ಬಾಗಲಕೋಟೆ:ಲಂಚ ಪಡೆಯಲು ಹೋಗಿ ಎಷ್ಟೋ ಅಧಿಕಾರಿಗಳು ಎಸಿಬಿ ಬಲೆಗೆ ಬೀಳುತ್ತಿದ್ದರೂ ಇನ್ನೂ ಹಲವು ಇಲಾಖೆಯ ಅಧಿಕಾರಿಗಳು ಬುದ್ಧಿಕಲಿತಂತಿಲ್ಲ.
ಇದೀಗ ಬಾಗಲಕೋಟೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೀಳಗಿಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಅಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾಗಿರುವ ಹುಸೇನ್ ಲಿಂಗನ್ನವರ್ ಬಲೆಗೆ ಬಿದ್ದಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ನಿವಾಸಿ. ಹನುಮಂತ ಎನ್ನುವವರಿಂದ ಲಂಚ ಕೇಳಿರುವ ಆರೋಪ ಇವರ ಮೇಲಿದೆ. ತಂದೆ ಮೃತ ಬಳಿಕ ನಿವೇಶನದಲ್ಲಿ ಮಗನ ಹೆಸರು ಸೇರ್ಪಡೆಗೆ (ವಾರಸಾ) ಲಂಚದ ಬೇಡಿಕೆ ಒಡ್ಡಿದ್ದ ಹುಸೇನ್​ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಮೂರು ಸಾವಿರ ರೂಪಾಯಿ ಲಂಚ ಕೇಳಿದ ಬಾಗಲಕೋಟೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹುಸೇನ್ ಲಿಂಗನ್ನವರ್​ ಎಸಿಬಿ ಬಲೆಗೆ ಬಿದ್ದಿದ್ದಾರೆpic.twitter.com/cgKODCIiIo
— Vijayavani (@VVani4U)March 18, 2021

ಹೆಸರು ಸೇರ್ಪಡೆಗೆ ಇವರು 3 ಸಾವಿರ ಲಂಚ ಕೇಳಿದ್ದರು. ಈ ಕುರಿತು ಹನುಮಂತ ಅವರು ಎಸಿಬಿ ಅಧಿಕಾರಿಗಳಲ್ಲಿ ದೂರು ದಾಖಲು ಮಾಡಿದ್ದರು. ನಂತರ ಎಸಿಬಿ ಅಧಿಕಾರಿಗಳ ಸಲಹೆಯಂತೆ ಲಂಚ ನೀಡಲು ಹೋಗಿದ್ದರು. ಈ ವೇಳೆ ದಾಳಿ ಮಾಡಿರುವ ಅಧಿಕಾರಿಗಳು ಹಣ ಸ್ವೀಕರಿಸುವ ವೇಳೆಗೆ ಬಂಧಿಸಿದ್ದಾರೆ.
ಇವರ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಮುಂದಿನ ಕ್ರಮ ಜರುಗಿಸಲಾಗುತ್ತಿದೆ ಎಂದು ಬಾಗಲಕೋಟೆ ಎಸಿಬಿ ಡಿವೈಎಸ್ಪಿ ಸುರೇಶ್ ರೆಡ್ಡಿ ಹೇಳಿದ್ದಾರೆ.
ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

ಭಾರತಕ್ಕೆ ಲಾಭ ಬೇಕಾದ್ರೆ ಹೀಗೆ ಮಾಡಿ ಎಂದು ‘ಅದ್ಭುತ’ ಸಲಹೆ ಕೊಟ್ರು ಪಾಕ್​ ಪ್ರಧಾನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
