ಬೆಳ್ತಂಗಡಿ:ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಂದು ವಿಶೇಷ ದಿನ. ಎರಡು ತಿಂಗಳ ಹಿಂದೆ ಹುಟ್ಟಿದ್ದ ಪುಟಾಣಿಗೆ ನಾಮಕರಣ ಮಾಡಿದ ದಿನವಿದು.
ಹೌದು. ಜುಲೈ1 ರಂದು ಲಕ್ಷ್ಮಿಗೆ ಹುಟ್ಟಿದ ಮರಿಯಾನೆಗೆ ಇಂದು ನಾಮಕರಣದ ಸಂಭ್ರಮ. ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ನಾಮಕರಣ ವಿಧಿ ನೆರವೇರಿಸಿದರು.
Karnataka: The naming ceremony of the newly born baby elephant was performed today at Sri Manjunatha temple, Dharmasthala in Dakshina Kannada district.
Born on 1st July, baby elephant has been named as 'Shivani'.pic.twitter.com/eclyVrd2e3
— ANI (@ANI)August 31, 2020

ತುಲಾ ಲಗ್ನ ಮುಹೂರ್ತದಲ್ಲಿ ಈ ಹೆಣ್ಣುಮರಿಗೆ ಶಿವಾನಿ ಎಂದು ನಾಮಕರಣ ಮಾಡಲಾಯಿತು. ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಶಿವಾನಿ ಹೆಸರು ಉದ್ಘೋಷಿಸುವ ಮೂಲಕ ನಾಮಕರಣ ಮಾಡಲಾಯಿತು.
ಇದನ್ನೂ ಓದಿ:ಕರೊನಾ ಹೆಚ್ಚಳಕ್ಕೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ ಎಂದ ದಿನೇಶ್‌ ಗುಂಡೂರಾವ್‌: ಕಮೆಂಟಿಗರು ಕಿಡಿಕಿಡಿ…
ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣ ಅವರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಿದರು.
ಹೇಮಾವತಿ ವಿ ಹೆಗ್ಹಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸೇರಿದಂತೆ ಕೆಲವರು ಈ ನಾಮಕರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪುನಃ ಗಡಿ ಸಂಘರ್ಷಕ್ಕೆ ಸಜ್ಜಾದ ಕುತಂತ್ರಿ ಚೀನಾ: ನಿಯಮ ಉಲ್ಲಂಘಿಸಿ ಪ್ರಚೋದನೆ

https://www.vijayavani.net/s-rejecting-marriage-murder/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 4 =
Remember me
