ಕಾಸರಗೋಡು:ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿರುವ ಪ್ರಸಿದ್ಧ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.
ಈ ದೇವಸ್ಥಾನ ಕೆರೆಯ ಮಧ್ಯದದಲ್ಲಿದ್ದು, ಮಂಗಳೂರಿನಿಂದ ಸುಮಾರು 45 ಕಿಲೋ ಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ. ಕೆರೆಯ ಮಧ್ಯೆ ನಿಂತಿರುವುದರಿಂದ ಈ ದೇಗುಲದ ಸೌಂದರ್ಯ ಹಾಗೂ ಇಲ್ಲಿಯ ವಾತಾವರಣದಿಂದಾಗಿ ಇದು ಪ್ರಸಿದ್ಧಿ ಪಡೆದಿದೆ.
ಈ ಮೊಸಳೆ ಬಹಳ ವರ್ಷಗಳಿಂದ ದೇಗುಲದ ಕೆರೆಯಲ್ಲಿಯೇ ವಾಸವಾಗಿದೆ. ಇದಕ್ಕೆ ಬಬಿಯಾ ಎಂದು ಹೆಸರು ಇಡಲಾಗಿದೆ. ಆದರೆ ಇದೆಂದೂ ಕೆರೆ ಬಿಟ್ಟು ಮೇಲೆ ಬಂದಿರಲಿಲ್ಲ. ಆದರೆ ದೇಗುಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊಸಳೆ ಬಬಿಯಾ ಗರ್ಭಗುಡಿ ಒಳಗೆ ಪ್ರವೇಶಿಸಿರುವುದು ಅಚ್ಚರಿ ಮೂಡಿಸಿದೆ. ಇದೊಂದು ಪವಾಡ ಎನ್ನುತ್ತಿದ್ದಾರೆ ಭಕ್ತರು.
ಇದನ್ನೂ ಓದಿ:ಕರೊನಾ ಕರಿಛಾಯೆಯಲ್ಲೂ ಜಗಮಗಿಸಲಿದೆ ಅಯೋಧ್ಯೆ; ಈ ಸಲ ದೀಪೋತ್ಸವ ಎಂದಿಗಿಂತ ಅದ್ದೂರಿ!
ಈ ಮೊಸಳೆಗೆ ಪ್ರತಿದಿನ ದೇವರಿಗಿಟ್ಟ ಅಣ್ಣ ನೈವೇದ್ಯವನ್ನು ನೀಡಲಾಗುತ್ತದೆ. ದೇಗುಲದ ಅರ್ಚಕರು ಪೂಜೆಯ ಬಳಿಕ ಬಬಿಯಾ ಎಂದು ಕರೆದಾಗ ಮೊಸಳೆ ಕೆರೆಯಿಂದ ಸ್ವಲ್ಪ ಮೇಲಕ್ಕೆ ಬಂದು ಅನ್ನ ಪ್ರಸಾದ ಸೇವಿಸುತ್ತದೆ. ಆದರೆ ಕೆರೆಬಿಟ್ಟು ಹೋರಬಂದಿರಲಿಲ್ಲ.
ಈ ಮೊಸಳೆ ಬಹಳ ವರ್ಷಗಳಿಂದ ದೇಗುಲದ ಕೆರೆಯಲ್ಲಿದ್ದು, ಅದು ಇಲ್ಲಿವರೆಗೆ ಯಾವುದೇ ಜೀವಿಗಳಿಗೆ ಹಾನಿ ಮಾಡಿದ ಉದಾಹರಣೆಗಳೇ ಇಲ್ಲ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಮೂರನೆಯ ಪತಿ ಜತೆಯೂ ಬಿರುಕು? ಗಂಡ ಸರಿಯಿಲ್ಲ ಎಂದು ಕಣ್ಣೀರಿಟ್ಟ ಬಿಗ್​ಬಾಸ್​ ಸ್ಪರ್ಧಿ, ನಟಿ

ಜೆಡಿಎಸ್​ ಬಿಟ್ಟು ‘ಕೈ’ ಸೇರಿದ ಅಕ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
