ಬೆಂಗಳೂರು:ಭಾರತದ ಶಕ್ತಿಯನ್ನು ವಿಶ್ವಕ್ಕೆ ಸಾರಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2025ರೊಳಗೆ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದ್ದಾರೆ. ಇದರಲ್ಲಿ ಒಂದು ಟ್ರಿಲಿಯನ್ ಪಾಲು ಕರ್ನಾಟಕದ್ದಾಗಿರಬೇಕು ಎಂದು ರಾಜ್ಯ ಸರ್ಕಾರ ಬಯಸಿದ್ದು, ವಿದೇಶದಲ್ಲಿರುವ ಕನ್ನಡಿಗರು ಸಹಕರಿಸಿ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮನವಿ ಮಾಡಿದರು.
ನ್ಯೂಯಾರ್ಕ್​ನಲ್ಲಿ ಕನ್ನಡ ಕೂಟ ಭಾನುವಾರ ರಾತ್ರಿ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ವರ್ಲ್ಡ್ ಲಾರ್ಜೆಸ್ಟ್ ಇಂಡಿಯಾ ಪರೇಡ್​ಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭಾರತೀಯರು ಅದರಲ್ಲೂ ಕನ್ನಡಿಗರಿಗೆ ಅಮೆರಿಕ ಮತ್ತಿತರ ದೇಶಗಳಲ್ಲಿ ಬುದ್ಧಿವಂತರು, ವೈಜ್ಞಾನಿಕವಾಗಿ ಚಿಂತನೆ ನಡೆಸುವವರು, ತಂತ್ರಜ್ಞಾನದ ಮೇಲೆ ಹಿಡಿತ ಸಾಧಿಸಿದವರು ಎಂಬ ಗೌರವ, ಅಭಿಮಾನವಿದೆ ಎಂದರು.
ಈ ಘನತೆ-ಗೌರವ ಎತ್ತಿ ಹಿಡಿಯುವ ಬದುಕು ಮುಂದುವರಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳುವ ಜತೆಗೆ ಕರ್ನಾಟಕದಲ್ಲಿರುವ ನಿಮ್ಮ ಜ್ಞಾನ, ಸಂಸ್ಕಾರ ಹಾಗೂ ಸಂಬಂಧದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನದ ಹಬ್ಹಿಂದೆ ಭೂಮಿ ಇದ್ದವರು ಪ್ರಪಂಚ ಆಳಿದರು‌. ನಂತರ ಬಂಡವಾಳ ಉಳ್ಳವರು ವ್ಯಾಪಾರದ ಮೂಲಕ ತಮ್ಮ ಸಾಮ್ರಾಜ್ಯ ವಿಸ್ತರಿಸಿದರು‌. ಈಗ ಭೂಮಿ, ಬಂಡವಾಳ ಬೇಕಾಗಿಲ್ಲ, ಜ್ಞಾನವೊಂದಿದ್ದರೆ ಸಾಕು. ನೀವು ಹೊಂದಿರುವ ಜ್ಞಾನದ ಬಲದಿಂದ ತಂತ್ರಜ್ಞಾನ ದುಡಿಸಿಕೊಂಡು ದೂರದ ದೇಶದಲ್ಲಿ ನೆಲೆಯೂರಲು ಸಾಧ್ಯವಾಗಿದೆ.
ಕರ್ನಾಟಕ ಜಾಗತಿಕವಾಗಿ ತಂತ್ರಜ್ಞಾನದ ಹಬ್ ಆಗಿ ಗುರುತಿಸಿಕೊಂಡಿದೆ. ಭಾರತಕ್ಕೆ ಹರಿದುಬಂದಿರುವ ಒಟ್ಟು ವಿದೇಶಿ ನೇರ ಬಂಡವಾಳದಲ್ಲಿ ಶೇಕಡ 38ರಷ್ಟು ಕರ್ನಾಟಕದಲ್ಲಿ ಹೂಡಿಕೆಯಾಗಿದೆ‌. ಸ್ಟಾರ್ಟ್ ಅಪ್​ಗಳು, ಐಟಿ ಬಿಟಿ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ವಿಶ್ವದ ನಾಲ್ಕು ಡೆಕಾ ಕಾರ್ನ್​ಗಳಲ್ಲಿ ಮೂರು, 100 ಯೂನಿಕಾರ್ನ್​ಗಳಲ್ಲಿ 24 ಕರ್ನಾಟಕದಲ್ಲಿವೆ ಎಂದು ವಿವರಿಸಿದ ಅವರು, ಎಲ್ಲಕ್ಕಿಂತ ಮಿಗಿಲಾಗಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಹಿರಿಮೆ-ಗರಿಮೆಗೆ ಸಾಕ್ಷಿ ಎಂದು ಸಿಎಂ ಬೊಮ್ಮಾಯಿ‌ ಪ್ರಶಂಸಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸದವ ನಿಮಿತ್ತ ನ್ಯೂಯಾರ್ಕ್​ನಲ್ಲಿ ಬೃಹತ್​ ಇಂಡಿಯಾ ಡೇ ಪರೇಡ್

ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಮ್ಮೆ ಆಘಾತ: ಪಿಎಸ್​ಐ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಬಯಲು!
ಹನಿಟ್ರ್ಯಾಪ್ ಸುಳಿಯಲ್ಲಿ ಮಂಡ್ಯದ ಬಿಜೆಪಿ ಮುಖಂಡ? ಡ್ರಾಪ್​ ನಿಡೋ ನೆಪದಲ್ಲಿ ಲಾಡ್ಜ್​ಗೆ ಕರೆದೊಯ್ದು ವಿಡಿಯೋ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
