ಬೆಂಗಳೂರು:ಫೇಸ್‌ಬುಕ್‌ನಲ್ಲಿ ಹಾಕಿದ್ದ ಕಮೆಂಟ್‌ ಒಂದನ್ನೇ ನೆಪವಾಗಿಟ್ಟುಕೊಂಡು ಕೆಲವರು ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸಿರುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನೇಮಕಗೊಂಡಿರುವ ಸತ್ಯಶೋಧನಾ ಸಮಿತಿ ವರದಿಯನ್ನು ಸಿದ್ಧಪಡಿಸಿದೆ.
ಈ ವರದಿಯನ್ನು ಇಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಸಮಿತಿ ನೀಡಿದೆ. ಸಿಟಿಜನ್ ಫಾರ್ ಡೆಮಾಕ್ರಸಿ ಸಂಘಟನೆಯ ಸತ್ಯಶೋಧನಾ ಸಮಿತಿಯ ಅಧ್ಯಕ್ಷರಾದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಬಬಲಾಡಿ ನೇತೃತ್ವದಲ್ಲಿ ಈ ಸಮಿತಿ ವಿಚಾರಣೆ ಕೈಗೊಳ್ಳಲಾಗಿತ್ತು. ಇದರ 49 ಪುಟಗಳ ವರದಿಯನ್ನು ಇಂದು ನೀಡಲಾಗಿದೆ.
ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯ ಘಟನೆಗೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳೇ ನೇರ ಕಾರಣ, ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳ ಮುಖಂಡರ ಕುಮ್ಮಕ್ಕಿನಿಂದಲೇ ಕೃತ್ಯ ನಡೆದಿದೆ ಎಂದಿರುವ ಸತ್ಯಶೋಧನಾ ಸಮಿತಿ, ಇವುಗಳನ್ನು ನಿಷೇಧ ಮಾಡಬೇಕು ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ:ಮೂರು ವಾರಗಳಲ್ಲಿ ಮೂವರು ಬಾಲಕಿಯರ ರೇಪ್‌- ಮರ್ಡರ್‌: ಭಯದಲ್ಲಿ ಪಾಲಕರು
ಗಲಭೆ ಪೂರ್ವನಿಯೋಜಿತ (ಅಂದರೆ ಫೇಸ್‌ಬುಕ್‌ ಕಮೆಂಟ್‌ ಒಂದು ನೆಪಮಾತ್ರ). ಡಿಜೆಹಳ್ಳಿ ಮತ್ತು ಕೆಜಿಹಳ್ಳಿಯಲ್ಲಿರುವ ಕೆಲವು ಹಿಂದೂ ಪ್ರಮುಖ ನಾಯಕರು ಹಾಗೂ ಅವರ ಆಸ್ತಿಪಾಸ್ತಿಗಳನ್ನು ಗುರಿಯಾಗಿಸಿಕೊಂಡೇ ಗಲಭೆ ಸೃಷ್ಟಿಸಲಾಗಿದೆ. ಈ ಎರಡು ಸಂಘಟನೆಗಳನ್ನು ಕೂಡಲೇ ಬ್ಯಾನ್‌ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗಬಹುದು ಎಂದಿದೆ. ಈ ಘಟನೆಯಲ್ಲಿ ಸರ್ಕಾರಿ ವಾಹನಗಳು, 300 ಖಾಸಗಿ ವಾಹನಗಳು ಸುಟ್ಟುಹೋಗಿದ್ದು, ಇದರಿಂದ ಸುಮಾರು 10ರಿಂದ 15 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಅಂದಾಜು ಅಂಕಿ ಅಂಶ ನೀಡಲಾಗಿದೆ.
ಈ ಸಂಘಟನೆಗಳಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಬಗ್ಗೆ ಇದಾಗಲೇ ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದರು. ಅದರ ಬಗ್ಗೆ ಸತ್ಯಶೋಧನಾ ಸಮಿತಿ ಕೂಡ ವಿಚಾರಣೆ ಮಾಡಿದ್ದು ಈ ಉಗ್ರಗಾಮಿ ಸಂಘಟನೆಗಳಿಗೆ ದೇಶ, ವಿದೇಶಗಳಿಂದ ದೊಡ್ಡ ಮಟ್ಟದಲ್ಲಿ ಹಣ ಹರಿದುಬರುತ್ತದೆ ಎಂಬ ಬಗ್ಗೆ ಹೇಳಿದೆ. ಆದರೆ ಇದರ ಮೂಲ, ಹಣ ಇವರ ಕೈಸೇರುತ್ತಿರುವುದು ಹೇಗೆ? ಏತಕ್ಕಾಗಿ ಈ ರೀತಿ ಗಲಭೆ ಸೃಷ್ಟಿಸುವ ಹುನ್ನಾರ ನಡೆದಿದೆ ಎಂಬಿತ್ಯಾದ ಕುರಿತು ರಾಷ್ಟ್ರೀಯ ತನಿಖಾದಳ (ಎನ್‍ಐಎ) ತನಿಖೆ ನಡೆಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು ಇಂದು ಮುಖ್ಯಮಂತ್ರಿ@bsybjpಅವರಿಗೆ ಸಲ್ಲಿಸಿತು.
ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.pic.twitter.com/95Hx8aGSHj
— CM of Karnataka (@CMofKarnataka)September 4, 2020

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಬಿತ್ತುವ ಪೋಸ್ಟ್‌ಗಳನ್ನು ಹಾಕುವವರ ಮೇಲೆ ನಿಯಂತ್ರಣ ಹೇರಬೇಕಾಗಿದೆ. ಉಗ್ರ ಸಂಘಟನೆಗಳಿಗೆ ನಿರಾತಂಕವಾಗಿ ಡ್ರಗ್ಸ್ ಪೂರೈಕೆ ನಡೆಯುತ್ತಿದ್ದು, ಈ ಜಾಲಗಳ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಆಧುನೀಕರಣದ ಅಗತ್ಯವಿದೆ ಎಂದಿದೆ.
ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು. ಗಲಭೆಕೋರರಿಂದಲೇ ನಷ್ಟವನ್ನು ಭರ್ತಿ ಮಾಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಸಮಿತಿ ಹೇಳಿದ್ದು, ಈ ಕುರಿತು ಅವರೂ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ.
ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

ಪ್ರಧಾನಿ, ಸಚಿವರೆಲ್ಲಾ ಮಂಚಕೆ ಕರೆದಿದ್ದರು ಎಂದ ಸುಂದರಿಯನ್ನು ದೇಶದಿಂದಲೇ ಹೊರದಬ್ಬಿದ ಪಾಕ್‌!

ನರೇಂದ್ರ ಮೋದಿಯನ್ನು ಸಾಯಿಸಿ: ತನಿಖಾ ಸಂಸ್ಥೆಗೆ ಬಂದಿತೊಂದು ಮೇಲ್‌- ಕಳಿಸಿದವರ್ಯಾರು?

ನರೇಂದ್ರ ಮೋದಿಯನ್ನು ಸಾಯಿಸಿ: ತನಿಖಾ ಸಂಸ್ಥೆಗೆ ಬಂದಿತೊಂದು ಮೇಲ್‌- ಕಳಿಸಿದವರ್ಯಾರು?

ತ್ಯಾಜ್ಯ ನಿರ್ವಹಣೆ: ಬೆಂಗಳೂರಿಗೆ ಇನ್ನೊಂದು ಪ್ರಶಸ್ತಿಯ ಗರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
