ದಾವಣಗೆರೆ:ಯುವಕನೊಬ್ಬನನ್ನು ಪ್ರೇಮಿಸಿ ಮೋಸ ಹೋದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಸಾಯುವ ಮೊದಲು ವಿಡಿಯೋ ಮಾಡಿ ಎಳೆಎಳೆಯಾಗಿ ಎಲ್ಲ ವಿಷಯವನ್ನು ಹೇಳಿದ್ದಾಳೆ.
ಭರತ್ ಕಾಲೊನಿ ನಿವಾಸಿ ಆಶಾ (24) ಆತ್ಮಹತ್ಯೆಗೀಡಾದ ಯುವತಿ. ಮೋಸ ಮಾಡಿದ ಪ್ರೇಮಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಯುವತಿ ತೋಡಿಕೊಂಡಿದ್ದಾಳೆ. ಬಂಬೂ ಬಜಾರ್ ನಿವಾಸಿ ಈರಣ್ಣನನ್ನು ಪ್ರೀತಿಸುತ್ತಿದ್ದ ಆಶಾ ಪ್ರೀತಿಸುತ್ತಿದ್ದಳು.
ಬೆಸ್ಕಾಂ ನೌಕರನಾಗಿರುವ ಈರಣ್ಣ ಆಶಾಳಿಂದ ರೂ. 2 ಲಕ್ಷ ಹಾಗೂ ಚಿನ್ನಾಭರಣ ಕೂಡ ಪಡೆದಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ. ಇದರಿಂದ ಆಶಾ ಆತನನ್ನು ನಂಬಿಕೊಂಡಿದ್ದಳು. ನಂತರ ಪ್ರೀತಿಸುವ ನೆಪದಲ್ಲಿ ಆಕೆಯನ್ನು ಬಳಸಿಕೊಂಡಿದ್ದ. ನಂತರ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ.
ನಂತರ ಆತನಿಗೆ ಇದಾಗಲೇ ಮದುವೆಯಾಗಿರುವುದು ಆಶಾಳಿಗೆ ತಿಳಿದಿದೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರೀತಿಸಿದವನಿಂದ ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಈರಣ್ಣ ನನಗೆ ಮೋಸ ಮಾಡಿದ್ದಾನೆ, ಅವನು ಸರಿಯಿಲ್ಲ ಎಂದು ನನ್ನ ಅಪ್ಪ ಅಮ್ಮ ಹೇಳಿದರೂ ಕೇಳಲಿಲ್ಲ. ಅವನನ್ನೇ ನಂಬಿದೆ. ಮದುವೆಯಾಗಿದ್ದರೂ ಆಗಿಲ್ಲ ಎಂದು ಸುಳ್ಳು ಹೇಳಿದ್ದ. ಈಗ ನನಗೆ ಬದಕುವ ಅರ್ಹತೆಯಿಲ್ಲ. ಸಾಯಲು ನಿರ್ಧರಿಸಿದ್ದೇನೆ. ಮೋಸ ಮಾಡಿದ ಈರಣ್ಣನಿಗೆ ಗಲ್ಲು ಶಿಕ್ಷೆ ಕೊಡಿಸಿ ಎಂದು ಆಶಾ ಹೇಳಿದ್ದಾಳೆ.
ಕೆಇಬಿಯಲ್ಲಿ ತುಂಬಾ ಮಂದಿ ಹುಡುಗರು ಇದ್ದಾರೆ. ಅಲ್ಲಿ ಇರೋರನ್ನು ಯಾರೂ ನಂಬಬೇಡಿ. ನಂಬಿ ಮೋಸ ಹೋಗಬೇಡಿ. ಪ್ರೀತಿಯ ಹೆಸರಿನಲ್ಲಿ ಮೋಸ ಹೋಗಬೇಡಿ. ನನ್ನಂತೆ ಸಾಯುವುದೊಂದೇ ದಾರಿಯಾಗುತ್ತದೆ ಎಂದು ಆಶಾ ವಿಡಿಯೋದಲ್ಲಿ ಹೇಳಿದ್ದಾಳೆ. ದಾವಣಗೆರೆಯ ಆರ್‌ಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಡಿಯೋದಲ್ಲಿ ಯುವತಿ ಹೇಳಿದ್ದೇನು?
ಯುವಕನೊಬ್ಬನನ್ನು ಪ್ರೇಮಿಸಿ ಮೋಸ ಹೋದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಸಾಯುವ ಮೊದಲು ವಿಡಿಯೋ ಮಾಡಿ ಎಳೆಎಳೆಯಾಗಿ ಎಲ್ಲ ವಿಷಯವನ್ನು ಹೇಳಿದ್ದಾಳೆ.pic.twitter.com/phyVpfFwwF
— Vijayavani (@VVani4U)June 6, 2021

ಯುವಕನೊಬ್ಬನನ್ನು ಪ್ರೇಮಿಸಿ ಮೋಸ ಹೋದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಸಾಯುವ ಮೊದಲು ವಿಡಿಯೋ ಮಾಡಿ ಎಳೆಎಳೆಯಾಗಿ ಎಲ್ಲ ವಿಷಯವನ್ನು ಹೇಳಿದ್ದಾಳೆ.pic.twitter.com/74TEedOEFF
— Vijayavani (@VVani4U)June 6, 2021

ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

ತ್ರಿಮೂರ್ತಿ ಚಿತ್ರದ ಖ್ಯಾತಿಯ ನಟಿ ಇನ್ನಿಲ್ಲ: ಡಾ.ರಾಜ್‌ ಜತೆ ಆರು ಚಿತ್ರಗಳಲ್ಲಿ ನಟಿಸಿರುವ ತಾರೆ ಇವರು…

ಷಾರ್ಟ್‌ ಸರ್ಕೀಟ್‌ನಿಂದಾಗಿ ಬ್ಯಾಂಕ್‌ಗೆ ಬೆಂಕಿ- ಅಗ್ನಿಗಾಹುತಿಯಾದ ಮಹತ್ವದ ದಾಖಲೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
