ಬೆಂಗಳೂರು:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ ದೇಶದ ನಂ.1 ಕರೊನಾ ಸೋಂಕಿತರ ದೇಶವಾಗಲಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಅವರು, ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದ ಪರಿಣಾಮ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿವೆಯೋ ಅವರು ವ್ಯಂಗ್ಯವಾಡಿದ್ದಾರೆ.
ಗಂಟೆ ಬಾರಿಸಿ.,ಚಪ್ಪಾಳೆ ತಟ್ಟಿ., ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ‌ ಮೋಸಗೊಳಿಸಿದ ಪರಿಣಾಮವಿದು..!
ಬಿಜೆಪಿ ಘೋಷಿತ 'ವಿಶ್ವಗುರು'ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ..?pic.twitter.com/6wBCDXLaLY
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao)August 31, 2020

ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ ಪರಿಣಾಮವಿದು. ಬಿಜೆಪಿ ಘೋಷಿತ ‘ವಿಶ್ವಗುರು’ಗಳ ಬತ್ತಳಿಕೆಯಲ್ಲಿ ಕರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
‘ಕೆಲವು ದಿನಗಳಲ್ಲಿ ವಿಶ್ವದಲ್ಲೇ 1ನೇ ಸ್ಥಾನಕ್ಕೆ ಭಾರತ ಏರುವುದು ನಿಸ್ಸಂದೇಹ. ಜನಸಂಖ್ಯೆ ಹೆಚ್ಚಿರುವುದರಿಂದ ಇದು ಆಶ್ಚರ್ಯಕರ ಸಂಗತಿ ಅಲ್ಲ. ಆದರೆ ನೆರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ವೈಫಲ್ಯ ಸ್ಪಷ್ಟವಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಬರ್ಮಾ, ಶ್ರೀಲಂಕಾ, ಅಫ್ಘಾನಿಸ್ತಾನ, ಭೂತಾನ್, ಚೀನಾ ನಮಗಿಂತ ಉತ್ತಮ ಸ್ಥಿತಿಯಲ್ಲಿವೆ’ ಎಂದೂ ದಿನೇಶ್‌ ಅವರು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ದಿನೇಶ್‌ ಗುಂಡೂರಾವ್‌ ಅವರ ಈ ಹೇಳಿಕೆಗೆ ಕೆಲವರು ಸಮ್ಮತಿ ನೀಡಿದ್ದರೆ, ಹಲವರು ಕಿಡಿ ಕಾರಿದ್ದಾರೆ.
ಜನಸಂಖ್ಯೆ ಅನುಗುಣವಾಗಿ ವಿಚಾರ ಮಾಡಿ. ಭಾರತವೇ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತದೆ. ಅದನ್ನು ಬಿಟ್ಟು ಬರೀ ಕೊಂಕು ಹುಡುಕುವ ಪ್ರಯತ್ನ ಬಿಡಿ . ಮೋದಿಜೀ ದೀಪ ಹಚ್ಚಿ ಚಪ್ಪಾಳೆ ತಟ್ಟಿ ಅಂದಿದ್ದು ಕರೊನಾ ವಾರಿಯರ್ಸ್‌ಗೆ ಧೈರ್ಯ ತುಂಬಲು. ಅದನ್ನು ಮೊದಲು ಅರಿತುಕೊಳ್ಳಿ ಎಂದು ವಿಶ್ವನಾಥ ಕಟಗೇರಿ ಎನ್ನುವವರು ತಿವಿದು ನುಡಿದಿದ್ದಾರೆ.
ಇದನ್ನೂ ಓದಿ:ಕರೊನಾ ಕೋಲಾಹಲ: ಶಾಸಕರೇ ನೀವು ಸೋಂಕಿತರು ಎನ್ನುವಷ್ಟರಲ್ಲಿಯೇ ಬಂತು ನೆಗೆಟಿವ್‌ ವರದಿ!
‘ಸ್ವಾಮೀ,ಜನ ಸಂಖ್ಯೆ ತುಲನೆ ಮಾಡಿ. ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಿಲ್ಲಿಸಿ. ಎಲ್ಲಾ ದೇಶಗಳಲ್ಲಿಯೂ ಗಂಟೆ ಬಾರಿಸಿದ್ದಾರೆ, ದೀಪ ಹಚ್ಚಿದ್ದಾರೆ, ಚಪ್ಪಾಳೆ ತಟ್ಟಿದ್ದಾರೆ. ಔಷಧಿಯೇ ಇಲ್ಲದಿದ್ದರೆ ಎಲ್ಲ ಪ್ರಯತ್ನಗಳನ್ನೂ ಮಾಡಬೇಕಲ್ಲವೆ. ಸಾಕು ನಿಲ್ಲಿಸಿ ಪ್ರಲಾಪ ಎಂದು ಬಿ.ಜಿ.ಸುಭಾಷ್‌ ಎನ್ನುವವರು ಕಿಡಿ ಕಾರಿದ್ದಾರೆ.
ಲಾಕ್ ಡೌನ್ ಮಾಡಿ ಎಂದು ಸಲಹೆ ಕೊಟ್ಟವರು ನೀವೇ…. ದೀಪ ಹಚ್ಚಿ ಎಂದಾಗ ದೀಪ ಬೆಳಗಿದವರು ನೀವೇ… ಶಾಸಕರ ಮನೆಗೆ ಬೆಂಕಿ ಹಚ್ಚಲು ಪ್ರೇರೇಪಿಸಿದವರು ನಿಮ್ಮ ಪಕ್ಷದವರೇ… ನಿಮ್ಮ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದವರನ್ನು ಮುಚ್ಚಿಹಾಕುವ ಪ್ರಯತ್ನ ಮಾಡ್ತಿರಾ. ಏನ್ ರಾಜಕೀಯ ಸ್ವಾಮಿ ನಿಮ್ಮದು ಎಂದು ಸೋಮನಗೌಡ ಎಸ್‌.ಎಂ. ಎನ್ನುವವರು ಪ್ರಶ್ನಿಸಿದ್ದಾರೆ. ರಾಹುಲ್‌ ಗಾಂಧಿಯವರು ಕರೊನಾದ ಕುರಿತು ಮೊದಲೇ ಎಚ್ಚರಿಸಿದ್ದರು, ಆಗಲೇ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಭವಿತಾ ಎನ್ನುವವರು ತಿಳಿಸಿದ್ದಾರೆ.
ರಿಷಿಕೇಶದಲ್ಲಿ ನಗ್ನವಾಗಿ ನಿಂತು ವಿಡಿಯೋ ಮಾಡಿಕೊಂಡಳು: ಕಾರಣ ಕೇಳಿ ಪೊಲೀಸರು ಹುಬ್ಬೇರಿಸಿದರು!

ಅಮಿತ್‌ ಷಾ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ- ಓಣಂ ಶುಭಾಶಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
