ಬೆಂಗಳೂರು:ಈ ವರ್ಷ ನಾವು ಸರ್ಕಾರ ನೀಡುವ ವೇಳಾಪಟ್ಟಿಗೆ ಕಾಯ್ದು ಕುಳಿತುಕೊಳ್ಳುವುದಿಲ್ಲ. ನಾವು ನಿಗದಿ ಮಾಡಿದ ದಿನಾಂಕದಲ್ಲೇ ಕೌನ್ಸೆಲಿಂಗ್ ನಡೆಸುತ್ತೇವೆಂದು ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ.ಕುಮಾರ್ ಹೇಳಿದ್ದಾರೆ.
ಪ್ರತಿ ವರ್ಷ ನಾವು ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಒಪ್ಪಂದ ಮಾಡಿಕೊಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಅನುಗುಣವಾಗಿ ನಾವು ಕೌನ್ಸೆಲಿಂಗ್ ದಿನಾಂಕ ಪ್ರಕಟಿಸುತ್ತಿದ್ದೆವು.
ಆದರೆ, ಕೆಇಎ ನಿಗದಿ ಪಡಿಸಿದ್ದ ದಿನಾಂಕದಂದು ಕೌನ್ಸೆಲಿಂಗ್ ನಡೆಸುತ್ತಿರಲಿಲ್ಲ. ಪ್ರತಿ ಬಾರಿ ಮುಂದೂಡಿಕೆ ಮಾಡಿಕೊಂಡು ಬರುತ್ತಿತ್ತು. ಇದರಿಂದ ನಮ್ಮ ಕೌನ್ಸೆಲಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದೇ ಕಾರಣದಿಂದ ಹೆಚ್ಚು ಸೀಟುಗಳು ಭರ್ತಿಯಾಗುತ್ತಿರಲಿಲ್ಲ. ಆದರೆ, ಈ ಬಾರಿ ನಾವು ಸರ್ಕಾರದ ವೇಳಾಪಟ್ಟಿಗೆ ಕಾಯ್ದುಕುಳಿತುಕೊಳ್ಳುವುದಿಲ್ಲ. ನಾವು ಕೌನ್ಸೆಲಿಂಗ್ ನಡೆಸುವ ವೇಳಾಪಟ್ಟಿಯನ್ನು ರೂಪಿಸಿ ಪ್ರಕಟಿಸುತ್ತೇವೆ. ಆ ಪ್ರಕಾರವಾಗಿಯೇ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಳೆದ ಬಾರಿ ಕೌನ್ಸೆಲಿಂಗ್ ಮಾಡುವುದು ವಿಳಂಬವಾದ ಕಾರಣ ಬಹುತೇಕರು ಕೆಇಎ ಮೂಲಕ ಸೀಟು ಪಡೆದುಕೊಂಡರು. ಇದರಿಂದಾಗಿ ಕಳೆದ ವರ್ಷ ಕೇವಲ 4,900 ಸೀಟುಗಳು ಮಾತ್ರ ಭರ್ತಿಯಾಗಿದ್ದವು. ಈ ಹಿಂದೆ 7-8 ಸಾವಿರ ಸೀಟುಗಳು ಭರ್ತಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾವು 3ರಿಂದ 4 ಬಾರಿ ಕೌನ್ಸೆಲಿಂಗ್ ನಡೆಸುತ್ತೇವೆ ಎಂದರು.
ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು

VIDEO: ಚಿನ್ನ ಬೇಡ.. ದುಡ್ಡು ಬೇಡ… ಒಂದು ಲಕ್ಷ ಮೌಲ್ಯದ ಪುಸ್ತಕ ಕೊಟ್ಟುಬಿಡಿ ಎಂದ ಪಾಕ್​ ವಧು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 1 =
Remember me
