ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆ ಹಾಗೂ ಭಾರಿ ಮಳೆಯಿಂದ ಉಂಟಾಗುವ ತೊಂದರೆ ನಿವಾರಣೆ, ಮುನ್ನೆಚ್ಚರಿಕೆ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಉದ್ದೇಶದಿಂದ ವಲಯವಾರು ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದರು.
ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ರಾಮಮೂರ್ತಿ ನಗರ, ನಾಗಪ್ಪ ಬಡಾವಣೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ಶುಕ್ರವಾರ ಖುದ್ದು ವೀಕ್ಷಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಚಿವರ ನೇತೃತ್ವದಲ್ಲಿ ಎಂಟು ವಲಯಗಳಿಗೆ ಟಾಸ್ಕ್ ಫೋರ್ಸ್ ರಚಿಸಿ ಇಂದೇ ಆದೇಶ ಹೊರಡಿಸಲಾಗುವುದು. ಆಯಾ ವಲಯದ ಸಂಸದ-ಶಾಸಕರು ಸದಸ್ಯರಾಗಿರುತ್ತಾರೆ. ಜಂಟಿ ಆಯುಕ್ತರು, ಇಂಜಿನಿಯರ್ ಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಈ ಕಾರ್ಯಪಡೆಗಳು ಕ್ಷಿಪ್ರವಾಗಿ ನಿರ್ವಹಿಸಲು ಬೇಕಾದ ಅಧಿಕಾರಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.|ತೆರವಿಗೆ ಕ್ರಮಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಕೆಲವೆಡೆ ಚರಂಡಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿರುವುದು ಗಮನಕ್ಕೆ ತಂದಿದ್ದು, ತೆರವುಗೊಳಿಸಲು ಸೂಚಿಸಿರುವೆ. ಸಮೀಕ್ಷೆಯ ನಂತರ ಒತ್ತುವರಿ ಪ್ರಮಾಣ, ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳು ಗುರುತಿಸಿ ತೆರವು ಮಾಡಲಿದ್ದಾರೆ.
ಪ್ರಗತಿಯಲ್ಲಿರುವ ವಿವಿಧ ಚರಂಡಿಗಳು, ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಗಳನ್ನು ತ್ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿರುವೆ ಎಂದ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಗರ ಪ್ರದಕ್ಷಿಣೆ ಮಾಡಲಿ, ಬೇಡ ಎಂದವರ್ಯಾರು ? ಎಂದು ಬೊಮ್ಮಾಯಿ‌ ಮರು ಪ್ರಶ್ನಿಸಿದರು.
ಬಿಡಿಎಗೆ ಛೀಮಾರಿಕೆರೆಗಳೆಂದು ಗುರುತಿಸಿ ಅಧಿಸೂಚನೆ ಹೊರಡಿಸಿದವುಗಳನ್ನು ವಸತಿ ಬಡಾವಣೆಗಳಾಗಿ ಪರಿವರ್ತಿಸಲು ಪ್ರಯತ್ನಿಸಿದ ಬಿಡಿಎಗೆ ಛೀಮಾರಿ ಹಾಕಿ ಸಂಬಂಧಿತ ನೋಟಿಫಿಕೇಷನ್ ಹಿಂಪಡೆಯಲು ಆದೇಶಿಸಿರುವೆ. 2006-07ರ ಪ್ರಸ್ತಾವನೆ ಮುಂದಿಟ್ಟುಕೊಂಡು ಬಿಡಿಎ ಈ ಪ್ರಯತ್ನಕ್ಕೆ ಕೈಹಾಕಿತ್ತು ಎಂದು ಸಿಎಂ ಬೊಮ್ಮಾಯಿ‌ ಕಿಡಿಕಾರಿದರು.
ಬೇಲ್​ ಸಿಕ್ಕರೂ ಮುಗಿಯಲಿಲ್ಲ ಲಾಲೂ ಗೋಳು: ಜೈಲಿನಿಂದ ಬರುತ್ತಿದ್ದಂತೆಯೇ ಸಿಬಿಐ ಕೊಟ್ಟಿತು ಭಾರಿ ಶಾಕ್​!

ನರ್ಸಿಂಗ್‌ನಲ್ಲಿ ಡಿಪ್ಲೊಮಾ ಆಗಿದೆಯೆ? ಬಿಎಸಿಎಲ್​ನಲ್ಲಿದೆ 20 ಹುದ್ದೆಗಳು- ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
