ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಫೋನ್​, ಪರ್ಸ್​ಗಳ ಕಳ್ಳತನ ಜಾಸ್ತಿಯಾಗುತ್ತಿದೆ. ಹೀಗೆ ಕಳ್ಳತನವಾದಾಗಲೆಲ್ಲ, ಕಳುವಾಗಿರುವ ನೋವು ಒಂದೆಡೆಯಾದರೆ, ಪೊಲೀಸ್​ ಠಾಣೆಯನ್ನು ಹುಡುಕಿ ಅಲ್ಲಿ ವೇಟ್​ ಮಾಡಿ, ಕಂಪ್ಲೇಂಟ್​ ಕೊಟ್ಟು ಬರುವುದು ಇನ್ನೊಂದು ತಲೆನೋವಿನ ಕೆಲಸ.
ಆದರೆ ಇದೀಗ ಈ ಸಮಸ್ಯೆಗೆ ರಾಜ್ಯ ಪೊಲೀಸ್​ ಇಲಾಖೆ ಒಳ್ಳೆಯ ಪ್ಲ್ಯಾನ್​ ಕಂಡುಕೊಂಡಿದೆ. ಮನೆಯಲ್ಲಿಯೇ ಕೂತು ಒಂದೇ ಒಂದು ಕ್ಲಿಕ್​ ಮೂಲಕ ನಿಮ್ಮ ಕಂಪ್ಲೇಂಟನ್ನು ನೀಡುವ ಯೋಜನೆ ಇದು.
ಇದೇ ಇ-ಲಾಸ್ಟ್​ ಆ್ಯಪ್​. ಒಂದೇ ಒಂದು ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಂಡು, ನಿಮ್ಮ ದೂರುಗಳನ್ನು ಇನ್ನು ದಾಖಲು ಮಾಡಬಹುದಾಗಿದೆ ಎಂದು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಇ-ಲಾಸ್ಟ್ ರಿಪೋರ್ಟ್ ಎಂಬ ಆ್ಯಪ್​ ಬಿಡುಗಡೆ ಮಾಡಲಾಗಿದ್ದು, ಕಳೆದುಹೋದ ವಸ್ತುಗಳನ್ನು ವರದಿ ಮಾಡಲು ಸಹಾಯವಾಗುತ್ತದೆ. ಹೀಗಾಗಿ ನೀವು ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ದೂರು ದಾಖಲು ಮಾಡಿಕೊಳ್ಳಬಹುದು ಎಂದಿದ್ದಾರೆ ಸೂದ್​.
#DidYouKnow: You can report loss of phone, wallet, or documents through@BlrCityPolice's 'e-Lost Report' app.
Download now👉:https://t.co/dpe5P10mH0pic.twitter.com/pd3Tf6wZh1
— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr)September 21, 2020

ನೀವು ಮಾಡಬೇಕಾದದ್ದೇನು? ಇ-ಲಾಸ್ಟ್ ರಿಪೋರ್ಟ್ ಆಪ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಇಮೇಲ್ ಐಡಿ ಬಳಸಿ ಲಾಗಿನ್ ಆಗಿ. ನಂತರ, ಕಳೆದುಹೋದ ಬಗ್ಗೆ ದೂರು ದಾಖಲಿಸಬೇಕು. ಅಪ್ಲಿಕೇಶನ್ ಒಳಗೆ FAQ ವಿಭಾಗಕ್ಕೆ ಹೋದರೆ ಅಲ್ಲಿ ಮಾಹಿತಿ ಲಭ್ಯ. ದೂರು ದಾಖಲು ಮಾಡಿದ ನಂತರ ಅದರ ವಸ್ತುಸ್ಥಿತಿ ನೋಡಲು ‘Report found’ ಮೇಲೆ ಕ್ಲಿಕ್​ ಮಾಡಬೇಕು.
ಕಳೆದುಹೋದ ವಸ್ತುಗಳ ಮಾಹಿತಿ ನೀಡುವಾಗ ಮೊದಲು ನಿಮ್ಮ ಹೆಸರು ಮತ್ತು ವಿಳಾಸ, ಘಟನೆನಡೆದ ಸ್ಥಳ, ಘಟನೆನಡೆದ ದಿನಾಂಕ ಮತ್ತು ಸಮಯ, ಘಟನೆ ನಡೆದ ಸ್ಥಳದ ಪೊಲೀಸ್ ಠಾಣೆ ಅಥವಾ ಉಪ ವಿಭಾಗ ಮತ್ತು ಇತರ ವಿವರಗಳನ್ನು ನಮೂದಿಸಬೇಕು. ನಿಮಗೆ ಅಗತ್ಯ ಬಿದ್ದಲ್ಲಿ ನಿಮ್ಮ ಕಂಪ್ಲೇಟ್​ ಪ್ರತಿಯನ್ನು ಪಿಡಿಎಫ್ ಫಾರ್ಮ್ ಅನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್​ ಔಟ್​ ತೆಗೆದುಕೊಳ್ಳಬಹುದು.
ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ: ಕುಡುಕಿಯಿಂದ ಪೊಲೀಸ್​ ರಕ್ಷಣೆ ಕೋರಿದ ಪತಿರಾಯ!

ಕರೊನಾ ಕಾರಣ, ಮೊಬೈಲ್​ನಲ್ಲೇ ಆಡ್ಕೋ ಮಗನೇ ಅಂದಳು ತಾಯಿ- ಮಗ ಮಾಡಿದ್ದೇನು ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − twelve =
Remember me
