ಬೆಂಗಳೂರು:ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ ಚಿತ್ರಗಳಲ್ಲಿ ನಟಿಸಿ, ಬಹುಖ್ಯಾತಿ ಪಡೆದಿರುವ ವೇದಿಕಾಗೆ ಕರೊನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ತೀವ್ರ ರೀತಿಯ ಜ್ವರದಿಂದ ನರಳುತ್ತಿರುವುದಾಗಿ ವೇದಿಕಾ ಬರೆದುಕೊಂಡಿದ್ದಾರೆ. ನಾನು 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದು, ಮೈಕೈ ನೋವಿನಿಂದಲೂ ನರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
2006ರಲ್ಲಿ `ಮದ್ರಾಸಿ’ ಚಿತ್ರದಿಂದ ಸಿನಿಪಯಣ ಆರಂಭಿಸಿದ ನಟಿ, ಶಿವರಾಜ್ ಕುಮಾರ್ ನಟನೆಯ ಶಿವಲಿಂಗು,ಸಂಗಮಾ, ಹೋಮ್ ಮಿನಿಸ್ಟರ್, ಗೌಡರ ಹೋಟೆಲ್ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ತಮ್ಮ ಅಭಿಮಾನಿಗಳಿಗೆ ಕರೊನಾದಿಂದ ರಕ್ಷಿಸಿಕೊಳ್ಳುವಂತೆ ತಿಳಿಸಿರುವ ನಟಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ನನಗೆ ಕೋವಿಡ್ ಪಾಸಿಟಿವ್ ಆಗಿದೆ. ನನ್ನ ದುರಾದೃಷ್ಟ. ಮೊದ ಮೊದಲ ಜ್ವರದ ಲಕ್ಷಣಗಳಷ್ಟೇ ಕಾಣಿಸಿಕೊಂಡವು. ಆನಂತರ ತೀವ್ರ ಜ್ವರ ಶುರುವಾಯಿತು. ತಡಮಾಡದೇ ನಾನು ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದಿದ್ದಾರೆ.
ಅಂದಹಾಗೆ ವೇದಿಕಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಇವರು ಜನಿಸಿದ್ದು ಮಹಾರಾಷ್ಟ್ರದ ಸೋಲಾಪುರದಲ್ಲಿ. ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.
ಅತ್ತ 40 ಶಾಸಕರು ನನ್ನೊಂದಿಗಿದ್ದಾರೆ ಎಂದ ಶಿಂಧೆ: ಇತ್ತ ಸಿಎಂ ಠಾಕ್ರೆಗೆ ಕಾಣಿಸಿಕೊಂಡಿತು ಕರೊನಾ!

‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 14 =
Remember me
