ಚಿಕ್ಕಮಗಳೂರು:ರಾತ್ರಿ ಮಲಗಿದ್ದಾಗ ಮೈಮೇಲೆ ಏನೋ ಹರಿದಂತಾಗಿ, ಏನೋ ಇರಬಹುದು ಎಂದು ಸುಮ್ಮನಾಗಿ ಬೆಳಗ್ಗೆ ನೋಡಿದಾಗ ಮನೆಯಲ್ಲಿಯೇ ಕಾಳಿಂಗ ಸರ್ಪ ಇದ್ದರೆ ಏನಾಗಬೇಡ?
ನೆನೆಸಿಕೊಂಡರೂ ಮೈಯೆಲ್ಲಾ ಝುಂ ಎನ್ನುವ ಅನುಭವ ಆಗುತ್ತದೆಯಲ್ಲವೆ? ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ನಡೆದಿದೆ. ಅದೂ ನಮ್ಮ ಕರ್ನಾಟಕದಲ್ಲಿಯೇ!
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿಯಲ್ಲಿ ಈ ಬೆಚ್ಚಿಬೀಳುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಯಂಬಳ್ಳಿ ಗ್ರಾಮದ ಸಂತೋಷ್ ಎಂಬುವವರ ಮನೆಯಲ್ಲಿ ನಾಗ ಎಂಬುವವರು ನಿನ್ನೆ ರಾತ್ರಿ ಮನೆಯ ಜಗುಲಿಯ ಮೇಲೆ ಮಲಗಿದ್ದರು. ರಾತ್ರಿ ಸುಮಾರು 9.30ರ ವೇಳೆ ಮೈಮೇಲೆ ಏನೋ ಹರಿದಂತಾಗಿದೆ.

ಆ ಕ್ಷಣದಲ್ಲಿ ಅವರು ಕಣ್ಣುಬಿಟ್ಟು ನೋಡಿದಾಗ ಏನೂ ಕಾಣಿಸಲಿಲ್ಲ. ಆದರೆ ಭಾರಿ ಗಾತ್ರದ ವಸ್ತುವೊಂದು ಹರಿದುಹೋಗಿದ್ದು ಅನುಭವಕ್ಕೆ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರು, ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ನಂತರ ಹೆದರಿದ ಮನೆಯವರು ಗಾಬರಿಯಿಂದ ಕತ್ತಲೆಯಲ್ಲಿ ಬ್ಯಾಟರಿ ಹಾಕಿ ಹುಡುಕಿದಾಗ ಮನೆಯ ಮೂಲೆಯಲ್ಲಿರುವ ರಟ್ಟಿನ ಬಾಕ್ಸ್ ಒಳಗೆ ಕಾಳಿಂಗ ಸರ್ಪ ಸೇರಿಕೊಂಡಿರುವುದು ಕಾಣಿಸಿದೆ.
ಇದನ್ನು ನೋಡಿ ಮನೆಯವರು ಬೆಚ್ಚಿಬೀಳೋದು ಬೇರೆ ಮಾತು ಬಿಡಿ. ಮೈಮೇಲೆ ಈ ಹಾವು ಹರಿದುಹೋಗಿರುವುದನ್ನು ತಿಳಿದು ನಾಗ ಅವರ ಸ್ಥಿತಿ ಹೇಗಾಗಿರಬೇಡ? ಆದರೆ ಅದೃಷ್ಟವಶಾತ್​ ಹಾವು ಇವರಿಗೆ ಏನೂ ಮಾಡಲಿಲ್ಲ. ನಂತರ ಶೃಂಗೇರಿಯ ಸ್ನೇಕ್ ಅರ್ಜುನ್ ಅವರಿಗೆ ಕರೆ ಮಾಡಿ ಹಾವನ್ನು ತೆಗೆದುಕೊಂಡು ಹೋಗಲಾಗಿದೆ.
ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​

VIDEO: ಬಾಲಾಕೋಟ್​ ಏರ್​ಸ್ಟ್ರೈಕ್​ ಸಾಕ್ಷಿ ಕೇಳಿದವರಿಗೆ ಪಾಕ್​ ನೀಡಿದೆ ಸ್ಫೋಟಕ ಮಾಹಿತಿ- ನೀವೂ ಕೇಳಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + 13 =
Remember me
