ಬೆಂಗಳೂರು: ವರಿಷ್ಠರ ಭೇಟಿಗೆ ಕಾಲಾವಕಾಶ ಕೇಳಿದ್ದು, ನಾಳೆ ಹೋಗಬೇಕೆಂಬ ಚಿಂತನೆಯಿದೆ. ಆದರೆ ಮೊದಲ ದೆಹಲಿ ಪ್ರವಾಸದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗದು. ಮತ್ತೊಂದು ಸುತ್ತಿನ ಪ್ರವಾಸದಲ್ಲಿ ಮಾತುಕತೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳುವ ಮೂಲಕ ಸಚಿವಾಕಾಂಕ್ಷಿಗಳು ಇನ್ನೂ ಕೆಲವು ದಿನ ಕಾಯಬೇಕಾಗುತ್ತದೆ ಎಂಬ ಸುಳಿವು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಳೆ ಬಾಧಿತ ಪ್ರದೇಶದ ಸಮೀಕ್ಷೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಕರೆ ಮಾಡಿ ಶುಭ ಹಾರೈಸುವ ಜತೆಗೆ ಉತ್ತಮ ಆಡಳಿತ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ತೆರಳಿದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಹಿರಿಯ ನಾಯಕರನ್ನು ಭೇಟಿ ಮಾಡಬೇಕೆಂದಿರುವೆ.
ಇದೇ ಅವಕಾಶ ಬಳಸಿಕೊಂಡು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರು, ಸಂಸದರ ಜತೆಗೆ ಸಭೆ ನಡೆಸಿ, ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಪ್ರಸ್ತಾವನೆಗಳು, ನನೆಗುದಿಗೆ ಬಿದ್ದ ಬೇಡಿಕೆಗಳಿಗೆ ತ್ವರಿತ ಅನುಮೋದನೆ ಪಡೆಯುವ ಕುರಿತು ಸಮಾಲೋಚಿಸುವೆ ಎಂದು ಬೊಮ್ಮಾಯಿ‌ ಹೇಳಿದರು.
ಸಿಎಂ ಆಯ್ಕೆ ಮುಗೀತು, ಉಪಚುನಾವಣೆ ರಣತಂತ್ರ ಶುರು: ಹುಬ್ಬಳ್ಳಿಯಲ್ಲಿ ಹೈ ಓಲ್ಟೇಜ್‌ ಮೀಟಿಂಗ್‌

VIDEO: ಇಸ್ಲಾಂಗೆ ವಿರುದ್ಧವಾಗಿ ಜನರನ್ನು ನಗಿಸುತ್ತಿಯಾ ಎಂದು ಖ್ಯಾತ ಹಾಸ್ಯನಟನನ್ನು ಗುಂಡಿಕ್ಕಿ ಕೊಂದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 13 =
Remember me
