ಬೆಂಗಳೂರು:ಸದಾ ಬಿಗಿದ ಮೊಗ, ಗಂಟಿಕ್ಕಿದ ಹುಬ್ಬು. ಯಾವಾಗಲೋ ಒಮ್ಮೆ ನಸುನಗು. ಇಷ್ಟು ಹೇಳಿದರೆ ಸಾಕು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖದರ್ಶನವಾಗಿ ಬಿಡುತ್ತದೆ.
ಆದರೆ, ಇದಕ್ಕೆ ತದ್ವಿರುದ್ಧವಾಗಿ ಮನಸಾರೆ ನಕ್ಕು, ಉಳಿದವರನ್ನು ಸಂತಸದ ಅಲೆಯಲ್ಲಿ ತೇಲಿಸಿದ ಸಿಎಂ ಬಿಎಸ್ ವೈ ಬುಧವಾರ ಕಂಡರು.
ಅಷ್ಟಕ್ಕೂ ಇಂಥದ್ದೊಂದು ಅನಿರೀಕ್ಷಿತ ಬೆಳವಣಿಗೆಗೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಆ ಘಟನೆ…
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಇತ್ತು. ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಸಿಎಂ ಬಿಎಸ್ ವೈ ವಿಡಿಯೋ ಸಂವಾದ ನಡೆಸಿದರು. ಯಡಿಯೂರಪ್ಪ ಅವರೊಂದಿಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಾತನಾಡುವಾಗ ಮುಖ್ಯಮಂತ್ರಿಯ ಜತೆಗೆ ಮಾತನಾಡುತ್ತಿರುವುದನ್ನು ಊಹಿಸಿಕೊಳ್ಳಲೂ ಆಗದೇ, ‘ನಿಮ್ಮ ಜತೆ ನಾನು ಮಾತಾಡೋದಾ..!’ ಯಡಿಯೂರಪ್ಪ ಸಾಹೇಬ್ರೆ ನನಗೆ ಖುಷಿ ಆಗ್ತಿದೆ ಅಂದ್ರಂತೆ.‌ ಆಗ ಯಡಿಯೂರಪ್ಪ ಮನತುಂಬಿ ನಗುವ ಮೂಲಕ ಹೇಳಮ್ಮಾ ಏನ್ ಸಮಾಚಾರ ಅಂತಾ ಕೇಳಿದರು. ಆಗಲೇ ಈ ನಗುಮೊಗದ ಸಿಎಂ ಆಗಿ ಕಂಡರು. ಹೀಗೆ ಹೇಳುವ ಮೂಲಕ ಅಂಗನವಾಡಿ ಕಾರ್ಯಕರ್ತೆಗೆ ಮಾತನಾಡಲು ಧೈರ್ಯ ತುಂಬಿದರು ಎಂದು ಮೂಲಗಳು ತಿಳಿಸಿವೆ.
ಮನೆಬಾಗಿಲಿಗೆ ಆನಂದಯ್ಯನವರ ಆಯುರ್ವೇದ ಔಷಧ: ಟಿಟಿಡಿಯಿಂದ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ

VIDEO: ಅಂತಿಂಥ ಗಂಡ ಇವನಲ್ಲ… 28 ಪತ್ನಿಯರ ಸಮ್ಮುಖದಲ್ಲಿ 37ನೇ ಮದುವೆಯಾದ ‘ಪತಿದೇವ’!

ಆಮ್ಲಜನಕ ಸರಬರಾಜು ಮೇಲುಸ್ತುವಾರಿಗೆ ಜಿಲ್ಲೆಗಳಲ್ಲಿ ನೋಡಲ್‌ ಅಧಿಕಾರಿ: ಸಚಿವ ಜಗದೀಶ್‌ ಶೆಟ್ಟರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 6 =
Remember me
