ಬೆಂಗಳೂರು:ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಪ್ರಮುಖ ಆರೋಪಿ ಎಸ್​ಡಿಪಿಐ ಪಕ್ಷದ ಮುಜಾಮಿಲ್ ಪಾಷನನ್ನು ಬಂಧಿಸಲಾಗಿದ್ದು, ಇದರ ಬೆನ್ನಲ್ಲೇ ಪಕ್ಷದ ಸದಸ್ಯನಾಗಿರುವ ಅಯಾಜ್‌ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.
ಕುತೂಹಲದ ಸಂಗತಿ ಎಂದರೆ, ಈತ ತಾನು ಪೊಲೀಸರ ಪರವಾಗಿರುವುದಾಗಿ ನಂಬುವಂತೆ ಮಾಡಿದ್ದ. ತಾನು ಗಲಭೆಯನ್ನು ನಿಯಂತ್ರಿಸಲು ಸಹಾಯ ಮಾಡುವಂತೆ ಪೊಲೀಸರ ಪರವಾಗಿ ನಿಂತುಕೊಂಡಿದ್ದ.
ನಂತರ ಗಲಭೆ ನಿಯಂತ್ರಣಕ್ಕೆ ಮೈಕ್‌ ಅಳವಡಿಸಿದ ಬಳಿಕ ಗಲಾಟೆಯಲ್ಲಿ ತಾನೂ ಭಾಗಿಯಾಗಿ ಗಲಭೆಗೆ ಪ್ರಚೋದನೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮಾತ್ರವಲ್ಲದೇ ಗಲಭೆ ಸೃಷ್ಟಿಸಲು ನೂರಕ್ಕೂ ಅಧಿಕ ಮಂದಿಯನ್ನು ಕರೆದುಕೊಂಡು ಬಂದಿದ್ದು, ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡಿರುವ ವಿಷಯ ಬೆಳಕಿಗೆ ಬಂದಿದೆ.
ಗಲಭೆ ವೇಳೆ ನಡೆಸಲಾಗಿರುವ ವಿಡಿಯೋ ಚಿತ್ರೀಕರಣದ ಆಧಾರದ ಮೇಲೆ ಈತನನ್ನು ಬಂಧಿಸಿರುವ ಪೊಲೀಸರು, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.
ಇದಾಗಲೇ ಎಸ್​ಡಿಪಿಐ ಪಕ್ಷದಿಂದ ವಾರ್ಡ್ ನಂಬರ್ 60ರ ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಿದ್ದ ಮುಜಾಮಿಲ್ ಪಾಷ ಬಂಧಿಸಲಾಗಿದ್ದು, ಈತನ ಬಗ್ಗೆಯೂ ವಿಚಾರಣೆ ಮುಂದುವರೆದಿದೆ. ಮುಜಾಮಿಲ್ ಪಾಷ, ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಾಲಗಿರುವ ಗಲಭೆ ಪ್ರಕರಣದ ಎ ಒನ್ ಅರೋಪಿ ಎನ್ನಲಾಗಿದ್ದು, ಅಯಾಜ್‌ನಲ್ಲಿ ಎ-2 ಆರೋಪಿ ಎಂದು ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:ಡಿಜೆ ಹಳ್ಳಿ ಗಲಭೆಗೆ ಕಾರಣವೇನು? ಪೊಲೀಸ್​ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ?
ಡಿಜೆ ಹಳ್ಳಿ ಗಲಭೆ ಸಂಬಂಧ ಹಿರಿಯ ಆಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಇಬ್ಬರು ಹೆಚ್ಚುವರಿ‌ ಪೊಲೀಸ್ ಆಯುಕ್ತರು ಹಾಗೂ ಓರ್ವ ಡಿಸಿಪಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಪ್ರಕರಣದ ಹಿಂದೆ ಯಾವ ಸಂಘಟನೆ ಹಾಗೂ ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಕೆಲವು ರೌಡಿಗಳು ಘಟನೆಯಲ್ಲಿ ಭಾಗಿಯಾಗಿರೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹಳೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪಟ್ಟಿ ಮಾಡಿ ಬಂಧನಕ್ಕೆ ಬಲೆ ಬೀಸಲಾಗಿದೆ.
ಕರೊನಾದಿಂದ ಸಿದ್ದರಾಮಯ್ಯ ಗುಣಮುಖ- ನಾಳೆ ಬಿಡುಗಡೆ: ನಾಲ್ಕು ದಿನ ಕ್ವಾರಂಟೈನ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 14 =
Remember me
