ಚಿಕ್ಕಮಗಳೂರು:ಮದುವೆಯೆನ್ನುವುದು ಸ್ವರ್ಗದಲ್ಲಿ ಆಗುತ್ತದೆ ಎನ್ನುತ್ತಾರೆ. ಕೆಲವೊಮ್ಮೆ ಭೂಮಿಯ ಮೇಲೆ ತಪ್ಪಾಗಿ ಜೋಡಿಯನ್ನು ಆಯ್ಕೆ ಮಾಡಿಕೊಂಡರೆ ವಿಧಿಯೇ ಅದನ್ನು ಸರಿಪಡಿಸುತ್ತದೆಯೇನೋ ಎನ್ನುವ ಸಂದೇಹಗಳು ಕಾಡುವುದು ಸಹಜ. ಅಂಥ ಒಂದು ಅಪರೂಪದ ವಿವಾಹಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಸಾಕ್ಷಿಯಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧು ಹಾಗೂ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ನವೀನ್‌ ಎನ್ನುವವರ ವಿವಾಹ ನಿಶ್ಚಯವಾಗಿತ್ತು. ಇದರ ಜತೆಯೇ ನವೀನ್‌ ಅವರ ಸಹೋದರ ಅಶೋಕ್‌ ಅವರ ವಿವಾಹವೂ ಇತ್ತು.
ಅಶೋಕ್‌ ಅವರ ವಿವಾಹ ಸುಗಮವಾಗಿ ನಡೆದಿದೆ. ಆದರೆ ಸಮಸ್ಯೆಯಾಗಿರುವುದು ಸಿಂಧು ಮತ್ತು ನವೀನ್‌ ವಿವಾಹದಲ್ಲಿ. ಇವರು ಹಿಂದಿನ ದಿನ ರಿಸೆಪ್ಷನ್‌ ಮಾಡಿಕೊಂಡಿದ್ದಾರೆ. ಆದರೆ ಈ ಮದುವೆಯ ವಿಷಯ ನವೀನ್ ಪ್ರೀತಿಸುತ್ತಿದ್ದ ಯುವತಿಗೆ ತಿಳಿದಿದೆ.
ಆಕೆ ಛತ್ರಕ್ಕೇ ಬಂದು ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ, ಮದುವೆ ನಿಲ್ಲಿಸುತ್ತೇನೆ ಎಂದು ಹೆದರಿಸಿದ್ದಾಳೆ. ಇದಕ್ಕೆ ಹೆದರಿದ ನವೀನ್‌ ಛತ್ರ ಬಿಟ್ಟು ಆಕೆಯ ಜತೆ ತೆರಳಿದ್ದಾನೆ. ಇಲ್ಲಿ ಮದುವೆ ನಿಂತಿದೆ. ವಧು ಮತ್ತು ಆಕೆಯ ಕುಟುಂಬದವರ ಕಂಗಾಲಾಗಿ ಹೋಗಿದ್ದಾರೆ.
ಆಗ ಹೀರೋ ಆಗಿ ಬಂದವರೇ ದೋರನಾಳು ಗ್ರಾಮದ ಪಕ್ಕದ ನಂದಿ ಗ್ರಾಮದ ಯುವಕ ಚಂದ್ರು. ಸಿಂಧುವನ್ನು ತಾವು ಮದುವೆಯಾಗುವುದಾಗಿ ಹೇಳಿದ ಅವರ ಮದುಮಗಳ ಕೈಹಿಡಿದ್ದಾರೆ. ಇವರು ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ.ಅತ್ತ ನಾಪತ್ತೆಯಾಗಿರುವ ವರನಿಗಾಗಿ ಹುಡುಕಾಟ ನಡೆದಿದೆ.
ನಿತ್ಯಭವಿಷ್ಯ|ಈ ರಾಶಿಯವರಿಗೆ ಬಹಳ ದಿನಗಳಿಂದಲೂ ತಲೆ ತಿನ್ನುತ್ತಿದ್ದ ದೊಡ್ಡ ವಿಚಾರವು ಇಂದು ಮಂಜಿನಂತೆ ಕರಗಲಿದೆ

ಪತ್ನಿಗೆ ಸುಖನೀಡಲು ಆಗುತ್ತಿಲ್ಲ- ಆಕೆಗೆ ನನ್ನ ಮೇಲೆ ಜುಗುಪ್ಸೆ ಬಂದುಬಿಟ್ಟಿದೆ; ಪರಿಹಾರ ಹೇಳಿ ಪ್ಲೀಸ್​..

‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
