ಚಿಕ್ಕಮಗಳೂರು:ಗೋಕಳ್ಳತನ ಅವ್ಯಾಹತವಾಗಿ ಹಲವು ಕಡೆಗಳಲ್ಲಿ ನಡೆಯುತ್ತಿದೆ. ರಸ್ತೆ ಮೇಲೆ ಹೋಗುತ್ತಿರುವ ಹಸುಗಳನ್ನು ಮಾತ್ರವಲ್ಲದೇ ಮನೆ ಪಕ್ಕದಲ್ಲಿ ಕಟ್ಟಿಹಾಕಿದ ಹಸು, ಕರುವಿನ ಮೇಲೆ ಕಟುಕರ ಕಣ್ಣು ಬೀಳುತ್ತಿರುವ ಆತಂಕಕಾರಿ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.
ಇವುಗಳ ನಡುವೆಯೇ ಚಿಕ್ಕಮಗಳೂರಿನಲ್ಲಿಯೂ ಹಸುವಿನ ಕಳ್ಳತನ ಜೋರಾಗಿ ನಡೆದಿದೆ.
https://www.facebook.com/VVani4U/videos/295806018152099/
ಚಿಕ್ಕಮಗಳೂರು ನಗರದ ಹೊರವಲಯದ ತೇಗೂರಿನಲ್ಲಿ ನಡೆದಿರುವ ಘಟನೆಯೊಂದು ಇದೀಗ ಸಿಸಿಟಿಯಲ್ಲಿ ದಾಖಲಾಗಿದೆ. ಹಸುಗಳನ್ನು ಸ್ಕಾರ್ಪಿಯೋದಲ್ಲಿ ತುಂಬಿಕೊಂಡು ಹೋಗಿರುವ ದುಷ್ಕರ್ಮಿಗಳ ವಿಡಿಯೋ ಸೆರೆಯಾಗಿದೆ.
ಹಸುವನ್ನು ಕದ್ದು ಸ್ಕಾರ್ಪಿಯೋ ವಾಹನದಲ್ಲಿ ಸಾಗಿಸಲಾಗಿದ್ದು, ಅಮ್ಮನ ಕೂಗು ಕೇಳಿದ ಕರು ವಾಹನದ ಹಿಂದೆಯೇ ಸ್ವಲ್ಪ ದೂರ ಓಡಿ ಹೋದದ್ದು ಸಿಸಿಟಿಯಲ್ಲಿ ಸೆರೆಯಾಗಿದೆ. ಆದರೆ ವಾಹನ ಅತಿ ವೇಗದಲ್ಲಿ ಹೋದ ಹಿನ್ನೆಲೆಯಲ್ಲಿ, ಕರುವಿಗೆ ಅದನ್ನು ಹಿಂಬಾಲಿಸಲು ಆಗದೆ ಅತ್ತಿತ್ತ ನೋಡುತ್ತಿದ್ದ ನೋವಿನ ಘಟನೆಗೆ ಸಿಸಿಟಿವಿ ಸಾಕ್ಷಿಯಾಗಿದೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಜಾಲ ಬೀಸಲಾಗಿದೆ.
ಬಣ್ಣಬಣ್ಣಗಳಿಂದ ಕಣ್ಮನ ಸೆಳೆಯುತಿದೆ ತುಂಗಭದ್ರಾ ಜಲಾಶಯ- ವಿಡಿಯೋ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
