ಧಾರವಾಡ:ಸಿಟ್ಟು ಮಾಡಿಕೊಂಡು ತವರಿಗೆ ಹೋದ ಹೆಂಡತಿಯನ್ನು ಮರಳಿ ಕಳುಹಿಸಿಲ್ಲ ಎಂಬ ಕಾರಣಕ್ಕೆ ಮಾವನ ಕತ್ತು ಸೀಳಿಸಿರುವ ಭಯಾನಕ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ದಳವಾಯಿ ತೀವ್ರ ಗಾಯಗೊಂಡ ಮಾವ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದು, ಆಸ್ಪತ್ರೆಯಲ್ಲಿ ಇದ್ದಾರೆ.
ಇವರನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಗದೀಶ್ ಕಂಬಳಿ ಎಂಬ ಅಳಿಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಪ್ಪ ದಳವಾಯಿ ಮಗಳ ಜತೆ ಜಗದೀಶ ಮದುವೆಯಾಗಿತ್ತು. ಆದರೆ ದಂಪತಿ ನಡುವೆ ಕಲಹ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ತವರಿಗೆ ವಾಸಪಾಗಿದ್ದರು.
ಪತ್ನಿಯನ್ನು ಕರೆಯಲು ಜಗದೀಶ್ ತವರಿಗೆ ಬಂದಿದ್ದ. ಆದರೆ ಮಗಳನ್ನು ಕಳುಹಿಸಲು ಶಿವಪ್ಪ ನಿರಾಕರಿಸಿದ್ದರು. ಇದರಿಂದ ಇಬ್ಬರ ನಡುವೆ ಜಗಳವಾಗಿದೆ. ಜಗಳದ ಮಧ್ಯೆ ಅಲ್ಲಿಯೇ ಇದ್ದ ಬ್ಲೇಡ್‌ನಿಂದ ಮಾವನ ಕತ್ತನ್ನು ಜಗದೀಶ್‌ ಸೀಳಿದ್ದಾನೆ. ಇದನ್ನು ತಪ್ಪಿಸಲು ಬಂದ ಮಾವನ ಮಗ ಪ್ರವೀಣ್‌ ಮೇಲೂ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾನೆ. ಅಣ್ಣಿಗೇರಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮೈ ಮುಟ್ಬೇಡಿ, ಫುಲ್‌ ಟೈಟ್‌ ಆಗಿವ್ನಿ…ಲಸಿಕೆಯಿಂದ ತಪ್ಪಿಸಿಕೊಳ್ಳಲು ಬೆಳ್ಳಂಬೆಳಗ್ಗೆ ಗ್ರಾಮಸ್ಥರ ಎಣ್ಣೆ ಸೇವನೆ!
ಮೈಸೂರಲ್ಲೊಂದು ಭಯಾನಕ ಕೃತ್ಯ: ಜಗಳ ಬಿಡಿಸಲು ಬಂದ ಬಾಮೈದುನನ ಕೈ ಕತ್ತರಿಸಿ ಠಾಣೆಗೆ ತಂದ ಬಾವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + fourteen =
Remember me
