ಬೆಂಗಳೂರು:ಕರೊನಾ 2ನೇ ಅಲೆಯ ತೀವ್ರತೆಯಿಂದಾಗಿ ಮುಂದಿನ 10 ದಿನಗಳು ಕಠಿಣವಾಗಿರಲಿವೆ. ನಂತರ ಕ್ರಮೇಣ ತಗ್ಗುವ ಸಾಧ್ಯತೆಗಳಿವೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ವಿಧಾನ ಸೌಧದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕಿನಿಂದ ಸಾವು-ನೋವು ಸಂಭವಿಸಿರುವುದು ನೋವು ತಂದಿದೆ. ಬೆಂಗಳೂರಿನಲ್ಲಿ ಮಾತ್ರ ಸೋಂಕು ಪ್ರಕರಣಗಳು ಹೆಚ್ಚಿದ್ದು, ರಾಜ್ಯದ ಉಳಿದ ಭಾಗದಲ್ಲಿ ಸರ್ಕಾರ ಯಶಸ್ವಿಯಾಗಿ ನಿಯಂತ್ರಿಸುತ್ತಿದೆ ಎಂದರು.
ಸೋಂಕು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿರುವ ಕಾರಣ ಜನರು ಜಾಗ್ರತೆಯಿಂದ ಇರಬೇಕಾದ ಅಗತ್ಯವಿದೆ. ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಸಹಕರಿಸಬೇಕು ಎಂದು ಕೋರಿದರು.ಪ್ರಾರಂಭಿಕ ಹಂತದಲ್ಲಿ ಆಕ್ಸಿಜನ್ ಮತ್ತು ರೆಮ್ ಡಿಸಿವಿರ್ ಚುಚ್ಚುಮದ್ದು ಸ್ವಲ್ಪ ಪ್ರಮಾಣದಲ್ಲಿ ಕೊರತೆ ಇದ್ದುದು ನಿಜ. ಈ ಬಗ್ಗೆ ಸಿಎಂ ಬಿಎಸ್ ವೈ, ಆರೋಗ್ಯ ಸಚಿವರು ಹಾಗೂ ನಾವು ತಕ್ಷಣವೇ ಕೇಂದ್ರದ ಮೇಲೆ ಒತ್ತಡ ಹಾಕಿದ್ದೇವೆ. ಇದರಿಂದಾಗಿ 1 ಲಕ್ಷ 22 ಸಾವಿರ ರೆಮ್ ಡಿಸಿವಿರ್ ಚುಚ್ಚುಮದ್ದು ವಯಲ್ಸ್, , 800 ಮೆಟ್ರಿಕ್ ಟನ್ ಆಕ್ಸಿಜನ್ ನೀಡುವುದಕ್ಕೂ ಕೇಂದ್ರ ಸಮ್ಮತಿಸಿದ್ದು, 15 ದಿನಗಳೊಳಗೆ ರಾಜ್ಯಕ್ಕೆ ಲಭ್ಯವಾಗಲಿದೆ. ಅಲ್ಲದೆ, ಏ.30ರವರೆಗೂ 3 ಲಕ್ಷ ಲಸಿಕೆ ಬೇಕು ಎಂಬ ರಾಜ್ಯದ ಕೋರಿಕೆಯನ್ನು ಕೇಂದ್ರ ಪುರಸ್ಕರಿಸಿದೆ ಎಂದು ಸದಾನಂದ ಗೌಡ ತಿಳಿಸಿದರು.
14 ದಿನಗಳ ಬಳಿಕ ರಿಸಲ್ಟ್ ರಾಜ್ಯದಲ್ಲಿ ವಾರಾಂತ್ಯದ ಪೂರ್ಣ ಕರ್ಫ್ಯೂ ಯಶಸ್ವಿಯಾಗಿದೆ. ಇದರ ರಿಸ್ಟಲ್ 10 ರಿಂದ 14 ದಿನಗಳ ನಂತರ ಗೊತ್ತಾಗಲಿದೆ. ವೀಕೆಂಡ್ ಕರ್ಫ್ಯೂ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಮೂರನೇ ಅಲೆಗೆ ಹೋಗಬಾರದು ಎಂದರೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಅದು ಎಲ್ಲರ ಜವಾಬ್ದಾರಿಯಾಗಿದ್ದು ಹಾಗೆಯೇ ಎಲ್ಲರಿಗೂ ಲಸಿಕೆ ಹಾಕುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದು ಡಿ.ವಿ.ಸದಾನಂದ ಹೇಳಿದರು.
ವೀಕೆಂಡ್‌ ಕರ್ಫ್ಯೂ ಜತೆ ಲಾಕ್‌ಡೌನೂ ವಿಸ್ತರಣೆ ಆಗುತ್ತಾ? ತಜ್ಞರು ಏನು ಹೇಳಿದ್ದಾರೆ ನೋಡಿ…

ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟ: 27 ಮಂದಿ ಸಜೀವ ದಹನ!

ಕರೊನಾದಲ್ಲಿದೆ ಮೂರು ಹಂತ- ದುಬಾರಿ ಮಾತ್ರೆ ಹಿಂದೆ ಓಡಬೇಡಿ… ಮನ್‌ ಕೀ ಬಾತ್‌ನಲ್ಲಿ ಸಲಹೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
