ಕಲಬುರಗಿ:ಕುಟುಂಬ ರಾಜಕಾರಣ ಅಗತ್ಯವಾಗಿ ಬೇಕು, ಅದನ್ನು ಕಾಂಗ್ರೆಸ್ಸೂ ಮಾಡ್ತಿದೆ, ಜೆಡಿಎಸ್ಸೂ ಮಾಡ್ತಿದೆ. ಅದರಲ್ಲಿ ತಪ್ಪೇನಿಲ್ಲ. ಕುಟುಂಬ ರಾಜಕಾರಣವಿದ್ದಷ್ಟು ವಂಶ ವೃಕ್ಷ ಬೆಳೆಯುತ್ತದೆ ಎಂದು ಪ್ರತಿಪಾದಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಆಗುವುದಿಲ್ಲ. ಮೋದಿಯವರು ಮಕ್ಕಳು ಮಾಡದಿದ್ರೆ ನಮ್ಮ ತಪ್ಪಾ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಕಲಬುರಗಿಯಲ್ಲಿ ಮಾತನಾಡುತ್ತಿದ್ದ ಅವರು, ಕುಟುಂಬ ರಾಜಕಾರಣದಿಂದ ಪರಸ್ಪರ ಹಿರಿಯರಿಗೆ ಗೌರವ ಸಿಗುತ್ತದೆ. ಬಿಜೆಪಿ ಅವರಿಗೆ ಮೋದಿ ಅಭಿಮಾನವಿದ್ದರೆ ನಮಗೆ ದೇವೇಗೌಡ ಅಭಿಮಾನ. ಕುಟುಂಬ ರಾಜಕಾರಣದಿಂದ ಗೌರವ ಬೆಳೆಯುತ್ತದೆ. ಕಾಂಗ್ರೆಸ್‌ನಲ್ಲೂ ಕುಟುಂಬ ರಾಜಕಾರಣ ಇತ್ತು. ಇಂದಿರಾಗಾಂಧಿ ನಂತರ, ರಾಜೀವ್‌ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಧಿಕಾರಕ್ಕೆ ಬರಲಿಲ್ಲವೇ? ನಾವು ರೈತರ ಮಕ್ಕಳು, ರೈತರಂತೆ ಇದ್ದೇವೆ. ರೈತರು ಮಾರೋ ಕಾಳು ಬೇರೆ, ಬಿತ್ತನೆ ಬೀಜ ಬೇರೆ. ದೇವೇಗೌಡರು ಬಿತ್ತನೆ ಕಾಳು ಇದ್ದಂತೆ. ಮೋದಿ ಅವರಿಗೆ ಮಕ್ಕಳಿರದಿದ್ದರೆ ನಮ್ಮ ತಪ್ಪಾ? ಅವರಿಗೆ ಕುಟುಂಬ ಇಲ್ಲ. ನಮಗೆ ಇದೆ. ನಮ್ಮವರು ರಾಜಕೀಯಕ್ಕೆ ಬರುತ್ತಾರೆ, ತಪ್ಪೇನಿದೆ ಎಂದಿದ್ದಾರೆ.
ಅಜಾನ್ ಕುರಿತು ಶ್ರೀರಾಮಸೇನೆ ಹೋರಾಟದ ಬಗ್ಗೆ ಮಾತನಾಡಿದ ಇಬ್ರಾಹಿಂ, ಪ್ರಮೋದ್ ಮುತಾಲಿಕ್‌ ಅವರಿಗೆ ದೇವರು ಸದ್ಬುದ್ಧಿ ನೀಡಲಿ. ಶ್ರೀರಂಗಪಟ್ಟಣದಲ್ಲಿ ಗಲಾಟೆ ಮಾಡಲು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜನರು ಇದನ್ನು ನಂಬಬಾರದು. ಚುನಾವಣೆ ಸಮೀಪ ಬಂದಾಗ ಮತೀಯ ಗಲಭೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪಠ್ಯ ಬದಲಾವಣೆ ವಿಚಾರದಲ್ಲಿ ಬಸವಣ್ಣ, ಕುವೆಂಪು ಸೇರಿ ಕೆಲ ಶ್ರೇಷ್ಠ ವ್ಯಕ್ತಿಗಳ ಅಪಮಾನಗೈದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ಬೊಮ್ಮಾಯಿಯವರಿಗೆ ಹೇಳಿದ ಇಬ್ರಾಹಿಂ, ಬೊಮ್ಮಾಯಿ ಅವರೇ ಯಾಕೆ ಈ ತಪ್ಪು ಕೆಲಸ ಮಾಡುತ್ತಿದ್ದೀರಿ? ಬಸವ ಪರಂಪರೆಯಲ್ಲಿ ಹುಟ್ಟಿ ಯಾಕೆ ಈ ರೀತಿ ಅವಮಾನ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಮಸೀದಿಯಲ್ಲಿ ಶಿವಲಿಂಗ ಹುಡುಕೋದು ಬೇಡ ಅನ್ನೋ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾಗವತ್ ಅವರು ಹೇಳಿದ್ರೆ ಒಳ್ಳೆಯ ಮನಸ್ಸಿನಿಂದಲೇ ಹೇಳಿದ್ದಾರೆಂದು ಅಂದುಕೊಂಡಿದ್ದೇನೆ. ದಯವಿಟ್ಟು ಅವರು ಸರ್ಕಾರಕ್ಕೆ ಇದನ್ನು ಹೇಳಬೇಕು. ಕೇವಲ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಇನ್ನೂ ಆರ್​ಎಸ್​ಎಸ್​ನಲ್ಲಿ ಇದೀಗ ದೇಶಭಕ್ತಿ ಉಳಿದಿಲ್ಲ. ಆರ್​ಎಸ್​ಎಸ್​ ಸಿದ್ಧಾಂತ ಕೇಶವಕೃಪಾ ಸಿದ್ಧಾಂತ, ನಮ್ಮದು ಬಸವಕೃಪಾ ಐಡಿಯಾಲಜಿ ಎಂದರು.
ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್‌ನವರಿಗೆ ಕೈಮುಗಿದು ಕೇಳಿದ್ದೇವೆ ನಮಗೆ ಬೆಂಬಲಿಸಿ ಅಂತ. ಅಭ್ಯರ್ಥಿ ನಿಲ್ಲಿಸುವ ಮೊದಲೇ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಕೋಮವಾದಿ ಶಕ್ತಿ ಮಟ್ಟಹಾಕುವ ಇಚ್ಚೆ ಇದ್ದರೆ ನಮಗೆ ಸಹಾಯ ಮಾಡಲಿ ಎಂದು ಹೇಳಿದರು.
ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋದ್ಯಾಕೆ? ಅವರೇನೂ ಹೊರಗಿನವರಲ್ಲ: ಸಂಚಲನ ಮೂಡಿಸಿದ ಭಾಗವತ್​ ಹೇಳಿಕೆ

ಶವಗಾರ ಸೇರಿದ್ದ ಯುವಕನೀತ: ಕೈಕಾಲುಗಳಿಗೆ ರಾಡ್‌ ಇದ್ದರೂ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಕೊಡಗಿನ ವೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
