ಬೆಂಗಳೂರು:ಕೋವಿಡ್​- 19 ಸಮಯದಲ್ಲಿ ಹೊಸ ವ್ಯಾಪಾರ ಶುರು ಮಾಡಲು ಹೊರಟ ಉದ್ಯಮಿಗೆ ಮತ್ತು ಕರೊನಾ ಚಿಕಿತ್ಸೆಗೆ ಯಂತ್ರ, ಔಷಧ ಖರೀದಿಗೆ ಮುಂದಾಗುವರಿಗೂ ಸೈಬರ್​ ಕಳ್ಳರು ವಂಚನೆ ಮಾಡಿದ್ದಾರೆ. ಆಕ್ಸಿಜನ್​ ಪೂರೈಕೆ ಯಂತ್ರ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ 12.69 ಲಕ್ಷ ರೂ. ಪಡೆದು ವಂಚನೆ ಮಾಡಿದ್ದರೇ ಮತ್ತೊಂದು ಪ್ರಕರಣದಲ್ಲಿ ರೆಮ್​ಡೆಸಿವಿರ್​ ಚುಚ್ಚುಮದ್ದು ಏಜೆನ್ಸಿ ಆಮಿಷವೊಡ್ಡಿ ವ್ಯಾಪಾರಿಯಿಂದ 4.70 ಲಕ್ಷ ರೂ. ಪಡೆದು ಮಾಡಿದ್ದಾರೆ.
ಭೂಪಸಂದ್ರದ 48 ವರ್ಷದ ವ್ಯಕ್ತಿ, ಕೋವಿಡ್​ ಚಿಕಿತ್ಸೆ ಕೊಡುವಾಗ ಬಳಸುವ ಆಕ್ಸಿಜನ್​ ಯಂತ್ರ ಖರೀದಿಸಲು ಆನ್​ಲೈನ್​ನಲ್ಲಿ ಸರ್ಚ್​ ಮಾಡಿ ಸುರಭಿ ಎಂಟರ್​ ಪೆ.ಲಿ.ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ವ್ಯಕ್ತಿ ಆಕ್ಸಿಜನ್​ ಯಂತ್ರ ಕಳುಹಿಸುವುದಾಗಿ ಹೇಳಿ ಮೇ 2ರಿಂದ 8ವರೆಗೂ ಹಂತ ಹಂತವಾಗಿ ನಾನಾ ಕಾರಣ ಹೇಳಿ 12.69 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ. ಮತ್ತೆ ಹಣ ಕೇಳಿದ್ದಾಗ ಅನುಮಾನ ಬಂದು ತಾನು ಕೊಟ್ಟಿರುವ ಹಣ ವಾಪಸ್​ ಕೇಳಿದ್ದಾರೆ. ಆರೋಪಿ ಕರೆ ಸ್ಥಗಿತ ಮಾಡಿದ್ದಾನೆ. ನೊಂದ ವ್ಯಕ್ತಿ, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜಾಲಹಳ್ಳಿಯ 42 ವರ್ಷದ ವ್ಯಕ್ತಿ, ತನ್ನ ತಾಯಿಗೆ ಅನಾರೋಗ್ಯದ ಆನ್​ಲೈನ್​ನಲ್ಲಿ ಔಷಧ ಆರ್ಡರ್​ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಔಷಧ 20 ಸಾವಿರ ರೂ. ಆಗುತ್ತದೆ. ಮೊದಲು ಹಣ ನೀಡಿದರೇ ಮನೆಗೆ ಪಾರ್ಸೆಲ್​ ಕಳುಹಿಸುವುದಾಗಿ ಹೇಳಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಎಷ್ಟು ಹೊತ್ತಾದರೂ ಔಷಧ ಬಾರದೆ ಇದ್ದಾಗ ವಾಪಸ್​ ಕರೆ ಮಾಡಿದ್ದಾರೆ. ಅಷ್ಟೊತ್ತಿಗೆ ಅಪರಿಚಿತ ವ್ಯಕ್ತಿ ಮೊಬೈಲ್​ ನಂಬರ್​ ಸ್ವಿಚ್​ ಆ್​ ಆಗಿತ್ತು. ಕೊನೆಗೆ ಗ್ರಾಹಕ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಎಲ್ಲ ಪ್ರಕರಣಗಳು ಒಂದೇ ದಿನ ನಡೆದಿದ್ದು, ಉತ್ತರ ವಿಭಾಗ ಸಿಇಎನ್​ ಠಾಣೆಯಲ್ಲಿ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೆಮ್​ಡೆಸಿವಿರ್​ ಏಜೆನ್ಸಿ ಸೋಗದಲ್ಲಿ ವಂಚನೆಬನಶಂಕರಿ 2ನೇ ಹಂತದಲ್ಲಿ ಔಷಧ ಸರಬರಾಜು ಏಜೆನ್ಸಿ ನಡೆಸುವ ವ್ಯಾಪಾರಿ, ಕರೊನಾ ಸೋಂಕಿಗೆ ನೀಡುತ್ತಿರುವ ರೆಮ್​ಡೆಸಿವಿರ್​ ಚುಚ್ಚುಮದ್ದು ಏಜೆನ್ಸಿ ಪಡೆಯಲು ಹುಡುಕಾಟ ನಡೆಸುತ್ತಿದ್ದರು. ಆಗ ಗುಜರಾತ್​ ಮೂಲದ ಕೌಶಲ್​ ಮಹೇಂದ್ರ ಕುಮಾರ್​ ಎಂಬಾತ ಕರೆ ಮಾಡಿ ರೆಮ್​ಡೆಸಿವಿರ್​ ಏಜೆನ್ಸಿ ಕೊಡಿಸುವುದಾಗಿ ಹೇಳಿ ನಂಬಿಸಿ 4.70 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆನಂತರ ವ್ಯಾಪಾರಿಯ ಕರೆ ಸ್ವೀಕರಿಸಿದೆ ಇದ್ದಾಗ ಅವರ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ದಣ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸರಿಗಮಪ ಖ್ಯಾತಿಯ ಸಿಂಗರ್ ಸುಬ್ರಮಣಿ ಪತ್ನಿ ಸಾವಿಗೆ ಬಿಗ್‌ ಟ್ವಿಸ್ಟ್‌- ಮೃತಪಟ್ಟಿರೋದು ಕರೊನಾದಿಂದ ಅಲ್ಲ!

ಮೇ 16ರಂದು ರಾಜ್ಯಕ್ಕೆ ಅಪ್ಪಳಿಸಲಿದೆ ಚಂಡಮಾರುತ: ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರಿ ಮಳೆ

ಕೋವಿಡ್‌ ನಿಯಮ ಉಲ್ಲಂಘಿಸಿ ವಾಹನ ಬಳಸಿ ಕ್ಯಾರೇ ಅನ್ನದೇ ತಿರುಗಾಟ – ಪಪ್ಪೂ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
