ಬೆಂಗಳೂರು: ಮೊದಲ ಅಲೆಗಿಂತಲೂ ಭೀಕರವಾಗಿ ಕರೊನಾ ಎರಡನೆಯ ಅಲೆ ತನ್ನ ಸ್ವರೂಪವನ್ನು ತೋರಿಸುತ್ತಿದೆ. ಇದಾಗಲೇ ಚಿತ್ರರಂಗ ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಇದು ಬಲಿ ಪಡೆದಿದೆ.
ಇದೀಗ ಚಿತ್ರರಂಗದ ಪ್ರಸಿದ್ಧ ಹಾಗೂ ಹಿರಿಯ ಡಿಸೈನರ್‌ ಎನಿಸಿಕೊಂಡಿರುವ ಹಾಗೂ ಕೆಲವು ಚಿತ್ರಗಳಲ್ಲಿ ನಟರಾಗಿರುವ ಕೆಲಸ ಮಾಡಿದ್ದ ಮಸ್ತಾನ್‌ ಅವರು ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹಿರಿಯ ಪೋಸ್ಟರ್ ಡಿಸೈನರ್ ಆಗಿದ್ದ ಮಸ್ತಾನ್, ನಿರ್ದೇಶಕರಾಗಿ ಜತೆಗೆ ನಟರಾಗಿಯೂ ಸೇವೆ ಸಲ್ಲಿಸಿದ್ದರು. ಇವರಿಗೆ 63 ವರ್ಷ ವಯಸ್ಸಾಗಿತ್ತು.
ಬೆಂಗಳೂರಿನ ಹೆಸರಘಟ್ಟ ಬಳಿಯ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಮಸ್ತಾನ್‌ ಅವರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಪೋಸ್ಟರ್‌ ಡಿಸೈನರ್‌ ಆಗಿ ಕೆಲಸ ನಿರ್ವಹಿಸಿದ್ದರು. ಅಂದಿನ ತಲೆಮಾರಿನ ಚಿತ್ರಗಳಿಗೆ ಅನುಗುಣವಾಗಿ ಪೋಸ್ಟರ್‌ ತಯಾರಿಸುವುದರಿಂದ ಹಿಡಿದು ಈಗಿನ ಆಧುನಿಕ ಚಿತ್ರರಂಗದ ಡಿಸೈನ್‌ಗೂ ಸೈ ಎನಿಸಿಕೊಂಡಿದ್ದ ಮಸ್ತಾನ್‌, ಇದಾಗಲೇ ಎರಡು ಸಾವಿರಕ್ಕೂ ಅಧಿಕ ಸಿನಿಮಾಗಳಿಗೆ ಪೋಸ್ಟರ್ ಡಿಸೈನ್ ಮಾಡಿದ್ದರು.
ಸಿನಿಮಾ ನಿರ್ದೇಶನವನ್ನೂ ಮಾಡಿದ್ದ ಇವರು, ನಟರಾಗಿಯೂ ಕೆಲಸ ಮಾಡಿದ್ದರು. ಚಿತ್ರ ನಟ ಮೋಹನ್ ಅಭಿನಯದ ‘ಶುಕ್ಲಾಂಬರದರಂ’, ‘ಕಲ್ಲೇಶಿ ಮಲ್ಲೇಶಿ’, ‘ಸಿತಾರಾ’ ಸಿನಿಮಾಗಳನ್ನು ಮಸ್ತಾನ್ ನಿರ್ದೇಶನ ಮಾಡಿದ್ದರು.
ಹಾಸಿಗೆ ಸಿಗದೇ ಪರದಾಡುವ ಸೋಂಕಿತರಿಗಿಲ್ಲಿ ರೈಲೇ ಆಸ್ಪತ್ರೆ- ಕೋಚ್‌ಗಳೇ ಕರೊನಾ ಬೆಡ್‌
ತಪ್ಪನ್ನು ಮುಚ್ಚಿಹಾಕಲು ಬದುಕಿದ್ದ ಸೋಂಕಿತೆಯನ್ನು ಸಾಯಿಸಿದರು? ಬೆಂಗಳೂರು ಆಸ್ಪತ್ರೆ ವಿರುದ್ಧ ಭಾರಿ ಆರೋಪ!
ರಾಕ್ಷಸರಾದ ಗಂಡ- ಅತ್ತೆಯ ಚಿತ್ರಹಿಂಸೆ ಎಳೆಎಳೆಯಾಗಿ ಬಿಚ್ಚಿಟ್ಟು ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ…!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + fifteen =
Remember me
