ಬೆಂಗಳೂರು:ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ಮಾಡಿರುವ ಆರೋಪಗಳನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಲು ಕಾಂಗ್ರೆಸ್ ನಿಶ್ಚಯಿಸಿದೆ.
ಈ ಸಂಬಂಧ ಬುಧವಾರ ತಡರಾತ್ರಿ ಪ್ರಮುಖ ನಾಯಕರು ಸಭೆ ನಡೆಸಿದ್ದು, ಮುಖ್ಯಮಂತ್ರಿಯವರನ್ನು ಕಟ್ಟಿಹಾಕಲು ಸಿಕ್ಕಿರುವ ಪ್ರಮುಖ ಅಸ್ತ್ರ ಎಂದು ಭಾವಿಸಿದ್ದಾರೆ.
ಈಶ್ವರಪ್ಪ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವ ಸಂಗತಿಗಳು ಸಾಕಷ್ಟು ಮಹತ್ವ ಹೊಂದಿವೆ, ಅಲ್ಲಿ ಪ್ರಸ್ತಾಪಿಸಿರುವ ಲಕ್ಷಣಗಳು ಕುರಿತು ಅವಲೋಕನ ನಡೆಸಿದ್ದು ಇದನ್ನು ತಾವು ಸಹ ಕಾನೂನಾತ್ಮಕವಾಗಿ ಸರ್ಕಾರವನ್ನು ಹಣಿಯಲು ಬಳಸಿಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಸಿದ್ದಾರೆ.
ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಸಂಪುಟದ ಹಿರಿಯ ಸದಸ್ಯರೊಬ್ಬರು ಮುಖ್ಯಮಂತ್ರಿ ಅವರ ಮೇಲೆ ಇಂಥದೊಂದು ಆರೋಪ ಮಾಡಿದ ಉದಾಹರಣೆಯಿಲ್ಲ. ಈ ವಿಷಯವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು ಸಭೆ ಕೂಡ ನಡೆಸಿದ್ದೇವೆ. ಇದನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಬೇಕೆಂಬ ಬಗ್ಗೆ ಶೀಘ್ರವೇ ನಿರ್ಧರಿಸುತ್ತೇವೆ ಎಂದರು.
ಈಶ್ವರಪ್ಪ ಅವರು ಪ್ರಸ್ತಾಪಿಸಿರುವ ಸೆಕ್ಷನ್ ಗಳನ್ನು ನೋಡಿ ನಮಗೆ ಆಶ್ಚರ್ಯವಾಗಿದೆ, ಇದರ ಬಗ್ಗೆ ನಾವು ಒಂದಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ಶೀಘ್ರವೇ ಇದಕ್ಕೊಂದು ತಾತ್ವಿಕ ಅಂತ್ಯ ನೀಡುತ್ತೇವೆ ಎಂದು ಹೇಳಿದರು.
ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಾವಿರದಿನ್ನೂರು ಕೋಟಿ ರೂಗಳನ್ನು ಶಾಸಕರಿಗೆ ಹಂಚಿಕೆ ಮಾಡಿದ್ದಾರೆ. ಇದು ನಿಯಮಬಾಹಿರ ಎಂಬುದು ಈಶ್ವರಪ್ಪ ಅವರ ದೂರಾಗಿದೆ. ದೂರನ್ನು ರಾಜ್ಯಪಾಲರು ಹಾಗೂ ಪಕ್ಷದ ಉಸ್ತುವಾರಿ, ಪ್ರಧಾನಿ, ಅಧ್ಯಕ್ಷರಿಗೂ ಸಹ ಸಲ್ಲಿಸಿದ್ದಾರೆ.
ಬಿಜೆಪಿ ಸಂಸದೆ, ನಟಿ ಕಿರಣ್​ ಖೇರ್ ಜನತೆ ಮುಂದೇಕೆ ಕಾಣಿಸಿಕೊಳ್ಳುತ್ತಿಲ್ಲ? ಪಕ್ಷ ನೀಡಿದೆ ನೋಡಿ ಈ ಉತ್ತರ…

ರಾಜಕೀಯ ಜೀವನದಲ್ಲಿ ಇದು ಈಶ್ವರಪ್ಪ ಮಾಡಿದ ಮೊದಲ ಒಳ್ಳೆ ಕೆಲಸವಂತೆ!

ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಉಯಿಲು ಬರೆದರೆ ಅದು ಮಾನ್ಯವಾಗುತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + seventeen =
Remember me
