ಆನೇಕಲ್​:ಚರಂಡಿ ಕಾಮಗಾರಿ ಮಾಡುವ ನೆಪದಲ್ಲಿ ರಾಜಕೀಯ ದ್ವೇಷಕ್ಕಾಗಿ ಮನೆ ಕಾಂಪೌಂಡ್ ಹಾಗೂ ಮನೆಯೆದುರು ಹಾಕಿದ ಸಿಮೆಂಟ್ ರಸ್ತೆಯನ್ನು ಜೆಸಿಬಿ ಮೂಲಕ ಕಿತ್ತು ಹಾಕಿಸಿರುವ ಬೆಂಗಳೂರು ಹೊರವಲಯದ ಪಟ್ಟಣದಲ್ಲಿ ನಡೆದಿದೆ.
ಆನೇಕಲ್ ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 25 ಸೌಭಾಗ್ಯ ಕಲ್ಯಾಣ ಮಂಟಪದ ರಸ್ತೆಯಲ್ಲಿ ಪುರಸಭೆಯ ವತಿಯಿಂದ ಚರಂಡಿಯ ಸ್ವಚ್ಛತೆ ಮಾಡುವ ಕಾಮಗಾರಿ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯ ಬಳಿ ಹಾಕಿದ್ದ ಹಾಕಗಲ್ಲುಗಳನ್ನು ಕಿತ್ತುಹಾಕುವ ನೆಪದಲ್ಲಿ ಮನೆಯ ಕಾಂಪೌಂಡ್ ಗೆ ಹಾಗೂ ಪೈಪ್ಲೈನ್ ಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ.
ಬೆಳಗ್ಗೆ ಮನೆಯಲ್ಲಿ ಮಹಿಳೆಯೊಬ್ಬರ ಇದ್ದಾಗ ಪುರಸಭಾ ಸದಸ್ಯ ಕಾಮಗಾರಿಯನ್ನು ಪ್ರಾರಂಭಿಸಿದ್ದು ಇದೇ ಸಂದರ್ಭದಲ್ಲಿ ಕೇಳಲು ಹೋದ ಮನೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ, ಕಾಮಗಾರಿ ಪ್ರಾರಂಭಿಸಲು ನಮ್ಮ ಸಹಕಾರವೂ ಇತ್ತು ಒಂದು ಮಾತು ಹೇಳಿದರೆ ನಾವು ಎಲ್ಲಾ ರೀತಿಯಲ್ಲಿಯೂ ಕೆಲಸ ಮಾಡಲು ಸಹಾಯ ಮಾಡುತ್ತಿದ್ದೆವು. ಆದರೆ ಏಕಾಏಕಿ ಜೆಸಿಬಿ ತಂದು ಮನೆಯೆದುರು ಹಾಕಿದ್ದ ಸಿಮೆಂಟ್ ರಸ್ತೆ ಹಾಗೂ ಕಾಂಪೌಂಡಿಗೆ ಹಾನಿ ಮಾಡುವುದು ಎಷ್ಟು ಸರಿ ಈ ರೀತಿಯ ರಾಜಕೀಯ ದ್ವೇಷವನ್ನು ಯಾರು ಕೂಡ ಮಾಡಬಾರದು ಎಂದು ವಾರ್ಡಿನ ನಿವಾಸಿ ರಾಮಕೃಷ್ಣ ಹೇಳಿದ್ದಾರೆ.
ಹಿಂದೆ ಪುರಸಭಾ ಚುನಾವಣೆ ಸಮಯದಲ್ಲಿ ಮನೆಯ ಮಾಲೀಕ ಪ್ರಕಾಶ್ ರೆಡ್ಡಿ ಬಿಜೆಪಿಯ ಪರ ಕೆಲಸ ಮಾಡಿದ್ದರೂ ಇದನ್ನೇ ದ್ವೇಷವಾಗಿ ಇಟ್ಟುಕೊಂಡು ಪುರಸಭಾ ಸದಸ್ಯ ಕೃಷ್ಣ ಕಾಮಗಾರಿಯ ನೆಪದಲ್ಲಿ ಮನೆಗೆ ಹಾನಿ ಮಾಡಿದ್ದಾರೆ ಎಂದು ಮನೆಮಾಲೀಕ ಪ್ರಕಾಶ್ ರೆಡ್ಡಿ ಹೇಳಿದ್ದಾರೆ.
ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

ಸಾರ್ಥಕ ಮದುವೆ; ಮದುವೆಯ ದಿನದಂದು ದಲಿತ ಕುಟುಂಬಕ್ಕೆ ಬೆಳಕು ನೀಡಿದ ನವದಂಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + seven =
Remember me
