ಚಿಕ್ಕಬಳ್ಳಾಪುರ:ಇಲ್ಲಿಯ ಪ್ರಶಾಂತನಗರದಲ್ಲಿರುವ ಕಾಂಗ್ರೆಸ್‌ ಪಕ್ಷದ ಮುಖಂಡರಾಗಿರುವ ಮಮತಾಮೂರ್ತಿ ಅವರ ಪುತ್ರಿ ನಿಹಾರಿಕಾ ನಿನ್ನೆ ತಡ ರಾತ್ರಿ ಮೃತಪಟ್ಟಿರುವ ಘಟನೆ ನಡೆದಿದೆ.
19 ವರ್ಷದ ನಿಹಾರಿಕಾ ಅವರ ಸಾವಿನ ಕುರಿತಂತೆ ಹಲವಾರು ವದಂತಿಗಳು ಹುಟ್ಟಿಕೊಂಡಿವೆ. ಇದು ಆತ್ಮಹತ್ಯೆಯೋ ಕೊಲೆಯೋ ಅಥವಾ ಸಹಜ ಸಾವೋ ಎಂಬ ಬಗ್ಗೆ ಹಲವಾರು ಪ್ರಶ್ನೆಗಳು ಕಾಡತೊಡಗಿವೆ.
ನಿರಾರಿಕಾ ಅವರ ತಾಯಿ ಮಮತಾ ಮೂರ್ತಿಯವರು ಕಾಂಗ್ರೆಸ್‌ ಕಾರ್ಯಕರ್ತೆಯಾಗಿದ್ದಾರೆ. ತಂದೆ ವೆಂಕಟೇಶ್ ಮೂರ್ತಿ ಶಿಡ್ಲಘಟ್ಟ ತಾಲೂಕು ಆರೋಗ್ಯಾಧಿಕಾರಿ.
ಇದನ್ನೂ ಓದಿ:ಬಿಜೆಪಿ ಮುಖಂಡನ ಹತ್ಯೆಗೆ ಚೋಟಾ ಶಕೀಲ್​ ರೂಪಿಸಿದ್ದ ಸಂಚು ವಿಫಲಗೊಳಿಸಿದ ಎಟಿಎಸ್​; ಶೂಟರ್​ ಅರೆಸ್ಟ್​
ನಿಹಾರಿಕಾ ಈಚೆಗಷ್ಟೇ ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದ್ದು, ಸಿಇಟಿ ಪರೀಕ್ಷೆ ಕೂಡ ಬರೆದಿದ್ದಳು. ಈಗ ಏಕಾಏಕಿ ಮೃತಪಟ್ಟಿರುವ ಬಗ್ಗೆ ಕಾರಣ ಇನ್ನಷ್ಟೇ ಹೊರಬರಬೇಕಿದೆ. ನಿನ್ನೆ ತಡರಾತ್ರಿ ಘಟನೆ ಸಂಭವಿಸಿರುವ ಬೆನ್ನಲ್ಲೇ ಇಂದು ನಸುಕಿನಲ್ಲಿಯೇ ಮೃತದೇಹವನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಪೊಲೀಸರು ಮನೆಗೆ ಬರುವ ಮುನ್ನವೇ ಮೃತದೇಹ ಶಿಫ್ಟ್ ಮಾಡಿರುವ ಪೋಷಕರ ನಡೆ ಅನುಮಾನ ಹುಟ್ಟಿಸಿದೆ.
ನಿನ್ನೆ ರಾತ್ರಿ ನಿಹಾರಿಕಾ ಮತ್ತು ತಾಯಿ ಮಮತಾ ಮೂರ್ತಿಯವರ ನಡುವೆ ಜೋರಾಗಿ ಜಗಳ ನಡೆದಿತ್ತು ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.
ಹೀಗಾಗಿ ಇದು ಆತ್ಮಹತ್ಯೆಯೋ ಅಥವಾ ಇನ್ನೇನು ಎಂಬ ಬಗ್ಗೆ ಈಗಲೇ ಹೇಳುವುದು ಕಷ್ಟ ಎಂದಿದ್ದಾರೆ ಪೊಲೀಸರು. ಚಿಕ್ಕಬಳ್ಳಾಪುರ ಸರ್ಕಲ್‌ ಇನ್ಸ್‌ಪೆಕ್ಟರ್‌ ಪ್ರಶಾಂತ್ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಭಾರತದಲ್ಲಿ ಕ್ಯಾನ್ಸರ್‌ ಸ್ಥಿತಿಗತಿಯ ವರದಿ ಬಿಚ್ಚಿಟ್ಟ ಸಂಶೋಧಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + nine =
Remember me
