ಅಥಣಿ:ಕೆಲ ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಣ್ಣನ ಮಗ ವಿನೋದ ಕೋವಿಡ್‌ಗೆ ಮೃತಪಟ್ಟಿದ್ದರು. ಇದರ ನೋವು ಆರುವ ಮುನ್ನವೇ ಮತ್ತೊಂದು ಆಘಾತ ಈ ಕುಟುಂಬಕ್ಕಾಗಿದ್ದು, ಇದೀಗ ಇವರ ಸಹೋದರ ಕರೊನಾಗೆ ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ ಲಕ್ಷ್ಮಣ ಸವದಿ ಅವರ ಅಣ್ಣ ದುಂಡಪ್ಪನವರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಅಥಣಿ ತಾಲೂಕು ಆಡಳಿತದಿಂದ ಸ್ಥಾಪಿಸಲಾದ ಕೋವಿಡ್ ಸೆಂಟರ್ ಉದ್ಘಾಟನೆಗೆ ಹಾಜರಾಗಿದ್ದ ಲಕ್ಷ್ಮಣ ಸವದಿ ಅವರು ಇಬ್ಬರನ್ನೂ ನೆನೆದು ಕಣ್ಣೀರು ಸುರಿಸಿದರು. ಬೆಳಗ್ಗೆ ಸಹೋದರ ತೀರಿಹೋಗಿರುವ ಕುರಿತು ವಿವರಣೆ ನೀಡಿದ ಡಿಸಿಎಂ, ಈ ಹಂತದಲ್ಲಿ ಬಹಳ ಭಾವುಕರಾದರು. ಕೆಲ ದಿನಗಳ ಹಿಂದೆ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ‌ ಸವದಿ ಅವರ ಪುತ್ರ ವಿನೋದ ಪರಪ್ಪ (36) ಮೃತಪಟ್ಟಿದ್ದರು.
ನಂತರ ಮಾತನಾಡಿದ ಅವರು, ಇಂಥ ಸ್ಥಿತಿ ಯಾರಿಗೂ ಬರಬಾರದು ಎಂದು ಹೇಳುವ ಮೂಲಕ 50 ಲಕ್ಷ ರೂಪಾಯಿಗಳಷ್ಟು ಕೋವಿಡ್ ಚಿಕಿತ್ಸೆಯ ಸಲಕರಣೆಗಳನ್ನು ಸ್ವಂತ ಖರ್ಚಿನಲ್ಲಿ ನೀಡಿದರು.
ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

ಸೋನಿಯಾಗೆ ಹೆರಿಗೆ ಮಾಡಿಸಿದ್ದ ಸ್ತ್ರೀರೋಗ ತಜ್ಞೆ ಕೋವಿಡ್‌ನಿಂದ ಸಾವು- ಎರಡೂ ಲಸಿಕೆ ಪಡೆದಿದ್ದ ವೈದ್ಯೆ

ಕರೊನಾ ನಡುವೆ ನಿಗೂಢ ರೋಗ: ಕಲಬುರಗಿಯ ಒಂದೇ ಗ್ರಾಮದ 26 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
