ಬೆಂಗಳೂರು:ಈಗಾಗಲೇ ಹಲವಾರು ಶಾಲೆಗಳಲ್ಲಿ ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಶಿಕ್ಷಕರಿಗೂ ಮನೆಯಿಂದಲೇ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಹಲವು ಶಾಲೆಗಳ ಶಿಕ್ಷಕರು ಇದೀಗ ಶಾಲೆಗೆ ಬಂದು ಕಾರ್ಯ ಆರಂಭಿಸಿದ್ದಾರೆ.
ಈ ನಡುವೆಯೇ .ರಾಜ್ಯ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಅದೇನೆಂದರೆ ಕಾಲೇಜು ಭೋದಕರಿಗೆ ಇಂದಿನಿಂದ ಅಂದರೆ ನವೆಂಬರ್‌ 4ರಿಂದ ನವೆಂಬರ್‌ 11ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ತಿಳಿಸಿದೆ. ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?: 2020/21ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳ ಪ್ರಾರಂಭಕ್ಕೆ ಆಗತ್ಯವಿರುವ ಪೂರ್ವ ಸಿದ್ಧತೆಗಳಾಗಿ ಡಿಜಿಟಲ್‌ ಲರ್ನಿಂಗ್‌, ಆನ್‌ಲೈನ್‌/ ಆಫ್‌ಲೈನ್‌ ಟೀಚಿಂಗ್‌, ಸ್ಟಡಿ ಮೆಟಿರಿಯಲ್‌ ಪ್ರಿಪರೇಷನ್‌, ಮುಂತಾದವುಗಳ ಬಗ್ಗೆ ತಯಾರಿ ಮಾಡಿಕೊಳ್ಳಲು, ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳ/ ಎಲ್ಲಾ ವಿಶ್ವವಿದ್ಯಾಲಯಗಳ ಬೋಧಕರಿಗೆ ದಿನಾಂಕ 4.11.2020 ರಿಂದ ದಿನಾಂಕ 11.11.2020ರವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಮೋದನೆ ನೀಡಿದೆ.
ಇನ್ನು ಪ್ರಾಂಶುಪಾಲರು ಸೂಚಿಸಿದ ಬೋಧಕರು ಕಾಲೇಜಗಳಲ್ಲಿನ ತುರ್ತು ಕೆಲಸಗಳನ್ನು ನಿರ್ವಹಿಸಲು ಪರೀಕ್ಷಾ ಕಾರ್ಯಗಳಿದ್ದಲ್ಲಿ ಕಡ್ಡಾಯವಾಗಿ ಹಾಜರಾಗುವಂತೆಯೂ ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜೂಜಾಟಕ್ಕೆ ಪ್ರೇರಣೆ: ಹೈಕೋರ್ಟ್‌ ನೋಟಿಸ್‌ ಕುಣಿಕೆಯಲ್ಲಿ ಸಿನಿ, ಕ್ರಿಕೆಟ್‌ ತಾರೆಯರು
ಕೆಫೆ ಕಾಫಿ ಡೇ ಕೇಸ್‌: ಬಂಧನದ ಭೀತಿಯಲ್ಲಿ ಮಾಜಿ ಸಿಎಂ ಪುತ್ರಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 10 =
Remember me
