಿಯ’

ಹೆಲ್ಮೆಟ್​ ಹಾಕಿದ್ರೂ ಇನ್ಮುಂದೆ ಕಟ್ಟಬೇಕಾಗಬಹುದು ದಂಡ! ಏಕೆ ಗೊತ್ತಾ?

ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ- ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
