ಬೆಂಗಳೂರು:ರಾಜ್ಯದಲ್ಲಿ ವ್ಯಾಪಕವಾಗಿ ಕರೊನಾ ನಿರೋಧಕ ಲಸಿಕೆ ವಿತರಿಸುತ್ತಿದ್ದು, ಅದಕ್ಕೆ ತಕ್ಕಂತೆ ಬೇಡಿಕೆಯು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ ದೆಹಲಿ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಮುಂದೆ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಸುವ ಬೇಡಿಕೆ ಮಂಡಿಸುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮೈಸೂರು, ಕೊಡಗು ಜಿಲ್ಲೆಗಳ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕೇಂದ್ರ ಆರೋಗ್ಯ ಸಚಿವರು ಸೇರಿದಂತೆ ಕೆಲವು ಸಚಿವರು, ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು ಯೋಚಿಸಿರುವೆ ಎಂದರು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ನಿಗದಿ, ಇಲಾಖೆ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿಗೆ ಲಸಿಕೆ, ಕಾರ್ಯಪಡೆ ವರದಿ ಬಳಿಕ ಶಾಲಾರಂಭದ ತೀರ್ಮಾನ ಕುರಿತು ಸಚಿವ ಎಸ್.ಸುರೇಶ್ ಕುಮಾರ್ ನಂತರ ನನ್ನೊಂದಿಗೆ ಚರ್ಚಿಸಿದ್ದಾರೆ. ಸೋಮವಾರ ಬೆಳಗ್ಗೆ ಬೇರೊಂದು ಸಭೆಯಲ್ಲಿ ಭಾಗವಹಿಸಿದ್ದರಿಂದ ಈ ವಿಚಾರ ಗೊತ್ತಾಗಿರಲಿಲ್ಲ. ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ನಂತರ ತಿಳಿಯಿತು. ಕಮ್ಯುನಿಕೇಷನ್ ಗ್ಯಾಪ್ ಹೊರತು ಬೇರೇನಿಲ್ಲ. ಯಾವುದೇ ಗೊಂದಲವಿಲ್ಲ ಎಂದು ಸ್ವತಃ ಸಿಎಂ ಬಿಎಸ್ ವೈ ಸ್ಪಷ್ಟಪಡಿಸಿಯಾಗಿದೆ. ಈ ವಿಷಯದಲ್ಲಿ ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ ಎಂದರು.
ಆಂತರಿಕ ವಿಚಾರ: ಮುಂದಿನ ಸಿಎಂ, ದಲಿತ ಸಿಎಂ ಎನ್ನುವುದೆಲ್ಲ ಕಾಂಗ್ರೆಸ್ ನ ಆಂತರಿಕ ವಿಚಾರ. ಕೆಪಿಸಿಸಿ ಅಧ್ಯಕ್ಷರು ಅಥವಾ ಪ್ರತಿಪಕ್ಷ ನಾಯಕರನ್ನು ಸಿಎಂ ಆಗಿ ಮಾಡುವ ಪದ್ಧತಿಯನ್ನು ಆ ಪಕ್ಷ ಅನುಸರಿಸಿಕೊಂಡು ಬಂದಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಓಟಿಪಿಯೂ ಬರದೇ ಶಿಕ್ಷಕಿ ಖಾತೆಯಿಂದ 3.22 ಲಕ್ಷ ರೂ. ಮಾಯ! ಸಿಕ್ಕಿಬಿದ್ದ ಕಳ್ಳನ ಕಂಡು ಕಣ್‌ಕಣ್‌ ಬಿಟ್ಟ ಪೊಲೀಸರು!

ಮಾಲ್‌ ತೆರೆಯಲು ಸಿಗುತ್ತಾ ಅನುಮತಿ? ಮಾಲೀಕರ ಮನವಿಗೆ ಸಿಎಂ ನೀಡಿದ್ರು ಭರವಸೆ

ಗುಂಡಿಗೆ ಬೀಳುವ ಮುನ್ನ..: ವಿಡಿಯೋ ಕಾಲ್ ಮಾಡಿ ಯಾಮಾರಿಸ್ತಾರೆ, ಹುಷಾರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
