ಕಲಬುರಗಿ:ಕಲಬುರಗಿ ಜಿಲ್ಲೆಯ ಯರಗೋಳ ಗ್ರಾಮದಿಂದ ಜಿಲ್ಲೆ ಶಹಬಾದ್ ಪಟ್ಟಣಕ್ಕೆ 33 ಗೋವುಗಳನ್ನ ಕರೆದ್ಯೊಯ್ತಿದ್ದ ಮಹಿಳೆಯ ಮೇಲೆ ಹಿಂದೂ ಸಂಘಟನೆಗಳು ದಾಳಿ ನಡೆಸಿವೆ. ವಾಡಿ ಪಟ್ಟಣದ ಬಲರಾಮ ಚೌಕ್ ಬಳಿ ಈ ದಾಳಿ ನಡೆದಿದೆ.
ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಾಟ ಮಾಡುತ್ತಿದ್ದಿರಿ ಎಂದು ಅರೋಪಿಸಿ ಈ ದಾಳಿ ನಡೆಸಲಾಗಿದೆ. ಈ ಸಂಬಂಧ ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು. ಸ್ಥಳಕ್ಕೆ ಬಂದ ವಾಡಿ ಠಾಣೆ ಪೊಲೀಸರಿಂದ ಗೋವುಗಳ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಆದರೆ ಮಹಿಳೆ ಹೇಳುತ್ತಿರುವುದೇ ಬೇರೆ. ಆಕಳನ್ನ ಕಟುಕರಿಗೆ ಮಾರಕ್ಕ ತಂದಿಲ್ರಿ..ನನ್ನ ಮಗಳ ಊರಿಗೆ ಬಿಡಲು ತಂದಿದ್ದೇನೆ. ಸಾಕುವ ಜಾನುವಾರುಗಳನ್ನ ನಾನು ಕಟುಕರಿಗೆ ಮಾರಲ್ಲರೀ ಸಾಹೇಬ್ರ..ನನಗೆ ಬಿಟ್ಟುಬಿಡ್ರೀ ಅಂತಾ ಗೋಳಾಡಿದ್ದಾಳೆ ಮಹಿಳೆ. ಮಗಳ ಊರಿಗೆ ಇದನ್ನು ಒಯ್ಯುತ್ತಿದ್ದು, ನಾನು ಕಟುಕರಿಗೆ ಮಾರುತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾಳೆ ಮಹಿಳೆ.
ಆದರೂ ಪರವಾನಿಗೆ ಇಲ್ಲದೇ ಗೋವುಗಳ ಸಾಗಾಟ ಹಿನ್ನಲೆಯಲ್ಲಿ ಗೋವುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಕೊಂಚೂರು ಪುಣ್ಯಕೋಟಿಗೆ ಕಳುಹಿಸಿದ್ದಾರೆ, ತನಿಖೆಯಿಂದ ಇನ್ನಷ್ಟೇ ಸತ್ಯ ಬಯಲಾಗಬೇಕಿದೆ.
ಮುಂದುವರೆದ ಕಲುಷಿತ ನೀರಿನ ದುರ್ಘಟನೆ: ವಿಷಜಲಕ್ಕೆ ಎಂಟನೇ ಬಲಿ- 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ

ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಭಯಾನಕ ಹಿಸ್ಟರಿ! ಜಮ್ಮುವಿನಲ್ಲಿ ಬಂಧಿಸಿರೋ ಉಗ್ರನ ಹಿನ್ನೆಲೆ ನೋಡಿ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 7 =
Remember me
