ಬೆಂಗಳೂರು:ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್​ಎಸ್​ಎಸ್​ ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕ ಕಾಂಗ್ರೆಸ್​ನ ಟ್ವಿಟರ್​ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಉಲ್ಲೇಖವಾಗಿರುವ ನಪುಂಸಕ ಸಂಘಟನೆ ಎನ್ನುವುದು ಹಲವರ ಕಿಚ್ಚಿಗೆ ಕಾರಣವಾಗಿದ್ದು, ಜಾಲತಾಣದಲ್ಲಿ ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ.
ಹಲವಾರು ಮಂದಿ ಈ ಟ್ವೀಟ್​ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. Late Brig J.P.ದಲ್ವಿ ಬರೆದ “ಹಿಮಾಲಯನ್ ಬ್ಲಂಡರ್” ಕೃತಿ ಓದಿದರೆ ಗೊತ್ತಾಗುತ್ತೆ, ನೀವು ಕಾಂಗ್ರೆಸ್​ನವರು ಎಂಥ ನಪುಂಸಕರು ಎಂದು. ನಮ್ಮ ದೇಶವನ್ನು ತಿಂದು ನಾಶ ಮಾಡಿದ ನೀವು ವೀರರೆ ಎಂದು ಪುರುಷೋತ್ತಮ ಎನ್ನುವವರು ಪ್ರಶ್ನಿಸಿದ್ದಾರೆ. ಭಾರತ ಚೀನಾ ಯುದ್ಧದಲ್ಲಿ, ಭಾರತ ದೇಶವನ್ನು ಸೋಲುವಂತೆ ಮಾಡಿದ ನೀವು ನಪುಂಸಕರಲ್ಲವೇ ಕಾಂಗ್ರೆಸ್ ? ದಶಕಗಳ ದೇಶ ಆಳಿ ಇಲ್ಲಿನ ಸಂಪತ್ತನ್ನು ಲೂಟಿ ಹೊಡೆದು ಇಟಲಿ ದೇಶಕ್ಕೆ ರವಾನಿಸಿದ್ದು ನಿಮ್ಮ ನಪುಂಸಕತನ ಅಲ್ಲವೇ ಎಂದೂ ಅವರು ತೀಕ್ಷ್ಮವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಆರ್​ಎಸ್​ಎಸ್​ ಅನ್ನು ನಪುಂಸಕ ಎನ್ನುವುದಾದರೆ ನಿಮ್ಮ ರಾಹುಲ್​ಗಾಂಧಿಗೆ ಎಷ್ಟು ಜನ ಮಕ್ಕಳು? ಆರ್​ಎಸ್​ಎಸ್​ ನಪುಂಸಕ ಸಂಘಟನೆ ಎನ್ನುವುದಕ್ಕಿಂತ ಮುಂಚೆ ನಿಮ್ಮ ಲೀಡರ್​ಗೆ ತಾಕತ್ ಇಲ್ವಾ ಕೇಳ್ರೀ ಎಂದು ಅನಂತ ನರಹರಿ ಎನ್ನುವವರು ಕಿಡಿ ಕಾರಿದ್ದಾರೆ.
ಈ ದೇಶದ್ದೇ ಆದ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಮತ್ತು ನಮ್ಮದೇ ಕರ್ನಾಟಕದ ಕ್ಲಾಕ್ ಟವರ ಮೇಲೆ ಧ್ವಜಾರೋಹಣ ಮಾಡದೆ ಇರೋ ನಪುಂಸಕ ಪಕ್ಷದವರು ಆ ಎರಡು ಸ್ಥಳದಲ್ಲಿ ದ್ವಜಾರೋಹಣ ಮಾಡಿದ ದೇಶಭಕ್ತ ಸಂಘಟನೆಯ ಗಂಡಸ್ತನ ಕೇಳುವಷ್ಟು ಕೀಳಾದರೆ ಎಂದು ಅಶೋಕ್​ ರಾಥೋಡ್​ ಎನ್ನುವವರು ಪ್ರಶ್ನಿಸಿದ್ದಾರೆ. ಹೌದಪ್ಪ ನಾನು ಆರ್​ಎಸ್​ಎಸ್​ನವನು, ರಾಷ್ಟ್ರಗೀತೆ ಜನಗಣಮನ ಹಾಗೂ ವಂದೇ ಮಾತರಂ ಎರಡನ್ನೂ ಯಾವುದೇ ಪ್ರತಿಯ ಸಹಾಯವಿಲ್ಲದೆ ಹಾಡುತ್ತೇನೆ, ನೀವು ಕಾಂಗ್ರೆಸ್ಸಿಗರು ರಾಷ್ಟ್ರ ಹಾಗೂ ರಾಷ್ಟ್ರಗೀತೆಗೆ ಬಹಳ ಬೆಲೆ ಕೊಡುವವರು, ನಿಮ್ಮ ಪಪ್ಪು ರಾಹುಲ್​ನಿಂದ ಹಾಡಿಸಿ ತೋರಿಸಿ ಎಂದು ಸತೀಶ್​ ಕೆ. ಎನ್ನುವವರು ಪ್ರಶ್ನಿಸಿದ್ದಾರೆ. ಹೀಗೆ ಕಾಂಗ್ರೆಸ್​ ಟ್ವೀಟ್​ಗೆ ಭಾರಿ ಟೀಕೆಗಳ ಸುರಿಮಳೆಯೇ ಆಗಿದೆ.
ಇಲ್ಲಿದೆ ನೋಡಿ ಟ್ವೀಟ್​ ಮತ್ತು ಕಮೆಂಟ್​ಗಳು
ಈ ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ RSS ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು.
— Karnataka Congress (@INCKarnataka)May 29, 2022

ಸಿಂಗಪುರದಲ್ಲಿ ರೆಸ್ಟ್​? ರಾತ್ರೋರಾತ್ರಿ ವಿಮಾನ ಏರಿದ ಮಾಜಿ ಸಿಎಂ ಕುಮಾರಸ್ವಾಮಿ

ಹಿಂದೂ ಹೆಸರು ಹೇಳಿ ಮದ್ವೆಯಾದ: ಸತ್ಯ ತಿಳಿಯುತ್ತಲೇ ವಿಧವೆ ಬಾಳಲ್ಲಿ ಘೋರ ದುರಂತ- ಪಾತಕಿಗೆ ಆಗುತ್ತಾ ಶಿಕ್ಷೆ?

ಕಾಂಗ್ರೆಸ್​ ಪಕ್ಷಕ್ಕೆ ‘ಮುಖ್ಯಮಂತ್ರಿ’ ಚಂದ್ರು ಗುಡ್​ ಬೈ: ರಾಜೀನಾಮೆ ಪತ್ರದಲ್ಲಿ ಏನಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
