ನೆಲಮಂಗಲ:ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ನೆಲಮಂಗಲ ಬಾರ್ ವೊಂದಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಕುಡುಕರು ಗಾಬರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪರಸ್ಪರ ಅಂತರ ಕಾಯ್ದುಕೊಳ್ಳದೆ ಕರೊನಾ ನಿಯಮ ಉಲ್ಲಂಘಿಸಿ ಎಣ್ಣೆ ಹೀರುವುದರಲ್ಲಿ ತಲ್ಲೀನರಾಗಿದ್ದ ಕುಡುಕರು ಡಿಸಿ ಹಾಗೂ ಅಧಿಕಾರಿಗಳ ತಂಡ ಎಂಟ್ರಿ ಆಗುತ್ತಿದ್ದಂತೆ ತಡಬಡಾಯಿಸಿ ಹೊರ ಓಡಿದ್ದಾರೆ.
ಯಾರು ಬಂದಿದ್ದಾರೆ, ಯಾಕೆ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದ ಗ್ರಾಹಕರು ಕುಡಿದ ಬಿಲ್ ಸಹ ನೀಡದೆ ಜಾಗ ಖಾಲಿ ಮಾಡಿದ್ದಾರೆ.
ತುಂಬಿ ತುಳುಕುತ್ತಿದ್ದ ಬಾರ್ ಕ್ಷಣಾರ್ಧದಲ್ಲಿ ಖಾಲಿಯಾಗಿದೆ. ಬಾರ್ ಮಾಲೀಕರನ್ನು ತರಾಟೆ ತೆಗೆದುಕೊಂಡ ಜಿಲ್ಲಾಧಿಕಾರಿ ಕರೊನಾ ನಿಯಮ ಉಲ್ಲಂಘನೆಯಡಿ ನೋಟಿಸ್ ಜಾರಿ‌ಮಾಡಿದ್ದಾರೆ. ಕುಡುಕರ ದೌಡು ಕಂಡ ಸಾರ್ವಜನಿಕರಿಗೆ ಬಿಟ್ಟಿ ಮನರಂಜನೆ ಸಿಕ್ಕಿದಂತಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಇಂದಿನಿಂದ ಎಲ್ಲ ಸೇವೆಗಳೂ ಸ್ಥಗಿತ- ಸುತ್ತೋಲೆ

ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

ಕರೊನಾ ಲಸಿಕೆ ಹಾಕಿಸಿಕೊಳ್ಳಲು ಬನ್ನಿ- ಹೋಗುವಾಗ ಉಚಿತ ಟೊಮ್ಯಾಟೋ ತುಂಬಿಸಿಕೊಳ್ಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
