ಯಾದಗಿರಿ:ಕೆಲವು ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕರ್ನಾಟಕದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ ಮಾಡಲಾಗಿದೆ. ಇದೇ ಕಾರಣಕ್ಕೆ ರೈಲು ನಿಲ್ದಾಣಗಳಲ್ಲಿ ಎಂಟ್ರಿ ಕೊಡುತ್ತಿದ್ದಂತೆಯೇ ಪರೀಕ್ಷೆ ಮಾಡಲಾಗುತ್ತಿದೆ.
ಇದೇ ರೀತಿ ಮಹಾರಾಷ್ಟ್ರದಿಂದ ಆಗಮಿಸಿದ ಪ್ರಯಾಣಿಕರೂ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಪರೀಕ್ಷೆ ಮಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಕೆಲವು ಪ್ರಯಾಣಿಕರು ಗೋಡೆ ಹಾರಿ ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ.ರೈಲ್ವೆ ನಿಲ್ದಾಣದ ಹಿಂಭಾಗದ ತಡೆಗೊಡೆ ಹಾರಿ ತಪ್ಪಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಇವರಿಗೆ ಕೋವಿಡ್ ಟೆಸ್ಟಿಂಗ್ ಎಂದರೆ ಭಯ. ಒಂದು ವೇಳೆ ಈ ಪರೀಕ್ಷೆಯಲ್ಲಿ ತಮಗೆ ಪಾಸಿಟಿವ್‌ ಎಂದು ತೋರಿಸಿಬಿಟ್ಟರೆ ಮುಂದೆ ಕ್ವಾರಂಟೈನ್‌, ಅದೂ ಇದೂ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂಬ ಭಯ ಒಂದೆಡೆಯಾದರೆ, ಕೆಲವರಿಗೆ ಟೆಸ್ಟಿಂಗ್‌ ಮಷಿನ್‌ ಮೇಲೆ ನಂಬಿಕೆ ಇಲ್ಲದ್ದೂ ಕಾರಣವಾಗಿದೆ. ತಮಗೆ ನೆಗೆಟಿವ್‌ ಇದ್ದರೂ ಪಾಸಿಟಿವ್‌ ಎಂದು ತೋರಿಸಿದರೆ ಗತಿಯೇನು ಎನ್ನುವುದು ಈ ಪ್ರಯಾಣಿಕರ ಅಳಲು
ಇದೇ ಕಾರಣಕ್ಕೆ ಟೆಸ್ಟಿಂಗ್‌ ಉಸಾಬರಿಯೇ ಬೇಡ ಎಂದು ತಪ್ಪಿಸಿಕೊಳ್ಳುತ್ತಿದ್ದಾರೆ. ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಗಾಡಿ ಮೂಲಕ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಮೇಲೆ ಜಿಲ್ಲಾಡಳಿತ ಕಣ್ಗಾವಲು ಇಟ್ಟಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಜತೆಗೆ ಡೆಲ್ಟಾ ಪ್ಲಸ್ ಕೇಸ್ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಟ್ಟಿನಿಟ್ಟಿನ ಕ್ರಮ ಅನುಸರಿಸಲಾಗಿದೆ.
ಮಹಾರಾಷ್ಟ್ರದಿಂದ ಬರುವ ಜನರ ಆರ್ ಟಿ -ಪಿಸಿಆರ್ ನೆಗೆಟಿವ್ ಪರೀಕ್ಷೆ ವರದಿ ಕಡ್ಡಾಯ ಮಾಡಲಾಗಿದೆ. 72 ಗಂಟೆ ಒಳಗೆ ನೀಡಿದ್ದ ವರದಿ ಇದ್ದವರಿಗೆ ಹಾಗೂ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಹೊಂದಿದ್ದವರಿಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಈ ವರದಿ ತರದೇ ಇರುವವರು ಹಾಗೂ ಲಸಿಕೆ ಪ್ರಮಾಣ ಪತ್ರ ಇಲ್ಲದೇ ಇರುವವರಿಗೆ ಟೆಸ್ಟಿಂಗ್‌ ಮಾಡಲಾಗುತ್ತಿದೆ. ಆದರೂ ಪೊಲೀಸರ ಕಣ್ಣುತಪ್ಪಿಸಿ ಇವರು ಪರಾರಿಯಾಗುತ್ತಿದ್ದಾರೆ.
ಮಹಾರಾಷ್ಟ್ರದ ಪ್ರಯಾಣಿಕರಿಗೆ ಕೋವಿಡ್‌ ಟೆಸ್ಟ್‌ ಮಾಡ್ತಿದ್ದಂತೆಯೇ ಗೋಡೆ ಹಾರಿ ಎಸ್ಕೇಪ್‌ ಆಗುತ್ತಿರುವ ದೃಶ್ಯ ಯಾದಗಿರಿಯ ರೈಲ್ವೆ ನಿಲ್ದಾಣದಲ್ಲಿ ಕಂಡುಬಂದಿದೆ.pic.twitter.com/Uc2EA8f4G2
— Vijayavani (@VVani4U)June 30, 2021

ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಿಗೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಕರೊನಾ ಪರೀಕ್ಷೆ ಮಾಡಲಾಗುತ್ತಿದೆpic.twitter.com/OGXF5n78Ux
— Vijayavani (@VVani4U)June 30, 2021

ಲಕ್ಷಾಂತರ ಜೀವ ಉಳಿಸಿದ ಆಂಧ್ರದ ಆಯುರ್ವೇದ ಔಷಧಕ್ಕೆ ರಾಜ್ಯದಲ್ಲಿ ‘ಅಗ್ನಿಪರೀಕ್ಷೆ’- ಬಿದ್ದಿದೆ ಬ್ರೇಕ್‌, ಸಿಎಂಗೆ ಮನವಿ

ಉಗ್ರರ ಅಟ್ಟಹಾಸ: ಮನೆಗೆ ನುಗ್ಗಿ ಗುಂಡಿನದಾಳಿ- ಪೊಲೀಸ್‌ ಅಧಿಕಾರಿ, ಪತ್ನಿ, ಪುತ್ರಿ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
