ಶಿವಮೊಗ್ಗ:ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಮಗ ಸುಹಾಸ್ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 31 ವರ್ಷ ವಯಸ್ಸಾಗಿತ್ತು.
ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದ ಸುಹಾಸ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮನೆಯ ಮಹಡಿಯಿಂದ ಇಳಿಯುವ ವೇಳೆ ಹೃದಯಾಘಾತದಿಂದಾಗಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನ ನಂಜಪ್ಪ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಸನ್ನ ಕುಮಾರ್ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಕೊನೆಯ ಬಾರಿಯೂ ಮಗನ ಮುಖ ನೋಡಲು ಆಗಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಹುಟ್ಟುತ್ತಲೇ ಮಗುವಿಗೆ ಸಿಕ್ತು 18 ವರ್ಷ ಉಚಿತ ವೈಫೈ: ಇದಕ್ಕೆ ಕಾರಣವೇ ಕುತೂಹಲ…
ಪ್ರಸನ್ನ ಅವರ ಹಿರಿಯ ಮಗ ಸೂರಜ್ ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸುಹಾಸ್ ಶಿವಮೊಗ್ಗದಲ್ಲೆ ಪೆಟ್ರೋಲ್ ಬಂಕ್ ನೋಡಿಕೊಳ್ಳುತ್ತಿದ್ದರು. ಮೂರು ವರ್ಷದ ಹಿಂದೆ ಮದುವೆಯಾಗಿತ್ತು.
2013ರಲ್ಲಿ ಸ್ನೇಹಿತರೊಂದಿಗೆ ಮಂಡಗದ್ದೆಗೆ ತೆರಳಿ, ಶಿವಮೊಗ್ಗಕ್ಕೆ ವಾಪಸಾಗುತ್ತಿದ್ದ ವೇಳೆ ಸುಹಾಸ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅಂದಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಪಘಾತ ನಂತರ ಹಲವು ಬಾರಿ ಶಸ್ತ್ರಚಿಕಿತ್ಸೆ ನಡೆದಿತ್ತು. ಆದರೂ, ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ.
ಭಾನುವಾರ ಸಂಜೆ 4ಕ್ಕೆ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಭಯಾನಕ ಘಟನೆ: ಚಾಕು ಹಿಡಿದು ಕಂಡಕಂಡವರ ಮೇಲೆ ಹಲ್ಲೆ- ಒಬ್ಬನ ಸಾವು

ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

ಅಚ್ಚರಿ ರೀತಿಯಲ್ಲಿ ಹೆಲಿಕಾಪ್ಟರ್​ ಪ್ರವೇಶಿಸಿದ ಗೂಬೆ: ಸಿಬ್ಬಂದಿಗೆ ಆಶೀರ್ವಾದ ಮಾಡಿ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + fourteen =
Remember me
