ನನ್ನ ಮದುವೆಯಾಗಿ ಮೂರು ವರ್ಷಗಳಾಗಿದೆ. ನನ್ನ ಹೆಂಡತಿ ಮದುವೆಯಾದ ಮೂರು ದಿನಕ್ಕೆ ತವರಿಗೆ ಹೋದವಳು ಈವರೆಗೂ ಬಂದಿರುವುದಿಲ್ಲ. ವಿಚ್ಛೇದನಕ್ಕೂ ಒಪ್ಪುತ್ತಿಲ್ಲ. ಒಂದೇ ಊರಿನಲ್ಲೇ ಇದ್ದರೂ , ತನ್ನ ತವರಿನಲ್ಲೇ ಇದ್ದಾಳೆ. ನಾನು ವಿಚ್ಛೇದನ ಕೇಳಲು ಸಾಧ್ಯವೆ?
ಉತ್ತರ:ನೀವು ವಿಚ್ಛೇದನಕ್ಕೆ ಪ್ರಕರಣ ದಾಖಲಿಸಬಹುದು. ದಾಂಪತ್ಯ ಜೀವನದ ಸಾಂಗತ್ಯ ಕೊಡದಿರುವುದೂ ಕ್ರೂರತೆಯೇ ಆಗುತ್ತದೆ.ಜೊತೆಗೆ ಎರಡು ವರ್ಷಕ್ಕೂ ಮೀರಿ ಆಕೆ ನಿಮ್ಮಿಂದ ಯಾವುದೇ ಸಕಾರಣವಿಲ್ಲದೆ , ಬೇರೆ ಇದ್ದಾಳೆ ಎನ್ನುವುದನ್ನು ನೀವು ಸಾಬೀತು ಪಡಿಸಿದರೆ ಆ ಆಧಾರದ ಮೇಲೂ ನಿಮಗೆ ವಿಚ್ಛೇದನ ಸಿಗುತ್ತದೆ.
ಯಾವುದಕ್ಕೂ ಮೊದಲು ಒಮ್ಮೆ ನಿಮ್ಮ ತಾಲ್ಲೂಕಿನ ನ್ಯಾಯಾಲಯದ ಮಧ್ಯಸ್ಥಿಕಾ ಕೇಂದ್ರಕ್ಕೆ ನಿಮ್ಮಿಬ್ಬರ ಮಧ್ಯೆ ಇರುವ ದಾಂಪತ್ಯ ಜೀವನದ ಸಮಸ್ಯೆ ಪರಿಹರಿಸಲು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಿಕೊಡಿ ಎಂದು ಅರ್ಜಿ ಕೊಡಿ. ಅಲ್ಲಿ ಇಬ್ಬರನ್ನೂ ಕರೆಯಿಸುತ್ತಾರೆ. ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನಿಮ್ಮ ಸಮಸ್ಯೆಗೆ ಸುಲಭವಾದ ಪರಿಹಾರ ಸಿಗಲೂ ಬಹುದು.
15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

ಅಮ್ಮನ ದಿನ ಸಾಕೆ? ಪತ್ನಿಯ ದಿನವೂ ಇರಲಿ ಎಂದ ‘ನ್ಯಾಯ‘ ಸಚಿವರು ಕೊಟ್ಟದ್ದು ಈ ಕಾರಣ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
