ತುಮಕೂರು:ಲವ್ ಮಾಡು ಅಂತಾ‌ ದಿನಾ ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯೊಬ್ಬ ಹುಡುಗಿಗೆ ಬಲವಂತವಾಗಿ ತಾಳಿ ಕಟ್ಟೋಕೆ ಪ್ರಯತ್ನಿಸಿದಾಗ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಕುಡುಗೋಲಿನಿಂದ ಕೊಲೆಗೈದಿರುವ ಘಟನೆ ಜಿಲ್ಲೆಯ ಶಿರಾ ತಾಲ್ಲೂಕಿನ ದೊಡ್ಡಗುಳ್ಳ ಗ್ರಾಮದ ಹೊರವಲಯದಲ್ಲಿ ಸೋಮವಾರ ನಡೆದಿದೆ.
ಕೊಲೆಯಾದ ವಿದ್ಯಾರ್ಥಿನಿ ದೊಡ್ಡಗುಳ್ಳ ಗ್ರಾಮದ ಕಾವ್ಯ (17). ಪ್ರಥಮ ಪಿಯುಸಿ ಓದುತ್ತಿದ್ದಳು.
ಆರೋಪಿ ಈರಣ್ಣ ಅದೇ ಗ್ರಾಮದವನು. ಕೆಲವು ದಿನಗಳಿಂದ ಬಾಲಕಿ ಕಾವ್ಯಾಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಎಂದಿನಂತೆ ಸೋಮವಾರ ಸ್ನೇಹಿತರ ಜತೆ ಹೋಗುತ್ತಿದ್ದ ಕಾವ್ಯಳನ್ನು ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ತಾನು ತಂದಿದ್ದ ತಾಳಿಯನ್ನು ಬಲವಂತವಾಗಿ ಕಟ್ಟಲು ಮುಂದಾಗಿದ್ದಾನೆ. ಈ ವೇಳೆ ಕಾವ್ಯ ಒಪ್ಪದಿದ್ದಾಗ ಹರಿತವಾದ ಕುಡುಗೋಲಿನಿಂದ ಕತ್ತು ಕುಯ್ದ ಕೊಂದೇ ಬಿಟ್ಟಿದ್ದಾನೆ.
ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಿಡಿಗೇಡಿ ಈರಣ್ಣ ಸ್ಥಳದಿಂದ ಪರಾರಿಯಾಗಿದ್ದಾನೆ. ಈತ ಕುರಿ ಕಾಯೋ ಕೆಲಸ ಮಾಡ್ತಿದ್ದ. ಈ ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ‌. ಪರಾರಿಯಾಗಿದ್ದ ಈರಣ್ಣನನ್ನ ಪೊಲೀಸರು ಬಂಧಿಸಿದ್ದಾರೆ.
ವಿಷವನ್ನೇನಾದ್ರೂ ಟೆಸ್ಟ್​ ಮಾಡೋಕೆ ಆಗತ್ತೇನ್ರಿ? ಅವಕಾಶ ಕೊಟ್ರೆ ಮುಗೀತು ಅಲ್ಲಿಗೆ…

ತುಳಿತಕ್ಕೊಳಗಾದವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ತಿಲ್ವಾ ಎಂದು ತಮ್ಮದೇ ಪಕ್ಷವನ್ನು ತಿವಿದ ಮುನಿಯಪ್ಪ

ಒಂಟಿ ಕಾಲಿನಲ್ಲಿ ಬಂಗಾಳ ಗೆಲ್ಲುವೆ- ಮುಂದೆ ಎರಡೂ ಕಾಲಲ್ಲಿ ದೆಹಲಿ ಗೆದ್ದು ಬರುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eleven =
Remember me
