ಬೆಂಗಳೂರು:ಮೋಜು-ಮಸ್ತಿ ಪಾರ್ಟಿ, ಸಭೆ-ಸಮಾರಂಭ ಅಂತ ಕರೊನಾ ಸೋಂಕು ರಿಯಾಯಿತಿ ನೀಡಲ್ಲ. ನಿರ್ಲಕ್ಷಿಸಿದರೆ ಆಪತ್ತು ಕಟ್ಟಿಟ್ಟಬುತ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮುನ್ನೆಚ್ಚರಿಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಜನರ ಜವಾಬ್ದಾರಿಯಾಗಿದೆ. ಸರ್ಕಾರದಿಂದಲೇ ಎಲ್ಲವನ್ನು ನಿಯಂತ್ರಿಸಲಾಗದು. ಸೋಂಕು ಪ್ರಕರಣಗಳು ಹೆಚ್ಚಾದರೆ ಜನರೇ ಜವಾಬ್ದಾರರು ಎಂದು ಖಡಕ್ ಆಗಿ ಹೇಳಿದರು.
ಸಿಎಂ ಜತೆ ಚರ್ಚೆಕರೊನಾ 2ನೇ ಅಲೆ ಅಪ್ಪಳಿಸಿರುವ ಕಾರಣ ಮುಂದಿನ 45-90 ದಿನಗಳನ್ನು ಅತ್ಯಂತ ಸೂಕ್ಷ್ಮ, ಸೂಕ್ತ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ತಾಂತ್ರಿಕ ತಜ್ಞರ ಸಲಹಾ ಸಮಿತಿ ನೀಡಿದ ಸಲಹೆಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದರು.
ಶಾಲೆ-ಕಾಲೇಜುಗಳ ಬಗ್ಗೆ ಮರು ಪರಿಶೀಲನೆ, ಈಜುಕೊಳ, ಪಾರ್ಕ್, ಜಿಮ್ ಬಂದ್ ಮಾಡುವುದು, ಮದುವೆ ಇನ್ನಿತರ ಸಮಾರಂಭಗಳಿಗೆ 100 ಜನರು ಹಾಗೂ ಹೊರಾಂಗಣ ಸಭೆ- ಸಮಾರಂಭಗಳಿಗೆ 200 ಜನರ ಮಿತಿ ಸೇರಿದಂತೆ ಮುಂದಿನ 14 ದಿನಗಳ ಕಾಲ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬಸವಕಲ್ಯಾಣದಿಂದ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯುವರೆ?ಸಿಎಂ ಯಡಿಯೂರಪ್ಪ ಏನು ಹೇಳಿದ್ರು ನೋಡಿ…

ಸಿಡಿ ಗ್ಯಾಂಗ್​ನ ಕೈ ಹಿಡಿತಿದೆಯೇ ರಾಜಸ್ಥಾನ? ದುಡ್ಡು ಖಾಲಿಯಾಗ್ತಿದ್ದಂತೆಯೇ ಎಸ್ಕೇಪ್​ ಆದ್ರು ಆರೋಪಿಗಳು

ಮನೆಯಂಗಳದ ಸಸಿ ಕಿತ್ತಳೆಂದು ಬಾಲಕಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ದಂಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − two =
Remember me
