ಬೆಂಗಳೂರು:ತಾವು ಕೆಲಸ ಮಾಡುವ ಆಸ್ಪತ್ರೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೋವಿಡ್ ಸೋಂಕಿತರ ಕೈಹಿಡಿದು ತಮ್ಮ‌ ನೃತ್ಯದ ಮೂಲಕ ಧೈರ್ಯವಾಗಿರಲು ಹುರಿದುಂಬಿಸಿದ ಸಚಿವ ಸುರೇಶ್ ಕುಮಾರ್‌ ಅವರ ವೈದ್ಯೆ ಪುತ್ರಿ ಡಾ.ದಿಶಾ.ಎಸ್.ಕುಮಾರ್ ತಮ್ಮ ನಡೆಯಿಂದ ಮಾದರಿಯಾಗಿದ್ದಾರೆ.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಕೆಲ ಕೋವಿಡ್ ಸೋಂಕಿತರು ವೈದ್ಯಕೀಯ ಶುಶ್ರೂಶೆಯ ಬಳಿಕವೂ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬಲು ಈ ರೀತಿ ಅಚಾನಕ್ಕಾದ ನಡೆಯನ್ನು ಅನುಸರಿಸಿದೆವು. ಸೋಂಕಿತರೊಬ್ಬರ ಕೈ ಹಿಡಿದು ಅವರ ಜೊತೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದೆವು.
ನಾನು ಸತ್ತು ಹೋಗ್ತೇನೆ ಅಂತ ಭಯಭೀತನಾಗಿ ಮಲಗಿದ್ದ ಯುವಕನೊಬ್ಬ ನಮ್ಮೊಂದಿಗೆ ನೃತ್ಯ ಮಾಡಿದ್ದು, ತದನಂತರದಲ್ಲಿ ಆತ ತನ್ನ ಖಾಯಿಲೆಯಿಂದ ಚೇತರಿಸಿಕೊಂಡಿದ್ದು ಒಬ್ಬ ವೈದ್ಯೆಯಾಗಿ ನನಗೆ ಅತೀವ ತೃಪ್ತಿ ತಂದ ವಿಷಯ ಎಂದು ಡಾ.ದಿಶಾ.ಎಸ್.ಕುಮಾರ್ ಹೇಳಿದರು.
ಡಾ. ದಿಶಾರ ನೃತ್ಯವನ್ನು ನೀವೂ ನೋಡಬಹುದು:
ಕೋವಿಡ್‌ನಿಂದ ಸಾವಿನ ಭೀತಿಯಲ್ಲಿದ್ದವರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪುತ್ರಿ ಡಾ.ದಿಶಾರಿಂದ ‘ನೃತ್ಯ ಚಿಕಿತ್ಸೆ’. ವೈದ್ಯೆಯಾಗಿರುವ ದಿಶಾರವರು ನೃತ್ಯದ ಮೂಲಕ ಸೋಂಕಿತರಿಗೆ ಹುರಿದುಂಬಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ…#drdishasuresh#dance#covidpatientspic.twitter.com/0saOTMJ4il
— Vijayavani (@VVani4U)May 23, 2021

ದ್ವಿತೀಯ ಪಿಯು ಮಕ್ಕಳು ಪ್ರಶ್ನೆ ಪತ್ರಿಕೆ ಮನೆಗೆ ಒಯ್ದು 5 ದಿನಗಳಲ್ಲಿ ಉತ್ತರ ಬರೀಬೋದು- ಇದೆಲ್ಲಿ ಗೊತ್ತಾ?

ನಾನು ಶ್ಯೂರಿಟಿ ಹಾಕಿದ ಸಾಲಗಾರ ಹಣ ಪಾವತಿಸದೇ ಮೃತಪಟ್ಟರೆ ಕಾನೂನಿನಡಿ ಏನು ಪರಿಹಾರವಿದೆ?

ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್ ಆಗಿ ಆಯ್ಕೆಯಾದ ಕೊಳ್ಳೇಗಾಲದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
