ಬೆಂಗಳೂರು:ಬೆಂಗಳೂರು ಪೊಲೀಸ್ರೇ ನನ್ನ ಹೆಂಡ್ತಿ ಓಡಿಹೋಗಿದ್ದಾಳೆ, ಹುಡುಕಿ ಕೊಡಿ ಪ್ಲೀಸ್​ ಎಂದು ದೆಹಲಿಯ ಪತಿಯೊಬ್ಬ ಬೆಂಗಳೂರು ಪೊಲೀಸರನ್ನು ಮನವಿ ಮಾಡಿಕೊಂಡಿದ್ದು ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಅವರು ಮನವಿ ಮಾಡಿಕೊಂಡಿರುವುದು ಟ್ವಿಟರ್​ ಮೂಲಕ!
ದೆಹಲಿಯ ಅರವಿಂದ್ ಎನ್ನುವವರು ಟ್ವೀಟ್​ ಮೂಲಕ ತಮ್ಮ ಪತ್ನಿಯನ್ನು ಹುಡುಕಿ ಕೊಡುವಂತೆ ಕೋರಿದ್ದಾರೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿರುವ ಅವರು, ನನ್ನ ಹೆಂಡ್ತಿ ಮತ್ತೊಬ್ಬನ ಜತೆ ಇರುತ್ತಾಳೆ. ಇಬ್ಬರು ಮಕ್ಕಳನ್ನು ಬಿಟ್ಟು ದೆಹಲಿಯಿಂದ ಬೆಂಗಳೂರಿಗೆ ಬಂದು ಬಿಟ್ಟಿದ್ದಾಳೆ. ಬಲವಂತವಾಗಿ ಆಕೆಯನ್ನು ಇಟ್ಟುಕೊಳ್ಳಲಾಗಿದೆ. ಈಗ ಎಲ್ಲಿದ್ದಾಳೋ ಗೊತ್ತಿಲ್ಲ. ಪತ್ನಿಯನ್ನು ಹುಡುಕಲು ನಿಮ್ಮ ಸಹಾಯ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ತಾವು ಪತ್ನಿ ಮತ್ತು ಮಗುವಿನ ಜತೆಗೆ ಇರುವ ಫೋಟೋ ಹಾಗೂ ಪತ್ನಿಯನ್ನು ಓಡಿಸಿಕೊಂಡು ಹೋಗಿದ್ದಾನೆ ಎಂಬ ವ್ಯಕ್ತಿಯ ಫೋಟೋ ಕೂಡ ಅರವಿಂದ್​ ಶೇರ್​ ಮಾಡಿಕೊಂಡಿದ್ದಾರೆ.
ಇದಕ್ಕೆ ಬೆಂಗಳೂರು ನಗರ ಪೊಲೀಸ್​ ಟ್ವಿಟರ್​ ಖಾತೆಯಿಂದ ರಿಟ್ವೀಟ್ ಮಾಡಿದ್ದು, ನಿಮ್ಮ ಹತ್ತಿರದ ಪೊಲೀಸ್​ ಠಾಣೆಗೆ ವಿವರಗಳ ಸಮೇತ ದೂರು ಸಲ್ಲಿಸಿ. ನಿಮಗೆ ಅವರು ನೆರವು ಮಾಡುತ್ತಾರೆ ಎಂದು ಉತ್ತರಿಸಿದ್ದಾರೆ.
Karnatak police se mera Anurodh hai meri wife ko dhundhne Mein madad Karen meri wife Kisi dusre aadami ke sath rahti hai do bacche chhodkar Delhi se Bengaluru Chali gai hai rahti hai Yad Nahi jabardasti Se Rakha Hai Ab pata nahin kahan hai vah@112Karnataka@CPBlr@BlrCityPolicepic.twitter.com/JmqPrAnY9d
— arvind (@arvinds709)July 15, 2022

ಇಬ್ಬರು ಹೆಂಡಿರ ಗೌರಿಬಿದನೂರು ಗಂಡ! ವಿವಾಹಿತೆಗೂ ಮೋಸ ಮಾಡಿ ಮತ್ತೊಂದು ಮದ್ವೆ: ಪತಿಗಾಗಿ ಇಬ್ಬರ ಜಗಳ

ಬೆಂಗಳೂರಿನಲ್ಲಿ ಸಿಸಿಬಿ ದಾಳಿ: ‘ಮಾದಕ’ ಮಹಿಳೆಯರು ಸೇರಿ ಮೂವರು ಅರೆಸ್ಟ್​: 90 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ

ಹೂವಿನ ಹಾರ ನೋಡಿ ಸಿದ್ದು ಗರಂ ಗರಂ: ಬೇಡ್ರಪ್ಪೋ ಬೇಡ… ನನ್​ ಬಳಿ ತರ್ಬೇಡಿ ಎಂದ ಮಾಜಿ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
