ದಾವಣಗೆರೆ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ 9 ತಿಂಗಳ ಮಗುವಿಗೆ ನೇಣುಬಿಗಿದು ಸಾಯಿಸಿ ನಂತರ ತಾಯಿಯೂ ಮೃತಪಟ್ಟಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಮೃತರನ್ನು ನಿಖಿತಾ (25) ಹಾಗೂ ಅನೀಶ್ (9 ತಿಂಗಳು) ಎಂದು ಗುರುತಿಸಲಾಗಿದೆ. ನಿಖಿತಾ ಅವರ ವಿವಾಹವು ಕಳೆದ ವರ್ಷ ದಾವಣಗೆರೆ ಮೂಲದ ಇಂಜಿನಿಯರ್ ಮನೋಜ್ ಕುಮಾರ್​ ಜತೆ ನಡೆದಿತ್ತು. ಮನೋಜ್​ ದಾವಣಗೆರೆ ಪಾಲಿಕೆಯಲ್ಲಿ ಇಂಜಿನಿಯರ್​ ಆಗಿದ್ದಾರೆ. ಆದರೆ ದಂಪತಿ ನಡುವೆ ಕಲಹ ಉಂಟಾಗಿತ್ತು ಎನ್ನಲಾಗಿದೆ.
ನಿಖಿತಾ ಅವರು ತವರಿಗೆ ವಾಪಸಾಗಿ ಅಮ್ಮನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಇವರ ತಂದೆ-ತಾಯಿ ಇಬ್ಬರೂ ಶಿಕ್ಷಕರು. ಅವರು ಶಾಲೆಗೆ ಹೋದಾಗ ಮಗುವಿಗೆ ನೇಣು ಹಾಕಿ ನಂತರ ತಾವು ಮೃತಪಟ್ಟಿದ್ದಾರೆ ನಿಖಿತಾ. ಪಾಲಕರು ಮನೆಗೆ ಬಂದಾಗ ವಿಷಯ ತಿಳಿದಿದೆ. ಮಗಳಿಗೆ ಆರು ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಚಿನ್ನಾಭರಣ ಕೊಟ್ಟು ಮದುವೆ ಮಾಡಿದ್ದೆವು. ಆದರೆ ಇನ್ನೂ ಅಳಿಯನ ಹಣದ ದಾಹ ತೀರಿರಲಿಲ್ಲ. ಮಗಳಿಗೆ ಚಿತ್ರಹಿಂಸೆ ಕೊಡುತ್ತಿದ್ದ ಎಂದು ನಿಖಿತಾ ಪಾಲಕರು ಆರೋಪಿಸಿದ್ದಾರೆ. ಹಿಂಸೆ ತಾಳದೇ ಮಗಳು ಮನೆಗೆ ವಾಪಸಾಗಿದ್ದಳು. ಅಳಿಯ ಮಾತ್ರ ತನ್ನ ತಾಯಿಯ ಮಾತು ಕೇಳಿ ದಿನನಿತ್ಯ ಫೋನಿನಲ್ಲಿಯೂ ಹಿಂಸೆ ಕೊಡುತ್ತಿದ್ದ. ಇದರಿಂದ ಮಗಳು ಇಂಥ ಕೃತ್ಯ ಎಸಗಿದ್ದಾಳೆ ಎಂದು ಕಣ್ಣೀರಿಡುತ್ತಿದ್ದಾರೆ.
ಜಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ಯಾಂಗ್​ರೇಪ್​ ಆರೋಪಿಗಳಿಗೆ ಫೈವ್​ಸ್ಟಾರ್​ ಬಿರಿಯಾನಿ? ಕಾಂಡೋಮ್​ ಬಳಸಿದ್ದವರಿಗೆ ವಿಐಪಿ ಟ್ರೀಟ್​ಮೆಂಟ್​!

‘ತಂಗೀ… ಗಂಡನ ಜತೆ ಮನೆಗೆ ಊಟಕ್ಕೆ ಬಾ’ ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

ಕೋಳಿ ಮೊಟ್ಟೆ ಇಟ್ಟಿದ್ದೇ ಆಯ್ತು ಭಾರಿ ಸುದ್ದಿ: ರಾತ್ರೋರಾತ್ರಿ ಸ್ಟಾರ್​ ಆದ ಈ ಚಿನ್ನು ಮಾಡಿದ್ದೇನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
