ಹಾಸನ:ಪಾಲಕರು ಬೇಡವೆಂದರೂ ಕೇಳದೇ ಆತನನ್ನೇ ಮದುವೆಯಾಗುವುದಾಗಿ ಹೇಳಿದ 20 ವರ್ಷದ ಯುವತಿ ಆತ್ಮಹತ್ಯೆಯ ಹಾದಿ ಹಿಡಿದು ಇದೀಗ ಹೆತ್ತವರನ್ನು ಕಣ್ಣೀರಿನಲ್ಲಿ ತೇಲಿಸಿದ್ದಾಳೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದ ಪೂಜಾ (20) ಮೃತ ದುರ್ದೈವಿ. ಸಕಲೇಶಪುರದ ಅಶ್ವಥ್ ಮತ್ತು ಶೃತಿ ಪರಸ್ಪರ ಪ್ರೀತಿಸುತ್ತಿದ್ದರು. 5 ತಿಂಗಳ ಹಿಂದೆ ಈ ವಿಚಾರ ತಿಳಿದ ಪಾಲಕರು ಇವರಿಬ್ಬರ ಪ್ರೀತಿಗೆ ವಿರೋಧಿಸಿ ಪೂಜಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥ ನೆರವೇರಿಸಿದ್ದರು. ಇದಾದ 20 ದಿನಕ್ಕೆ ಮನೆಯವರ ವಿರೋಧದ ನಡುವೆಯೂ ಪೂಜಾ, ತನ್ನ ಪ್ರಿಯಕರ ಅಶ್ವಥ್ ಜತೆ ಮದುವೆ ಆಗಿದ್ದಳು.
ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 5 ತಿಂಗಳಿಗೆ ಇವರಿಬ್ಬರ ಪ್ರೀತಿ ದುರಂತ ಅಂತ್ಯಕಂಡಿದೆ. ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ, ಹೇಮಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಪೂಜಾ ಪ್ರಾಣ ಬಿಟ್ಟಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೂಜಾಳ ಪಾಲಕರು, ನನ್ನ ಮಗಳಿಗೆ ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿದ್ದರು. ಆಕೆಯ ಗಂಡನ ಮನೆಯವರ ಕಿರುಕುಳ ಸಹಿಸಲಾಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೋಳಾಡುತ್ತಿದ್ದಾರೆ.
ಈ ಘಟನೆ ನಡೆದು ಐದು ದಿನಗಳು ಕಳೆದಿವೆ. ಆಗಸ್ಟ್ 5ರಂದು ಸಕಲೇಶಪುರ ಹೇಮಾವತಿ ಸೇತುವೆಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪೂಜಾಳ ದೇಹ ಇನ್ನೂ ಸಿಗುತ್ತಿಲ್ಲ. ಮಗಳ ಮೃತ ದೇಹ ಸಿಗದೆ ದಿನವೂ ಹೊಳೆಯ ಬಳಿ ದಿನವೂ ತಂದೆ ತಾಯಿ ರೋಧಿಸುತ್ತಿದ್ದಾರೆ. ಹೇಮಾವತಿ ನದಿಯಲ್ಲಿ ಶೃತಿ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಮೊಕ್ಕಾಂ ಹೂಡಿದ್ದಾರೆ. ಅಗ್ನಿ ಶಾಮಕ ದಳ ದಿಂದ ಕಳೆದ 5 ದಿನದಿಂದ ಹುಡುಕಾಟ ನಡೆದಿದೆ.
40 ಚಪಾತಿ ತಿಂದು ದೃಷ್ಟಿ ಕಳೆದುಕೊಂಡ 12 ವರ್ಷದ ಬಾಲಕ! ತಲೆಯಲ್ಲಿ ಕೀವು: ವೈದ್ಯರೇ ಶಾಕ್‌

ಬಚ್ಚಲಲ್ಲಿ ಬಿದ್ದು ಬಾಗಿಲು ತೆರೆಯಲಾರದೇ ನರಳಾಡಿದ ನಟಿ ಲೀಲಾವತಿ: ಬೆನ್ನು ಮೂಳೆಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fourteen =
Remember me
