ಬೆಂಗಳೂರು:ಇದಾಗಲೇ ಕೋವಿಶೀಲ್ಡ್‌ನ ಮೊದಲ ಲಸಿಕೆಯನ್ನು ಪಡೆದುಕೊಂಡಿರುವವರು ಎರಡನೇ ಡೋಸ್‌ ಪಡೆಯಲು ಕನಿಷ್ಠ 12 ವಾರಗಳ ಅಂತರ ಅಗತ್ಯವಿದೆ. ಈ ಮೊದಲು ಆರರಿಂದ ಎಂಟು ವಾರಗಳ ಒಳಗೆ ಡೋಸ್‌ ಪಡೆಯಿರಿ ಎಂದು ಸೂಚಿಸಲಾಗಿತ್ತು. ಇದನ್ನೀಗ ಪರಿಷ್ಕರಣೆ ಮಾಡಲಾಗಿದೆ.
ರಾಷ್ಟ್ರೀಯ ರೋಗನಿರೋಧಕ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಮತ್ತು ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಸಮಿತಿ (ಎನ್‌ಇಜಿವಿಎಸಿ) ಶಿಫಾರಸಿನ ಆಧಾರದ ಮೇಲೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ನೀಡಿಕೆಯ ಅವಧಿಯನ್ನು ಬದಲಾಯಿಸಲಾಗಿದೆ.
ಆದ್ದರಿಂದ ಕೋವಿಶೀಲ್ಡ್‌ (COVISHIELD ) ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡವರು ಎರಡನೆಯ ಡೋಸ್‌ ಅನ್ನು 12 ರಿಂದ 16 ವಾರದ ಒಳಗೆ ಪಡೆಯುವಂತೆ ತಿಳಿಸಲಾಗಿದೆ. ಮೊದಲ ಡೋಸ್‌ ಪಡೆದು 12 ವಾರಗಳು ಆಗದಿದ್ದರೆ ಈ ಅವಧಿಯೊಳಗೆ ಎರಡನೆಯ ಡೋಸ್‌ ಪಡೆಯುವಂತಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಇದು ಪರಿಷ್ಕರಣೆಯ ಅವಧಿಯು ಕೋವಿಶೀಲ್ಡ್‌ ಲಸಿಕೆಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕೋವ್ಯಾಕ್ಸೀನ್‌ (COVAXIN) ಲಸಿಕೆಗೆ ಅಲ್ಲ ಎಂದು ಪ್ರಕಟಣೆ ತಿಳಿಸಿದೆ.
ಒಂದು ಸಾವಿನ ನೋವು ಮರೆಯುವ ಮುನ್ನವೇ ಡಿಸಿಎಂ ಸವದಿ ಕುಟುಂಬಕ್ಕೆ ಮತ್ತೊಂದು ಆಘಾತ

ತಮ್ಮಂದಿರಿಗಾಗಿ ಅಣ್ಣ ಬಹಳ ಖರ್ಚು ಮಾಡಿದರೆ ಅವರ ಆಸ್ತಿಯ ಭಾಗ ಆತ ಇಟ್ಟುಕೊಳ್ಳಬಹುದೆ?

ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
