ಬೆಂಗಳೂರು:ಫೇಸ್‌ಬುಕ್‌ನಲ್ಲಿ ಹಿಂದೂ ದೇವತೆ ವಿರುದ್ಧ ಹಾಕಿದ್ದ ಪೋಸ್ಟ್‌ ಒಂದಕ್ಕೆ ಪ್ರತಿಯಾಗಿ ಪೈಗಂಬರ್‌ ವಿರುದ್ಧ ಹಾಕಿದ್ದ ಕಮೆಂಟ್‌ ಒಂದನ್ನೇ ನೆಪಮಾಡಿಕೊಂಡು ಇಡೀ ಡಿಜೆಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲಭೈರಸಂದ್ರದಲ್ಲಿ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳಿಂದಲೇ ಆಸ್ತಿಪಾಸ್ತಿ ನಷ್ಟವನ್ನು ವಸೂಲು ಮಾಡುವ ಬಗ್ಗೆ ಇದಾಗಲೇ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.
ಉತ್ತರ ಪ್ರದೇಶದ ಮಾದರಿಯಲ್ಲಿಯೇ ಇಂಥ ಗಲಭೆಗಳು ನಡೆದಾಗ ಗಲಭೆಕೋರರಿಂದಲೇ ನಷ್ಟವನ್ನು ಭರ್ತಿ ಮಾಡುವ ಪದ್ಧತಿಗೆ ಕರ್ನಾಟಕ ಮುಂದಾಗಿದೆ. ಇದೀಗ ಮುಂದಿನ ಪ್ರಕ್ರಿಯೆಯಾಗಿ ಗಲಭೆ ವೇಳೆ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ವಾಹನಗಳನ್ನು ಹಾನಿ ಮಾಡಿದವರಿಂದಲೇ ನಷ್ಟ ಭರಿಸುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರನ್ನು ಕ್ಲೇಮ್ ಕಮೀಷನರ್ ಆಗಿ ಹೈಕೋರ್ಟ್ ನೇಮಿಸಿದೆ.
ಇದನ್ನೂ ಓದಿ:ಮೂರು ಬಾರಿ ಕಳುವಾಯ್ತು ಬಿಯರ್‌ ಹಿಡಿದ ಹುಡುಗನ ಪೇಂಟಿಂಗ್‌! ಏನಿದರ ವಿಶೇಷತೆ?
ಗಲಭೆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಯಲ್ಲಿ ಎಷ್ಟು ನಷ್ಟವಾಗಿವೆ? ವಾಹನಗಳು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ? ಇದರ ಮೌಲ್ಯ, ಒಟ್ಟು ನಷ್ಟದ ಅಂದಾಜು ಕುರಿತಂತೆ ತನಿಖೆ ನಡೆಸುವಂತೆ ಕೋರ್ಟ್‌ ಸೂಚನೆ ನೀಡಿದೆ.
ವಿಡಿಯೋ ಮೂಲಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವುದು ಹಾಗೂ ನ್ಯಾಯಾಲಯಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಬೇಕೆಂದು ಕೋರ್ಟ್‌ ಇದೇ ವೇಳೆ ಹೇಳಿದೆ. ಕ್ಲೇಮ್‌ ಕಮಿಷನರ್‌ ಅವರಿಗೆ ಎಲ್ಲಾ ರೀತಿಯ ಸೌಕರ್ಯ, ಸಿಬ್ಬಂದಿ, ವಾಹನ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ಆದೇಶಿಸಿದೆ.
ಇದೇ ವೇಳೆ ತಮ್ಮ ಆಸ್ತಿ, ವಾಹನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸುವಂತೆ ಕೋರ್ಟ್‌ ಸರ್ಕಾರಕ್ಕೆ ಸೂಚಿಸಿದೆ.
ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್? ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ ಸಂಚಲನ!

ಕುಲ್‌ಭೂಷಣ್‌ ಜಾಧವ್‌ ಪರ ವಾದಿಸಲು ಭಾರತದ ವಕೀಲರನ್ನು ಬಿಡಲ್ಲ ಎಂದ ಪಾಕ್‌!

ಕಚೇರಿಯಲ್ಲಿಯೇ ಕುಷ್ಟಗಿ ತಹಶೀಲ್ದಾರನಿಂದ ‘ಕಿಸ್‌’ ಪಡೆದ ಸಂತ್ರಸ್ತೆಯಿಂದ ಇದೀಗ ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
