ಬೆಂಗಳೂರು:ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ದಿನದಿಂದಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮೇಲೆ ಆರೋಪಗಳ, ಬಯ್ಗುಳಗಳ, ಟೀಕೆಗಳ ಸುರಿಮಳೆಯೇ ಆಗುತ್ತಿದೆ. ಈ ಕಾಯ್ದೆಯನ್ನು ರದ್ದುಮಾಡುವಂತೆ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದೂ ಆಗಿದೆ.
ಇದೀಗ ಯೋಗಿ ಆದಿತ್ಯನಾಥ ಅವರ ಮೇಲೆ ಗರಂ ಆಗಿರುವ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ , ಲವ್​ ಜಿಹಾದ್​ ಬಗ್ಗೆ ಮಾತನಾಡಲು ಯೋಗಿಯವ್ರಿಗೆ ಏನು ಅಧಿಕಾರ ಇದೇರಿ? ಅವ್ರು ಲವ್​ ಮಾಡಿದ್ದಾರಾ ಇಲ್ಲಾ ಮದ್ವೆಯಾಗಿದ್​ದಾರಾ? ಅವನಿಗೆ ಹೆಂಡತಿ, ಮಕ್ಕಳ ಬಗ್ಗೆ ಅರಿವಿದೆಯಾ? ಪ್ರೀತಿ, ಸಂಸಾರದ ಬಗ್ಗೆ ಏನೂ ಅನುಭವ ಇಲ್ಲದ ಅವರು ಲವ್ ಜಿಹಾದ್ ಬಗ್ಗೆ ಮಾತಾಡುತ್ತಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಮಾತನಾಡಿದ ಅವರು, ಲವ್​ ಜಿಹಾದ್ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ರಾಜ್ಯಕ್ಕೆ ಮತ್ತು ದೇಶಕ್ಕೆ ಏನಾದರೂ ಒಳಿತು ಮಾಡಬೇಕೆಂದು ಹೋಗುತ್ತಿದ್ದೇನೆ. ಲಕ್ಷಾಂತರ ರೈತರು ಚಳಿ-ಗಾಳಿ ಲೆಕ್ಕಿಸದೇ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಅದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಇದನ್ನೆಲ್ಲಾ ತಡೆಯುವ ಪ್ರಯತ್ನ ಮಾಡುತ್ತೇನೆ ಎಂದರು.
ದೇವರ ಅನುಗ್ರಹದಿಂದ ನಾನು ಯಾವುದೇ ಕಾರ್ಯಕ್ಕೆ ಕೈ ಹಾಕಿದರೂ ಇದುವರೆಗೆ ಫೇಲ್​ ಅಂತ ಆದದ್ದೇ ಇಲ್ಲ. ರಾಜಕಾರಣದಲ್ಲಿ ಏನೇನು ಆಗುತ್ತದೆ ಎಂದು ಹೇಳಿದ್ದೇನೋ ಎಲ್ಲವೂ ಆಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದೆ. ಅದು ನಿಜನೂ ಆಗಿದೆ. ನಾನು ಕಾಲಜ್ಞಾನ ಹೇಳುತ್ತಿಲ್ಲ, ನನಗೆ ದೇವರು ಒಂದಿಷ್ಟು ಜ್ಞಾನ ಕೊಟ್ಟಿದ್ದಾನೆ ಎಂದರು.
ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಿ ಎಂದು ಸುಪ್ರೀಂಗೆ ಮೊರೆ- ಕೋರ್ಟ್​ ಹೇಳಿದ್ದೇನು?

ಮಾಜಿ ಸಚಿವನಿಗಿಲ್ಲ ಬಿಡುಗಡೆಯ ಭಾಗ್ಯ: ಇಂದೂ ಸಿಗಲಿಲ್ಲ ಬೇಲ್​- ಜೈಲೇ ಗತಿ

ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fourteen =
Remember me
