ಬೆಂಗಳೂರು:ಬಾಡಿಗೆ ಮನೆ ಮುಂಗಡ ಹಣದ ವಿಚಾರಕ್ಕೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಪೊಲೀಸರ ಮೇಲೆ ಇರಾನ್​ ಮೂಲದ ವಿದ್ಯಾಥಿರ್ನಿ ಹಲ್ಲೆ ನಡೆಸಿದ್ದಾಳೆ.
ಜೆ.ಪಿ.ನಗರ ಠಾಣೆಯ ಪಿಎಸ್​ಐ ಯೋಗೇಶ್​ ಖಾನಗೌಡ ಮತ್ತು ಎಎಸ್​ಐ ರಮೇಶ್​ ಹಲ್ಲೆಗೆ ಒಳಗಾದವರು. ಪಿಎಸ್​ಐ ನೀಡಿದ ದೂರಿನ ಮೇರೆಗೆ ಇರಾನ್​ ಮೂಲದ ಗಜಲ್​ ಸನೈಡಾ (28) ಎಂಬಾಕೆಯ ವಿರುದ್ಧ ಎ್​ಐಆರ್​ ದಾಖಲಿಸಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೆ.ಪಿ.ನಗರದ 1ನೇ ಹಂತದಲ್ಲಿ ಸಿದ್ದೇಗೌಡ ಎಂಬುವರ ಮನೆಯಲ್ಲಿ ಗಜಲ್​ ನೆಲೆಸಿದ್ದಳು. ಮನೆ ಖಾಲಿ ಮಾಡುತ್ತಿದ್ದ ವಿದ್ಯಾರ್ಥಿನಿ. ಮುಂಗಡ ಹಣದ ವಿಚಾರಕ್ಕೆ ಕಟ್ಟಡ ಮಾಲೀಕರ ಜತೆ ಜಗಳ ಮಾಡಿಕೊಂಡಿದ್ದಳು. ಈ ಬಗ್ಗೆ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಹೊಯ್ಸಳ ಸಿಬ್ಬಂದಿ ರಮೇಶ್​ ಮತ್ತು ಮುಖ್ಯಪೇದೆ ಆಶಿರ್ವಾದ್​ ಸ್ಥಳಕ್ಕೆ ಹೋದಾಗ ಕಟ್ಟಡ ಮಾಲೀಕರ ಮೇಲೆ ವಿದ್ಯಾರ್ಥಿನಿ ಹಲ್ಲೆ ನಡೆಸುತ್ತಿದ್ದಳು. ಅದನ್ನು ಬಿಡಿಸಲು ಎಎಸ್​ಐ ರಮೇಶ್​ ಮಧ್ಯಪ್ರವೇಶ ಮಾಡಿದಾಗ ಸಮುವಸ್ತ್ರ ಹಿಡಿದು ಎಳೆದಾಡಿ ಕೆನ್ನೆಗೆ ಹೊಡೆದಿದ್ದಾಳೆ.
ತಕ್ಷಣ ರಮೇಶ್​, ತನ್ನ ಮೇಲಾಧಿಕಾರಿ ಪಿಎಸ್​ಐಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಮಹಿಳಾ ಸಿಬ್ಬಂದಿ ಜತೆಗೆ ಸ್ಥಳಕ್ಕೆ ಪಿಎಸ್​ಐ ಯೋಗೇಶ್​ ಹೋದಾಗ ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಕಾಲಿನಲ್ಲಿ ಒದ್ದು ಹಲ್ಲೆ ನಡೆಸಿದ್ದಾಳೆ. ಮಹಿಳಾ ಪೊಲೀಸ್​ ಸಿಬ್ಬಂದಿ ವಿದ್ಯಾಥಿರ್ನಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ವಿದ್ಯಾಥಿರ್ನಿ ಕೊಟ್ಟ ದೂರಿನ ಮೇರೆಗೆ ಕಟ್ಟಡ ಮಾಲೀಕರ ವಿರುದ್ಧವೂ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿವಿಂಗ್‌ ಟುಗೆದರ್‌ ಏನೆಂದು ತಿಳಿಯದೇ ಮೋಸ ಹೋಗಿಬಿಟ್ಟೆ- ಗರ್ಭಿಣಿಯಾಗಿರೋ ನನ್ನ ಗತಿಯೇನು ಮೇಡಂ?

ನಿಮಗೆ ಉಳಿದಿರುವುದು ಇನ್ನು ನಾಲ್ಕು ದಿನಗಳು ಮಾತ್ರ… ಸಿಎಂ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ…

ಮೆಟ್ರೊ ಮೇಲ್ಸೆತುವೆ ಕುಸಿದು ಭಾರಿ ದುರಂತ- 13 ಮಂದಿಯ ದಾರುಣ ಸಾವು: ಅವಶೇಷದಡಿ ನೂರಾರು ಪ್ರಯಾಣಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
