ದಾವಣಗೆರೆ:ತೊಟ್ಟಿಲ ಶಾಸ್ತ್ರಕ್ಕೆ ಬಂದು ಸಿಹಿ ಪದಾರ್ಥ ಸೇವನೆ ಮಾಡಿದ 49 ಮಂದಿ ಅಸ್ವಸ್ಥರಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ‌ ಭಾನುವಳ್ಳಿಯಲ್ಲಿ‌ ಖಾಸಗಿ ವ್ಯಕ್ತಿಯೊಬ್ಬರ ತೊಟ್ಟಿಲ ಕಾರ್ಯಕ್ರಮದಲ್ಲಿ‌ ಈ ಅನಾಹುತ ಸಂಭವಿಸಿದೆ. ಮಕ್ಕಳು, ವಯಸ್ಕರು ಸೇರಿ 49 ಮಂದಿ ಅಸ್ವಸ್ಥರಾಗಿದ್ದಾರೆ. ಎಲ್ಲರನ್ನೂ ಹರಿಹರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯವಾಗಲಿಲ್ಲ.
ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತೊಟ್ಟಿಲ ಶಾಸ್ತ್ರದ ಹಿನ್ನೆಲೆಯಲ್ಲಿ ಸಿಹಿ ಅಡುಗೆ ಮಾಡಲಾಗಿತ್ತು. ಅದನ್ನು ಸೇವಿಸುತ್ತಿದದಂತೆಯೇ 45ಕ್ಕೂ ಹೆಚ್ಚು ಜನರಿಗೆ ವಾಂತಿ ಶುರುವಾಗಿದೆ. ತಕ್ಷಣ, ಅವರನ್ನು ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ.
ಕೆಲವರು ಕೂಡಲೇ ಗುಣಮುಖರಾಗಿದ್ದರೆ, ಒಂದು ಮಗು ಸೇರಿದಂತೆ ಇನ್ನು ಕೆಲವರನ್ನು ಹೆಚ್ಚುವರಿ‌ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಹೆಣ್ಣೆಂಬ ಕಾರಣಕ್ಕೆ ಈ ಪ್ರತಿಭಾನ್ವಿತ ಅಥ್ಲೆಟ್​ನ ಕನಸು ನುಚ್ಚುನೂರು,​ ತಂಡದಿಂದ ಕೈಬಿಟ್ಟ ಕ್ರೀಡಾ ಪ್ರಾಧಿಕಾರ!

ಎಂಪಿ, ಎಂಎಲ್​ಎಗಳಿಗೆ ಶಾಕ್​ ನೀಡಿದ ‘ಸುಪ್ರೀಂ’: ಒಮ್ಮೆ ಕೇಸ್​ ದಾಖಲಾದ್ರೆ ವಾಪಸ್​ ಪಡೆಯೋದು ಇನ್ನು ಸುಲಭವಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
