ಬೆಂಗಳೂರು:ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ಗ್ರಿಲ್ ಮಾಡುತ್ತಿದ್ದರೆ, ತಪ್ಪು ಮುಚ್ಚಿಡಲು ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದೆ. ರಾಜಭವನ ಚಲೋ ಚಳವಳಿ ಹತಾಶೆಯ ಪ್ರತೀಕವಾಗಿದೆ. ಕಾನೂನುಬಾಹಿರವಾದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಅರಮನೆ ಮೈದಾನದಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಬಿಜೆಪಿ ಪಾತ್ರವೇನೂ ಇಲ್ಲ. ವಾಸ್ತವಾಂಶ ಜನರಿಗೂ ಗೊತ್ತಿದ್ದು, ಇಡಿ ದಾಖಲಿಸಿರುವ ಕೇಸ್ ರಾಹುಲ್ ಗಾಂಧಿ ಸೇರಿದಂತೆ ಈ ಪರಿವಾರದವರ ತಪ್ಪು ಸಾಬೀತಾದರೆ ಹೇಗೆಂಬ ದಿಗಿಲಿಗೆ ಕಾಂಗ್ರೆಸ್ ನಾಯಕರು ಒಳಗಾಗಿದ್ದು, ಕುಟುಂಬ ಆಧಾರಿತ ಪಕ್ಷ ಎನ್ನುವುದು ಸ್ಪಷ್ಟವಾಗಿದೆ ಎಂದರು.
ಶ್ರೀನಿವಾಸ್​ಗೆ ಕುಟುಕುಕಾಂಗ್ರೆಸ್ ನವರಾದ ಕಾರಣಕ್ಕೆ ಹೀಗೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿದೆ. ಬಿಜೆಪಿಯವರು ಪೊಲೀಸರ ಬೂಟ್ ನೆಕ್ಕಿ ಹೊರ ಬರುತ್ತಿದ್ದರು ಎಂಬ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಹೇಳಿಕೆಗೆ ಆರ್.ಅಶೋಕ್ ಉತ್ತರಿಸಿ, ತುರ್ತು ಪರಿಸ್ಥಿತಿ ಕಾಲದಲ್ಲಿ ನಾನು, ನನ್ನ ತಮ್ಮ ಜೈಲು ವಾಸ ಅನುಭವಿಸಿದ್ದೇವೆ. ಸುದೀರ್ಘ ಕಾಲದ ಆಡಳಿತ ನಡೆಸಿದ ಕಾಂಗ್ರೆಸ್ ನವರು ಏನು ಮಾಡಿದರು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಕುಟುಕಿದರು.
ಮುಂದುವರೆದ ಹೈಡ್ರಾಮಾ: ಟೈಯರ್​ ಸುಟ್ಟರು, ಬಟ್ಟೆ ಹರಿದುಕೊಂಡರು, ಮಹಿಳೆಯರೂ ಕೂಗಿದರು!

ರಾಷ್ಟ್ರಪತಿ ರೇಸ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡ! ಅಪ್ಪ-ಮಗನಿಗೆ ದೀದಿ ಬುಲಾವ್​: ಹೆಚ್ಚಿದೆ ಕುತೂಹಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
