ಚಿಕ್ಕಮಗಳೂರು:ಸರ್ವಜ್ಞ ಅಲ್ಲ ಅನ್ನೋದು ಅಸಂವಿಧಾನಕ ಪದನಾ? ನಿಂದನೆನಾ ? ಟೀಕೆನಾ?…. ಯಾರೇ ಆಗಿದ್ದರೂ ಎಲ್ಲವನ್ನೂ ತಿಳಿದವರು ಒಬ್ಬರೂ ಇಲ್ಲ. ಹಾಗೇ ಎಲ್ಲವನ್ನೂ ತಿಳಿದವರು ಇದ್ದಿದ್ದರೆ ವೈರಸ್ ಹುಟ್ಟು. ನಿಯಂತ್ರಣ, ಅದರ ಸಾವು ಎಲ್ಲವನ್ನೂ ನಿಂತಲ್ಲೆ ಮಾಡಿ ಬಿಡೋರು…
ಹೀಗೆ ಆಕ್ರೋಶ ಹೊರಹಾಕಿದವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಲಸಿಕೆ ನೀಡಿಕೆ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸದಾನಂದಗೌಡರು ಮಾತನಾಡುತ್ತಿದ್ದ ವೇಳೆ, ಸುಪ್ರೀಂಕೋರ್ಟ್‌ ನೀಡಿರುವ ಹೇಳಿಕೆ ಬಗ್ಗೆ ಹೇಳಿದ್ದ ಅವರು, ಲಸಿಕೆಯೇ ತಯಾರಾಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದಾ ಎಂದಿದ್ದರು. ಇದಕ್ಕೆ ದನಿಗೂಡಿಸಿದ್ದ ರವಿ, ನ್ಯಾಯಾಧೀಶರೇನು ಸರ್ವಜ್ಞರಲ್ಲ. ತಜ್ಞರ‌ ಸಮಿತಿ ನೀಡುವ ವರದಿಯನ್ನ ಆಧರಿಸಿಯೇ ಕೆಲಸ‌ ಮಾಡಲಾಗುತ್ತೆ ಎಂದು ಕೇಂದ್ರ ಹೇಳಿದೆ. ಕೇಂದ್ರದ ಈ ವಾದವನ್ನು ಸುಪ್ರೀಂ ಕೋರ್ಟ್‌ ಕೂಡಾ ಒಪ್ಪಿದೆ ಎಂದು ಹೇಳಿದ್ದರು.
ಆದರೆ ಸರ್ವಜ್ಞ ಅಲ್ಲ ಎನ್ನುವುದನ್ನೇ ಮುಂದುಮಾಡಿಕೊಂಡು ಪ್ರತಿಪಕ್ಷಗಳು ಭಾರಿ ಟೀಕೆ ಮಾಡುತ್ತಿವೆ. ಇದಕ್ಕೆ ಈಗ ಈ ರೀತಿಯಾಗಿ ಮತ್ತೊಮ್ಮೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.ಯಾವುದೇ ಅಗೌರವದ ಮಾತನ್ನು ನಾನು ಕೋರ್ಟ್‌ ವಿರುದ್ಧ ಹೇಳಲಿಲ್ಲ. ಕೋರ್ಟ್ ಕೂಡ ತಾಂತ್ರಿಕ ಸಮಿತಿಯ ವರದಿಯನ್ನ ಅಧರಿಸಿ ನಿರ್ದೇಶನ ಕೊಡುತ್ತದೆ. ಸುಪ್ರಿಂ ಕೋರ್ಟ್ ಹೇಳಿಯೆ ಟೆಕ್ನಿಕಲ್ ಕಮಿಟಿ ನೇಮಕ ಮಾಡಿದೆ ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಅಗೌರವದ ಮಾತು ಏನಿದೆ? ಅಪನಂಬಿಕೆ ದೃಷ್ಟಿಯಲ್ಲಿ ನೋಡಿದ್ದರೆ ಅದು ನೋಡಿದವರ ತಪ್ಪು. ಮೋಸರಲ್ಲಿ ಕಲ್ಲು ಹುಡುಕೋದೆ ಅವ್ರ ಕೆಲ್ಸ. ತಪ್ಪು ಅಭಿಪ್ರಾಯ ರೂಪಿಸುವ ಕೆಲಸ ಮಾಡಿದರೆ ಏನೂ ಮಾಡಲು ಆಗಲ್ಲ ಎಂದರು.
ಕೆಲವರಿಗೆ ವೈಚಾರಿಕ ಕಾರಣಕ್ಕೆ ಸಿಟಿ ರವಿ ಕಂಡ್ರೆ ಅಗಲ್ಲ. ಇನ್ನೂ ಕೆಲವರಿಗೆ ಹೊಟ್ಟೆ ಕಿಚ್ಚಿನ ಪರಮಾವಧಿ ಅದಕ್ಕೆ ತಪ್ಪು ಹುಡುಕುವ ಕೆಲಸ ಮಾಡುತ್ತಾರೆ ಎಂದರು.
ತಮ್ಮಂದಿರಿಗಾಗಿ ಅಣ್ಣ ಬಹಳ ಖರ್ಚು ಮಾಡಿದರೆ ಅವರ ಆಸ್ತಿಯ ಭಾಗ ಆತ ಇಟ್ಟುಕೊಳ್ಳಬಹುದೆ?

70 ಹೆಚ್ಚುವರಿ ಸಹಾಯವಾಣಿ- ಇನ್ನುಮುಂದೆ ಕರೆ ಮಾಡಿ ಕಾಯುವ ಅಗತ್ಯವಿಲ್ಲ ಎಂದ ಸಚಿವ ಲಿಂಬಾವಳಿ

ಒಂದು ಸಾವಿನ ನೋವು ಮರೆಯುವ ಮುನ್ನವೇ ಡಿಸಿಎಂ ಸವದಿ ಕುಟುಂಬಕ್ಕೆ ಮತ್ತೊಂದು ಆಘಾತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
